ಧರ್ಮಸ್ಥಳ ತಲೆಬುರುಡೆ ಕೇಸ್: ಎಸ್‌ಐಟಿ ರಚನೆ, ಮುಂದೇನಾಗುತ್ತೆ ?

Dharmasthala SIT : ಮಂಗಳೂರು : ಧರ್ಮಸ್ಥಳದ ಸುತ್ತಮುತ್ತಲು ನಡೆದಿದೆ ಎನ್ನಲಾದ ತಲೆ ಬುರುಡೆ ಪ್ರಕರಣ ಸದ್ಯ ಎಸ್ಐಟಿ ವಶಕ್ಕೆ ನೀಡಲಾಗಿದೆ. ಎಸ್‌ಐಟಿ ಅಧಿಕಾರಿಗಳ ತಂಡ ಶೀಘ್ರದಲ್ಲಿಯೇ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ. ಎಸ್‌ಐಟಿ ತನಿಖೆಯ ನಂತರ ಏನಾಗುತ್ತೆ ಗೊತ್ತಾ ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸುತ್ತಮುತ್ತಲೂ ತಲೆಬುರುಡೆ ಹೊರ ತೆಗೆಯಲಾಗಿದೆ. ತಾನು ನೂರಾರು ಮಹಿಳೆಯರ, ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಪಟ್ಟವರ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೆ ನೀಡಿದ್ದ.
ಇದೀಗ ಕರ್ನಾಟಕ ಸರಕಾರ ಧರ್ಮಸ್ಥಳ ಸುತ್ತಮುತ್ತಲೂ ನೂರಾರು ಮಹಿಳೆಯರ ನಾಪತ್ತೆ ಹಾಗೂ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಲಾಗಿದೆ.
ಅನಾಮಿಕ ವ್ಯಕ್ತಿ ವ್ಯಕ್ತಿಯೋರ್ವ ತಾನು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು, ಮಹಿಳೆಯರ ಶವಗಳನ್ನು ಹೂತು ಹಾಕಿದ್ದೇನೆ ಎಂದು ಬೆಳ್ತಂಗಡಿ ಠಾಣೆಗೆ ಹಾಜರಾಗಿ ಹೇಳಿಕೆಯನ್ನೂ ನೀಡಿದ್ದ. ಇದರ ಬೆನ್ನಲ್ಲೇ ಇದೀಗ ತನಿಖೆ ಆರಂಭಗೊಂಡಿದೆ.
ಇದನ್ನೂ ಓದಿ : Sowjanya Murder case : ಸೌಜನ್ಯ ಕೊಲೆ ಪ್ರಕರಣ : 1 ರೂ. ಹಣ ಪಡೆಯದೆ ನಿರಪರಾಧಿಗೆ ನ್ಯಾಯ ಕೊಡಿಸಿದ ಯುವ ನ್ಯಾಯವಾದಿಗಳು
Dharmasthala SIT : ಎಸ್‌ಐಟಿ ತನಿಖೆಗೆ ಖಡಕ್ ಅಧಿಕಾರಿಗಳು :
ಕರ್ನಾಟಕ ಸರಕಾರ ಹಿರಿಯ ಪೊಲೀಸ್ ಅಧಿಕಾರಿ ಡಾ. ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ SIT ಅನ್ನು ರಚಿಸಿದೆ. ಪ್ರಣವ್ ಮೊಹಾಂತಿ ಸದ್ಯ ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತಾ ವಿಭಾಗ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
SIT ಸದಸ್ಯರಾಗಿ ಉಪ ಪೊಲೀಸ್ ಮಹಾನಿರ್ದೇಶಕ ಎಂ. ಎನ್. ಅನುಚೇತ್, ನಗರ ಸಶಸ್ತ್ರ ಮೀಸಲು (CAR) ಪ್ರಧಾನ ಕಚೇರಿಯ ಉಪ ಪೊಲೀಸ್ ಆಯುಕ್ತೆ ಸೌಮ್ಯಲತಾ, ಮತ್ತು ಪೊಲೀಸ್ ಅಧೀಕ್ಷಕ (ಆಂತರಿಕ ಭದ್ರತಾ ವಿಭಾಗ) ಜಿತೇಂದ್ರ ಕುಮಾರ್ ದಯಾಮ ಅವರು ಇರುತ್ತಾರೆ.
SIT ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಿಂದ ಕಾರ್ಯನಿರ್ವಹಿಸಲಿದ್ದು, ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Dharmasthala SIT : ಪ್ರಕರಣದ ತನಿಖೆ : ಮುಂದೇನಾಗುತ್ತೆ?
SIT ರಚನೆಯ ನಂತರದ ಪ್ರಮುಖ ಬೆಳವಣಿಗೆಗಳು ಮತ್ತು ತನಿಖೆಯ ಮುಂದಿನ ಹಂತಗಳು ಹೀಗಿವೆ:
ಸಮಗ್ರ ತನಿಖೆ: SIT ತಂಡವು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 39/2025 ಅನ್ನು ಮಾತ್ರವಲ್ಲದೆ, ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳ ಸುತ್ತಮುತ್ತ ವರದಿಯಾಗಿರುವ ಪ್ರಕರಣ ತನಿಖೆ ನಡೆಸಲಿದೆ.
ಅದರಲ್ಲೂ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಗಳು ಅಸಹಜ ಸಾವುಗಳು, ಕೊಲೆಗಳು ಮತ್ತು ಅತ್ಯಾಚಾರ ಪ್ರಕರಣಗಳನ್ನೂ ಒಳಗೊಂಡಂತೆ ಎಲ್ಲಾ ಸಂಬಂಧಿತ ಪ್ರಕರಣಗಳನ್ನು ತನಿಖೆ ಮಾಡಲಿದೆ.
ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ವರದಿಯಾದ ಅಥವಾ ವರದಿಯಾಗುವ ಯಾವುದೇ ಸಂಬಂಧಿತ ಕ್ರಿಮಿನಲ್ ಪ್ರಕರಣಗಳನ್ನು ಸಹ ಈ SITಗೆ ವರ್ಗಾಯಿಸಲಾಗುತ್ತದೆ.
ಸಾಕ್ಷ್ಯ ಸಂಗ್ರಹ ಮತ್ತು ವೈಜ್ಞಾನಿಕ ತನಿಖೆ: ತಲೆಬುರುಡೆ ಪತ್ತೆಯಾದ ಸ್ಥಳ, ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರದೇಶಗಳಲ್ಲಿ ವೈಜ್ಞಾನಿಕ ತನಿಖೆ ನಡೆಸಲಾಗುತ್ತದೆ.
ವಿಧಿವಿಜ್ಞಾನ ತಜ್ಞರು (FSL) ಘಟನಾ ಸ್ಥಳಗಳನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ. ಡಿಎನ್ಎ ಪರೀಕ್ಷೆಗಳು, ನಾರ್ಕೋ ಅನಾಲಿಸಿಸ್ ನಂತಹ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
ಸಮನ್ಸ್ ಮತ್ತು ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳು, ದೂರುದಾರರು, ಅನುಮಾನಾಸ್ಪದ ವ್ಯಕ್ತಿಗಳು, ಮತ್ತು ಈ ಹಿಂದೆ ತನಿಖೆ ನಡೆಸಿದ್ದ ಅಧಿಕಾರಿಗಳನ್ನು SIT ವಿಚಾರಣೆಗೆ ಒಳಪಡಿಸುತ್ತದೆ.
ಇದನ್ನೂ ಓದಿ : ಒಂದೇ ವಧುವನ್ನು ಮದುವೆ ಆದ ಸಹೋದರರು
ಪ್ರಮುಖ ಸಾಕ್ಷಿಯ ಹೇಳಿಕೆಗಳು ಮತ್ತು ಆತ ನೀಡಿದ ಮಾಹಿತಿಯ ಆಧಾರದ ಮೇಲೆ ತನಿಖೆ ಮುಂದುವರಿಯಲಿದೆ.
ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ತನಿಖೆ: ಈ ಪ್ರಕರಣವು ಸೌಜನ್ಯ ಪ್ರಕರಣದೊಂದಿಗೆ (ಇದನ್ನು ಸೌಜನ್ಯ ಪ್ರಕರಣದ ಮುಂದುವರಿದ ಭಾಗವೆಂದು ಹಲವರು ಭಾವಿಸಿದ್ದಾರೆ.
ಆದರೆ ಗೃಹ ಸಚಿವರು ಈ SIT ಈಗಿನ ತಲೆಬುರುಡೆ ಪ್ರಕರಣಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ) ಸೇರಿ ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ.
ಹೀಗಾಗಿ, SIT ತನಿಖೆ ಸಂಪೂರ್ಣ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಬಂದಿದೆ.
ರಾಜ್ಯ ಸರಕಾರಕ್ಕೆ ವರದಿ : ಎಸ್‌ಐಟಿ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸಿ, ತನಿಖಾ ವರದಿಯನ್ನು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ (DG & IGP)ಸಲ್ಲಿಕೆ ಮಾಡಬೇಕು.
ಎಸ್‌ಐಟಿ ತಂಡ ತನಿಖೆ ನಡೆಸಿ ಸಲ್ಲಿಕೆ ಮಾಡಿದ ಸಮಗ್ರ ತನಿಖಾ ವರದಿಯನ್ನು DG & IGP ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು.
ನ್ಯಾಯ ಒದಗಿಸುವುದು: ಈ ಪ್ರಕರಣದಲ್ಲಿ ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ಸಾರ್ವಜನಿಕರ ಪ್ರಮುಖ ನಿರೀಕ್ಷೆಯಾಗಿದೆ. SIT ತನಿಖೆಯು ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವ ವಿಶ್ವಾಸವಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
Dharmasthala Skull Case Sit Probe, what next in Kannada News



