ಉಡುಪಿ: ರಾಘವೇಂದ್ರ ಸ್ವಾಮಿ ಮಠದಲ್ಲಿ ಕೈಮುಗಿಯುವ ವೇಳೆ ಕುಸಿದು ಬಿದ್ದು ಸಾವು
Udupi News: ಉಡುಪಿ: ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೇವರಿಗೆ ಕೈ ಮುಗಿಯುವ ವೇಳೆಯಲ್ಲಿ ಭಕ್ತರೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಕುಂಜಿಬೆಟ್ಟುವಿನ ಶಿವಳ್ಳಿ ಗ್ರಾಮದಲ್ಲಿ ವಾಸವಿದ್ದ ಅನಂತ ಕೃಷ್ಣ ಪ್ರಸಾದ್ (40 ವರ್ಷ) ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ವರ್ಷಗಳಿಂದಲೂ ಉಡುಪಿಯ ಪುತ್ತಿಗೆ ಮಠದಲ್ಲಿ ಕೆಲಸದಲ್ಲಿದ್ದರು.
Also Read: ಸರಕಾರಿ ಜಾಗದಿಂದ ಸಿಲಿಕಾನ್ ಮರಳು ಅಕ್ರಮ ಸಾಗಾಟ : ಪ್ರಕರಣ ದಾಖಲು
ಅಕ್ಟೋಬರ್ 7 ರಂದು ಸಂಜೆ ಸುಮಾರು 5:45 ಗಂಟೆಗೆ ಉಡುಪಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅನಂತ ಕೃಷ್ಣ ಪ್ರಸಾದ್ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು ಅವರನ್ನು ಉಪಚರಿಸಿ ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ, ವೈದ್ಯರು ಪರೀಕ್ಷಿಸಿದಾಗ ಅವರು ಆಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅನಂತ ಕೃಷ್ಣ ಪ್ರಸಾದ್ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೃತರ ಪತ್ನಿ ಉಮಾ ಪ್ರಸಾದ್ ಉಡುಪಿ(Udupī) ನಗರ ಪೊಲೀಸ್ ಠಾಣೆಗೆ ದೂರು ನೀಇಡದ್ದರು. ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Also Read: ತೆಕ್ಕಟ್ಟೆ : ಸಾಲಬಾಧೆ ಪಂಚಾಯತ್ ಆವರಣದಲ್ಲೇ ಮಹಿಳೆ ಆತ್ಮಹತ್ಯೆ



