Realme 15 Pro 5G : 4K ಕ್ಯಾಮೆರಾ ಹೊಂದಿರುವ ರಿಯಲ್‌ಮಿ 15 ಪ್ರೊ 5G ಬೆಲೆ ಎಷ್ಟು ಗೊತ್ತಾ ?

ರಿಯಲ್‌ ಮೀ ಕಂಪೆನಿಯು ರಿಯಲ್‌ಮಿ 15 ಪ್ರೊ 5G (Realme 15 Pro 5G) ಮೊಬೈಲ್‌ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಮೊಬೈಲ್‌ ಬೆಲೆ ತಿಳಿದ್ರೆ ನೀವು ಅಚ್ಚರಿಯಾಗೋದು ಗ್ಯಾರಂಟಿ.

50 ಮೆಗಾ ಫಿಕ್ಸೆಲ್‌ ಕ್ಯಾಮೆರಾ, 4ಕೆ ರೆಕಾರ್ಡಿಂಗ್‌ ಸಾಮರ್ಥ್ಯದ ಜೊತೆಗೆ ದೀರ್ಘ ಬಾಳಿಕೆಯ ಬ್ಯಾಟರಿಯನ್ನು ಒಳಗೊಂಡಿದು ಈ ಮೊಬೈಲ್‌ ಏನೆಲ್ಲಾ ವೈಶಿಷ್ಠ್ಯತೆಯನ್ನು ಹೊಂದಿದ ಅನ್ನೋ ಮಾಹಿತಿ ಇಲ್ಲಿದೆ.

ಇದು ರಿಯಲ್‌ಮಿಯ ಈ ವರ್ಷದ ಜನವರಿಯಲ್ಲಿ ಅನಾವರಣಗೊಂಡಿದ್ದ Realme 14 Pro 5G ಸರಣಿಯ ನಂತರದ ಆವೃತ್ತಿಯಾಗಿದೆ.

Realme 15 Pro 5G : ವೈಶಿಷ್ಟ್ಯಗಳು ಮತ್ತು ಬೆಲೆ

ಡಿಸ್ಪ್ಲೇ: 6.8 ಇಂಚಿನ 4D ಕರ್ವ್ಡ್+ 1.5K ಡಿಸ್ಪ್ಲೇ, ಇದು 144Hz ರಿಫ್ರೆಶ್ ರೇಟ್ ಮತ್ತು 6,500 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿದೆ.

ಹೊಸ ಮೊಬೈಲ್ ಹಿಂಭಾಗ ಕಾರ್ನಿಂಗ್ ಗ್ಲಾಸ್‌‌ ಒಳಗೊಂಡಿದ್ದು ಮುಂಭಾಗದಲ್ಲಿ ಗ್ಲಾಸ್ 7i ರಕ್ಷಿಸಲ್ಪಟ್ಟಿದೆ. ಮೊಬೈಲ್‌ ಪ್ರಮುಖವಾಗಿ IP68 ಮತ್ತು IP69 ಹೊಂದಿದೆ. ಇದರಿಂದಾಗಿ ಧೂಳು ಮತ್ತು ನೀರಿನ ರಕ್ಷಣೆಯನ್ನು ನೀಡಲಿದೆ.

ಪ್ರೊಸೆಸರ್: Qualcomm Snapdragon 7 Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

RAM ಮತ್ತು ಸಂಗ್ರಹಣೆ: 8 GB RAM / 128 GB ಸಂಗ್ರಹಣೆಯಿಂದ ಪ್ರಾರಂಭವಾಗಿ, 12 GB RAM / 512 GB ಸಂಗ್ರಹಣೆವರೆಗೆ ವಿವಿಧ ರೂಪಾಂತರಗಳಲ್ಲಿ ಲಭ್ಯವಿದೆ.

Realme 15 Pro 5G 50MP 4K Camera 7000 Mah Battery Do you know the price in Kannada News

ಕ್ಯಾಮೆರಾ:

ಹಿಂಭಾಗ: 50 MP ಸೋನಿ IMX896 ಸೆನ್ಸಾರ್ ಜೊತೆಗೆ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್), 50 MP ಅಲ್ಟ್ರಾವೈಡ್ ಲೆನ್ಸ್.

ಮುಂಭಾಗ: 50 MP ಸೆಲ್ಫಿ ಕ್ಯಾಮೆರಾ.

ಇದು 4K 60fps ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ.

ಎಐ (AI Edit Genie) ಅನ್ನೋ ವಿಶಿಷ್ಟವಾಗಿರುವ AI ಎಡಿಟಿಂಗ್ ಟೂಲ್ ಈ ಮೊಬೈಲ್‌ ಹೊಂದಿದೆ. ಇದರಿಂದಾಗಿ ವಾಯ್ಸ್ ಕಮಾಂಡ್‌ಗಳ ಮೂಲಕ ಚಿತ್ರಗಳನ್ನು ಎಡಿಟ್ ಮಾಡಲು ಸಹಕಾರಿಯಾಗುತ್ತದೆ.

ಸುದೀರ್ಘ ಬ್ಯಾಟರಿ: ರಿಯಲ್‌ ಮೀ ಹೊಸ ಮೊಬೈಲ್‌ನ ಮತ್ತೊಂದು ವಿಶೇಷತೆಯೇ ದೀರ್ಘ ಕಾಲದ ಬ್ಯಾಟರಿ. ಈ ಮೊಬೈಲ್‌ 7,000mAh ಬ್ಯಾಟರಿ ಹೊಂದಿದೆ. ಅಲ್ಲದೇ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಒಳಗೊಂಡಿದೆ.

Realme 15 Pro 5G 50MP 4K Camera 7000 Mah Battery Do you know the price in Kannada News

ಹೊಚ್ಚ ಹೊಸ ತಂತ್ರಜ್ಞಾನ ಎನಿಸಿರುವ Android 15 ಒಳಗೊಂಡಿದ್ದು, Realme UI 6.0 ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಲಿದೆ.

ಇತರೆ ವೈಶಿಷ್ಟ್ಯಗಳು: ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಇನ್ಫ್ರಾರೆಡ್ ಬ್ಲಾಸ್ಟರ್, AI ಪಾರ್ಟಿ, GT ಬೂಸ್ಟ್ 3.0, ಗೇಮಿಂಗ್ ಕೋಚ್ 2.0 ಮತ್ತು AI ಅಲ್ಟ್ರಾ ಕಂಟ್ರೋಲ್ (ಗೇಮಿಂಗ್ ಆಪ್ಟಿಮೈಸೇಶನ್‌ಗಾಗಿ) ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬಣ್ಣಗಳು: ಫ್ಲೋಯಿಂಗ್ ಸಿಲ್ವರ್, ವೆಲ್ವೆಟ್ ಗ್ರೀನ್ ಮತ್ತು ಸಿಲ್ಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.

Also Read : 10,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 5G ಮೊಬೈಲ್‌

Realme 15 Pro 5G : ಬೆಲೆಗಳು (ಬ್ಯಾಂಕ್ ಆಫರ್‌ಗಳಿಲ್ಲದೆ):

8 GB/128 GB ರೂಪಾಂತರ: ₹31,999

8 GB/256 GB ರೂಪಾಂತರ: ₹33,999

12 GB/256 GB ರೂಪಾಂತರ: ₹35,999

12 GB/512 GB ರೂಪಾಂತರ: ₹38,999

Realme 15 Pro 5G 50MP 4K Camera 7000 Mah Battery Do you know the price in Kannada News

Realme 15 ಸರಣಿ ಮತ್ತು Buds T200 ಜುಲೈ 30 ರಿಂದ ಫ್ಲಿಪ್‌ಕಾರ್ಟ್, ರಿಯಲ್ ಮಿ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.

Also Read : ಯೂಟ್ಯೂಬ್‌ ‘ಹೈಪ್‌’ ಬಟನ್‌ ವೈಶಿಷ್ಟ್ಯವೇನು ? ಸಣ್ಣ ಕಂಟೆಂಟ್‌ದಾರರಿಗೆ ಗುಡ್‌ನ್ಯೂಸ್‌

Realme 15 Pro 5G 50MP 4K Camera 7000 Mah Battery Do you know the price in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories