ಉಡುಪಿ: ಹೋಟೆಲ್ ರೂಂನಲ್ಲಿ ಒಡಿಸ್ಸಾ ಉದ್ಯಮಿ ಅನುಮಾನಾಸ್ಪದ ಸಾವು

Udupi News: ಉಡುಪಿ: ಕೃಷಿ ಯಂತ್ರೋಪಕರಣಗಳ ವ್ಯವಹಾರದ ನಿಮಿತ್ತ ಒಡಿಸ್ಸಾದಿಂದ ಬಂದಿದ್ದ ಉದ್ಯಮಿಯೋರ್ವರು ಹೋಟೆಲ್‌ ರೂಂನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉದ್ಯಮಿ ಹರೀಶ್ ಕುಮಾರ್ ಮಾಲ್ವಿಯಾ (54 ವರ್ಷ) ಎಂಬವರೇ ಮೃತಪಟ್ಟವರು. ಒಡಿಸ್ಸಾ ಮೂಲದ ಹರೀಶ್ ಕುಮಾರ್ ಮಾಲ್ವಿಯಾ ಅವರು ಪಾಲುದಾರ ಮನಮೋಹನ ತ್ರಿಪಾಠಿ ಅವರ ಜೊತೆಗೆ ಸೆಪ್ಟೆಂಬರ್ 26, 2025 ರಂದು ಉಡುಪಿಯ ಕಿದಿಯೂರು ಹೋಟೆಲ್ ನಲ್ಲಿ ತಂಗಿದ್ದರು.

Also Read: ಕಾರ್ಕಳದಲ್ಲಿ ಭೀಕರ ದುರಂತ: ನೀರಿನ ಟ್ಯಾಂಕ್ ಬಿದ್ದು ಕಾರ್ಮಿಕ ಸಾವು

ಅಕ್ಟೋಬರ್ 09, 2025 ರ ಮುಂಜಾನೆ 2:55 ಗಂಟೆ ಸುಮಾರಿಗೆ ಮನಮೋಹನ ತ್ರಿಪಾಠಿ ಅವರು ಎಚ್ಚರವಾದಾಗ ಹರೀಶ್ ಕುಮಾರ್ ಅವರು ಹಾಸಿಗೆಯಲ್ಲಿ ಇರಲಿಲ್ಲ. ಬಾತ್‌ರೂಮ್ ಬಾಗಿಲು ಅರ್ಧ ತೆರೆದಿದ್ದು, ಒಳಗೆ ಹೋದಾಗ ಹರೀಶ್ ಅವರು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಅವರನ್ನು ಸರ್ಕಾರಿ ಜಿಲ್ಲಾಸ್ಪತ್ರೆ ಅಜ್ಜರಕಾಡಿಗೆ ಕರೆದೊಯ್ಯಲಾಗಿದೆ. ಆದರೆ ದಾರಿ ಮಧ್ಯದಲ್ಲಿಯೇ ಹರೀಶ್‌ ಮೃತಪಟ್ಟಿರುವ ಕುರಿತು ತಿಳಿಸಿದ್ದಾರೆ. ಈ ಕುರಿತು ಉಡುಪಿ(Udupi) ನಗರ ಪೊಲೀಸ್‌ ಠಾಣೆಗೆ ಹರೀಶ್‌ ಅವರ ಮತ ಭವಿಕ್‌ ಮಾಲ್ವಿಯ ದೂರು ನೀಡಿದ್ದಾರೆ.

Also Read: ಉಡುಪಿ: ರಾಘವೇಂದ್ರ ಸ್ವಾಮಿ ಮಠದಲ್ಲಿ ಕೈಮುಗಿಯುವ ವೇಳೆ ಕುಸಿದು ಬಿದ್ದು ಸಾವು

ಮೃತದೇಹದ ಮರಣೋತ್ತರ ಕಾರ್ಯ ನಡೆಸಲಾಗಿದೆ. ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories