ಮೂಡಬಿದಿರೆ : ಕಾಲೇಜು ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರಿಂದ ಅತ್ಯಾಚಾರ, ಮೂವರು ಅರೆಸ್ಟ್‌

Moodabidre college : ಬೆಂಗಳೂರು : ಮೂಡಬಿದಿರೆಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಇಬ್ಬರು ಉಪನ್ಯಾಸಕರು ಸೇರಿ ಮೂವರು ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿ ಇದೀಗ ಪ್ರಕರಣ ದಾಖಲಿಸಿದ್ದು, ಬೆಂಗಳೂರಲ್ಲಿ ಮೂವರನ್ನು ಬಂಧಿಸಲಾಗಿದೆ. ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್‌ ಹಾಗೂ ಅವರ ಗೆಳೆಯ ಅನೂಪ್‌ ಎಂಬವರೇ ಬಂಧನಕ್ಕೆ ಒಳಗಾದವರು.

ಮೂಡಬಿದಿರೆಯ ಕಾಲೇಜಿನ ಉಪನ್ಯಾಸನ ನರೇಂದ್ರ ವಿದ್ಯಾರ್ಥಿನಿಗೆ ನೋಟ್ಸ್‌ ನೀಡುವ ನೆಪದಲ್ಲಿ ಹತ್ತಿರವಾಗಿದ್ದ. ವಿದ್ಯಾರ್ಥಿನಿಯ ಜೊತೆಗೆ ಸಲುಗೆ ಬೆಳಸಿಕೊಂಡಿದ್ದ.

ಉಪನ್ಯಾಸಕ, ವಿದ್ಯಾರ್ಥಿನಿ ಬೆಂಗಳೂರಿಗೆ ತೆರಳಿದ ನಂತರದಲ್ಲಿಯೂ ಚಾಟ್‌ ಮಾಡುವುದನ್ನು ಮುಂದುವರಿಸಿದ್ದ. ನೋಟ್ಸ್‌ ನೀಡುವ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ.

Also Read : ಕಾರ್ಕಳ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಕಾಂಗ್ರೆಸ್‌ ನಾಯಕರ ಆ ಒಂದು ಸುಳ್ಳು ..!

ನಂತರ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾನೆ. ಇನ್ನು ಮತ್ತೋರ್ವ ಉಪನ್ಯಾಸಕ ಸಂದೀಪ್‌ ಸಹ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ನರೇಂದ್ರನ ಜೊತೆಗೆ ಇರುವ ಪೋಟೋ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಎಸಗಿದ್ದಾನೆ.

ಸಂದೀಪ್‌ ತನ್ನ ಗೆಳೆಯ ಅನೂಪ್‌ ಎಂಬಾತನ ರೂಮ್‌ ಅತ್ಯಾಚಾರ ಎಸಗಿದ್ದ. ನಂತರ ಅನೂಪ್‌ ಕೂಡ ವಿದ್ಯಾರ್ಥಿನಿಗೆ ಬೆದರಿಕೆಯೊಡ್ಡಿದ್ದಾನೆ. ನೀನು ನನ್ನ ರೂಮಿಗೆ ಬಂದು ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೆದರಿಸಿದ್ದ.

Also Read : ಮನೆಬಿಟ್ಟು ಹೋದ ಪತ್ನಿ : ಮಗಳು, ಅತ್ತೆ, ನಾದಿನಿಗೆ ಗುಂಡು ಹಾರಿಸಿ ಹತ್ಯೆಗೈದ ಪತಿ ..!

ಅನೂಪ್‌ ವಿದ್ಯಾರ್ಥಿನಿಯನ್ನು ಕರೆಯಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಉಪನ್ಯಾಸಕರ ಕಿರುಕುಳ ತಾಳುವುದಕ್ಕೆ ಸಾಧ್ಯವಾಗದೇ ಇದ್ದಾಗ, ಪೋಷಕರ ಬಳಿ ತನ್ನ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ.

ಪೋಷಕರು ಆಕೆಯನ್ನು ಕೌನ್ಸಲಿಂಗ್‌ಗೆ ಒಳಪಡಿಸಿದ್ದು, ನಂತರದಲ್ಲಿ ಮಾರತಹಳ್ಳಿ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಉಪನ್ಯಾಸಕರು ಇತರ ವಿದ್ಯಾರ್ಥಿನಿಯರನ್ನೂ ದುರ್ಬಳಕೆ ಮಾಡಿಕೊಂಡಿದ್ಯಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

Karnataka Moodabidre college girl raped by lecturer 3 Arrest in Bengaluru Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories