Jio OTT Plans: ಜಿಯೋ ಬಳಕೆದಾರರಿಗೆ ಗುಡ್‌ ನ್ಯೂಸ್‌! 500 ರೂ. ಗಿಂತ ಕಡಿಮೆ ಬೆಲೆಯಲ್ಲಿ ಉಚಿತ ಒಟಿಟಿ ಯೋಜನೆಗಳು

Jio OTT Plans : ಇಂದಿನ ಅತ್ಯಂತ ವೇಗದ ಜಗತ್ತಿನಲ್ಲಿ ಮನೆರಂಜನೆಗಾಗಿ ಅತಿ ಹೆಚ್ಚು ಜನರು ಇಷ್ಟಪಡುತ್ತಿರುವುದು ಒಟಿಟಿಯನ್ನು.

ತಮ್ಮ ಫ್ರೀ ಟೈಮ್‌ನಲ್ಲಿ ತಮಗೆ ಬೇಕಾದ ಮನೆರಂಜನೆಯನ್ನು ತಾವಿದ್ದಲ್ಲಿಯೇ ನೋಡಿ ಆನಂದಿಸಬಹುದಾದ ಅವಕಾಶವನ್ನು ಒಟಿಟಿ ಒದಗಿಸುತ್ತದೆ.

ಅದಕ್ಕೆ ಒಟಿಟಿ ಸೇವೆಗಳನ್ನು ನೀಡುವ ಕಂಪನಿಗಳ ಚಂದಾದಾರಿಕೆಯನ್ನು ಪಡೆದರೆ ಸಾಕು. ಆದರೆ ಕೆಲವು ಒಟಿಟಿ ಸೇವೆಗಳು ದುಬಾರಿ ಅನಿಸುವುದಂತು ನಿಜ.

ಆದರೆ ಈಗ ಭಾರತೀಯ ಟೆಲಿಕಾಂ ಜಗತ್ತಿನ ದೈತ್ಯ ಕಂಪನಿ ರಿಲಯನ್ಸ್‌ ಜಿಯೋ ತನ್ನ ಪ್ರಿಪೇಯ್ಡ್‌ ಚಂದಾದಾರರಿಗೆ ರಿಚಾರ್ಜ್‌ ಯೋಜನೆಗಳೊಂದಿಗೆ ಹೊಸ ಹೊಸ ಸೇವೆಗಳನ್ನು ನೀಡುತ್ತಿದೆ.

ಸದ್ಯ ಜಿಯೋ ಪ್ರೀಪೇಡ್‌ ಚಂದಾದರರು ರಿಚಾರ್ಜ್‌ ಮಾಡಿದಾಗ ಅವರಿಗೆ ಉಚಿತ ಒಟಿಟಿ ಸೇವೆಗಳನ್ನು ನೀಡುತ್ತಿದೆ. ಇದರೊಂದಿಗೆ ಒಟಿಟಿ ಸೇವೆಗಳಿಗಾಗಿ ದುಬಾರಿ ರಿಚಾರ್ಜ್‌ ಮಾಡುವ ಅಗತ್ಯವಿಲ್ಲ.

ಅಂದರೆ ಕಡಿಮೆ ಬೆಲೆಯ ಯೋಜನೆಗಳನ್ನು ಬಳಸಿಕೊಂಡು ಸಹ ಒಟಿಟಿಯಲ್ಲಿ ಸಖತ್‌ ಮನರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಜಿಯೋ ತನ್ನ ಚಂದಾದಾರರಿಗೆ 500 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಯೋಜನೆಗಳನ್ನು ಪರಿಚಯಿಸಿದೆ.

Jio OTT Plans: 100 ರೂಪಾಯಿಗಳ ಉಚಿತ ಒಟಿಟಿ ಯೋಜನೆ

ರಿಲಯನ್ಸ್‌ ಜಿಯೋ ಕೇವಲ 100 ರೂ.ಯೋಜನೆಯನ್ನು ರಿಚಾರ್ಜ್‌ ಮಾಡಿದರೆ ಉಚಿತ ಒಟಿಟಿ ಪ್ರಯೋಜನವನ್ನು ನೀಡುತ್ತಿದೆ. ಈ ಯೋಜನೆಯು 90 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಜೊತೆಗೆ ಇದರಲ್ಲಿ 5 ಜಿಬಿ ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ 90 ದಿನಗಳ ವರೆಗೆ ಜಿಯೋಹಾಟ್‌ಸ್ಟಾರ್‌ (ಟಿವಿ/ಮೊಬೈಲ್‌) ಗೆ ಪ್ರವೇಶವನ್ನು ನೀಡುತ್ತದೆ. ಅಂದರೆ 90 ದಿನಗಳವರೆಗೆ ಜಿಯೋಹಾಟ್‌ಸ್ಟಾರ್‌ ಮನೆರಂಜನೆಯನ್ನು ಸವಿಯಬಹುದಾಗಿದೆ.

175 ರೂಪಾಯಿಗಳ ಉಚಿತ ಒಟಿಟಿ ಯೋಜನೆ

ಇದನ್ನೂ ಓದಿ: ಪತಂಜಲಿ 6ಜಿ ಮೊಬೈಲ್‌ :250 MP ಕ್ಯಾಮೆರಾ, 200W ವೇಗದ ಚಾರ್ಜಿಂಗ್ – Fact Check

ಒಂದೇ ಯೋಜನೆಯಲ್ಲಿ 10 ಒಟಿಟಿ ಸೇವೆಗಳ ಪ್ರಯೋಜನವನ್ನು ಪಡೆಯಲು ಬಯಸಿದರೆ ಈ ರಿಚಾರ್ಜ ಯೋಜನೆಯು ಉತ್ತಮವಾಗಿದೆ. ಇದು ಡೇಟಾ ಯೋಜನೆಯಾಗಿದ್ದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಇದರಲ್ಲಿ 10ಜಿಬಿ ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತಿದೆ. ಇದರ ಸೇವೆಗಳ ಪಟ್ಟಿಯಲ್ಲಿ ಸೋನಿ ಲಿವ್‌, ಜೀ5, ಡಿಸ್ಕವರಿ+, ಸನ್‌NXT, ಪ್ಲಾನೆಟ್‌ ಮರಾಠಿ, ಲಯನ್‌ಗೇಟ್‌ ಪ್ಲೇ ಇತ್ಯಾದಿ ಸೇವೆಗಳು ಸೇರಿವೆ.

195 ರೂಪಾಯಿಗಳ ಉಚಿತ ಒಟಿಟಿ ಯೋಜನೆ

ಜಿಯೋನ ಡಾಟಾ ಓನ್ಲಿ ಯೋಜನೆಯು 90 ದಿನಗಳ ಮಾನ್ಯತೆ ಮತ್ತು 15ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ.

ಈ ಯೋಜನೆಯನ್ನು ರೀಚಾರ್ಜ್‌ ಮಾಡಿದರೆ ಜಿಯೋ ಹಾಟ್‌ಸ್ಟಾರ್‌ (ಮೊಬೈಲ್‌/ಟಿವಿ) ಚಂದಾದಾರಿಕೆಯನ್ನು 90 ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತದೆ.

329 ರೂಪಾಯಿಗಳ ಉಚಿತ ಒಟಿಟಿ ಯೋಜನೆ
ಇದು ಜಾಹೀರಾತು ರಹಿತ ಸಂಗೀತವನ್ನು ಕೇಳಲು ಬಯಸುವವರಿಗೆ ಉತ್ತಮ ರೀಚಾರ್ಜ್‌ ಯೋಜನೆಯಾಗಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ.

ಇದು ದಿನಕ್ಕೆ 1.5 ಜಿಬಿ ದರದಲ್ಲಿ ಒಟ್ಟು 42 ಜಿಬಿ ದೈನಂದಿನ ಡಾಟಾವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಜಿಯೋ ಸಾವನ್‌ ಪ್ರೋ ಚಂದಾದಾರಿಕೆಯನ್ನು ನೀಡಲಾಗುತ್ತದೆ. ಜಿಯೋ ಟಿವಿ ಜೊತೆಗೆ ಜಿಯೋಎಐಕ್ಲೌಡ್‌ ಅಪ್ಲಿಕೇಶನ್‌ಗಳಿಗೂ ಪ್ರವೇಶ ಲಭ್ಯವಿರುತ್ತದೆ.

ಇದನ್ನೂ ಓದಿ: Realme 15 Pro 5G : 4K ಕ್ಯಾಮೆರಾ ಹೊಂದಿರುವ ರಿಯಲ್‌ಮಿ 15 ಪ್ರೊ 5G ಬೆಲೆ ಎಷ್ಟು ಗೊತ್ತಾ ?

Technology Jio Offers Free OTT Subscription in recharge plans under 500 rupess news in Kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories