ಶನಿವಾರ, ಜೂನ್ 21, 2025

Monthly Archives: ಫೆಬ್ರವರಿ, 2020

ಕಿವಿಸ್ ವಿರುದ್ದ ಮುಗ್ಗರಿಸಿದ ಭಾರತ : ವಿಶ್ವ ಟೆಸ್ಟ್ ಸರಣಿಯಲ್ಲಿ ಕೊಯ್ಲಿ ಪಡೆಗೆ ಮೊದಲ ಸೋಲು

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹತ್ತು ವಿಕೆಟ್ ಗಳ ಅಂತರದ ಹೀನಾಯ ಸೋಲು ಅನುಭವಿಸಿದೆ. ಮೂರನೇ ದಿನದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 144 ರನ್...

ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ : ಅಹಮದಾಬಾದ್ ಗೆ ಮೋದಿ, ಪ್ರೇಮಸೌಧಕ್ಕೂ ಭೇಟಿ

ನವದೆಹಲಿ : ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಟ್ರಂಪ್ ಸ್ವಾಗತಿಸೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ ಗೆ ಭೇಟಿ ನೀಡಿದ್ದಾರೆ. ವಿಶ್ವದ ಅತೀ ದೊಡ್ಡ ಮೊಟೆರಾ ಕ್ರೀಡಾಂಗಣವನ್ನ...

ಬೆಂಗಳೂರಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ

ಬೆಂಗಳೂರು : 1993ರ ಮುಂಬಯಿ ಸರಣಿ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ರವಿ ಪೂಜಾರಿಯನ್ನು ಬಿಗಿ ಭದ್ರತೆಯೊಂದಿಗೆ ಬೆಂಗಳೂರಿಗೆ ಕರೆ ತರಲಾಗಿದೆ. ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು...

ನಡುರಾತ್ರಿ ವಿಷಜಂತು ಕಡಿದವನ ಪ್ರಾಣ ಉಳಿಸಿದ ಯುವಕ : 38 ನಿಮಿಷಗಳಲ್ಲಿ 58 ಕಿ.ಮೀ. ವಾಹನ ಚಲಾಯಿಸಿದ ಆಪತ್ಬಾಂಧವ !

ಬೆಳ್ತಂಗಡಿ : ಮಧ್ಯ ರಾತ್ರಿ ವ್ಯಕ್ತಿಯೋರ್ವನಿಗೆ ವಿಷಜಂತು ಕಡಿದಿತ್ತು. ಆದರೆ ಆ ಊರಲ್ಲಿ ಯಾವುದೇ ಆಸ್ಪತ್ರೆಯಿರಲಿಲ್ಲ. ಆ ಹೊತ್ತಲ್ಲೇ ಯುವಕನೋರ್ವ ತನ್ನ ವಾಹದಲ್ಲಿ ವ್ಯಕ್ತಿಯನ್ನು ಕೂರಿಸಿಕೊಂಡು ಕೇವಲ 38 ನಿಮಿಷಗಳಲ್ಲಿ ಬರೋಬ್ಬರಿ 58...

ಪ್ರೊಬೆಷನರಿ ಅಬಕಾರಿ ಪಿಐಎಸ್ ಆತ್ಮಹತ್ಯೆ !

ಬೀದರ್ : ಅಬಕಾರಿ ಮಹಿಳಾ ಪ್ರೊಬೆಷನರಿ ಪಿಎಸ್ ಐ ಅಧಿಕಾರಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ರೇಖಾ ಕರಣಕುಮಾರ್ ಕೋರಿ ಎಂಬವರೇ...

ವಿಶ್ವದ ಅತೀ ದೊಡ್ಡ ‘ಮೊಟೆರಾ’ ಕ್ರೀಡಾಂಗಣದ ವಿಶೇಷತೆ ನಿಮಗೆ ಗೊತ್ತಾ

ಅಹಮದಾಬಾದ್ : ಭಾರತ ನಾಳೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ನಿರ್ಮಾಣಗೊಂಡಿರೋ ವಿಶ್ವದ ಅತೀ ದೊಡ್ಡ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೋಕಾರ್ಪಣೆ...

ನಾವು ಕಾಳಿಕಾದೇವಿಯ ಮಕ್ಕಳು.. ಮಸಣ ರುದ್ರಿಯ ಒಕ್ಕಲು ಅಂತ ಚೀರಿದ್ದ… ನನ್ನ ಗೆಳೆಯ ಬೆಚ್ಚಿಬಿದ್ದಿದ್ದ..!ಭಾಗ-9

ನನ್ನ ಎದುರಿಗೆ ಮಂದವಾದ ಜ್ಯೋತಿಗಳ ಬೆಳಕಿನಲ್ಲಿ ರೌದ್ರವಾಗಿ ಕಾಣುವ ಕಾಳಿಕಾ ದೇವಿ ತನ್ನ ಕೆಂಪು ನಾಲಿಗೆಯನ್ನು ಹೊರ ಚಾಚಿಕೊಂಡು ಭೀಕರವಾಗಿ ಕಾಣಿಸುತ್ತಿದ್ಲು. ಆಕೆಯ ವಿಗ್ರಹವನ್ನು ನೋಡಿದ್ದ ನಾನೇ ಒಮ್ಮೆ ಬೆಚ್ಚಿದ್ದೆ… ಇನ್ನು ಮಾಂತ್ರಿಕ ಕೃಷ್ಣಪ್ಪ...

ಪತ್ನಿಯ ಹತ್ಯೆಗೈದ ವೈದ್ಯನ ಪ್ರಿಯತಮೆ ಆತ್ಮಹತ್ಯೆ ! ಕವಿತಾ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು

ಬೆಂಗಳೂರು : ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ದರೋಡೆಯ ನಾಟಕವಾಡಿದ್ದ ದಂತವೈದ್ಯ ಡಾ.ರೇವಂತ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ. ಕವಿತಾ ಕೊಲೆ ರಹಸ್ಯವನ್ನು ಪೊಲೀಸರು ಬೇಧಿಸುತ್ತಲೇ ರೇವಂತ್ ಪ್ರಿಯತಮೆ ಹರ್ಷಿತಾ (35 ವರ್ಷ) ಕೂಡ ನೇಣಿಗೆ...

ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಯ್ತು ಅಪಾಯಕಾರಿ ಡ್ರಗ್ಸ್ : ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಡ್ರಗ್ಸ್ ಸಾಗಾಟ

ಬೆಂಗಳೂರು : ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ ಮಧುರೈನಿಂದ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 5 ಕೆ.ಜಿ. ತೂಕದ ಎಫ್ರಿಡಿನ್ ಅಪಾಯಕಾರಿ ಮಾದಕವಸ್ತು ಕಳ್ಳಸಾಗಾಣಿಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಮಂತ್ರಣ ಪತ್ರಿಕೆಯಲ್ಲಿ ಎಫ್ರಿಡಿನ್ ಮಾದಕ...

ಎಸ್ಎಸ್ಎಲ್ ಸಿ ವಿಜ್ಞಾನ ಪತ್ರಿಕೆಯೂ ಲೀಕ್ ! Hello ಆಪ್ ನಲ್ಲಿ ಹರಿದಾಡುತ್ತಿದೆ ಪ್ರಶ್ನೆಪತ್ರಿಕೆ

ಬೆಂಗಳೂರು : ರಾಜ್ಯದಾದ್ಯಂತ ಪ್ರೌಢಶಾಲಾ ಶಿಕ್ಷಣ ಮಂಡಳಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುತ್ತಿದೆ. ಸೋಮವಾರ ವಿಜ್ಞಾನ ಪರೀಕ್ಷೆ ನಡೆಯಲಿದೆ. ಆದರೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ‘ಹಲೋ’ ಸೋಶಿಯಲ್ ಮೀಡಿಯಾ ಆಪ್ ನಲ್ಲಿ...
- Advertisment -

Most Read