ಧರ್ಮಸ್ಥಳ : 6ನೇ ಪಾಯಿಂಟ್‌ನಲ್ಲಿ ಸಿಕ್ಕ ಅಸ್ತಿಪಂಜರದ ಅವಶೇಷ ಯಾರದ್ದು ?

ಮಂಗಳೂರು : ಧರ್ಮಸ್ಥಳ (Dharmasthala) ದ ಸಮೀಪದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸಾಮೂಹಿಕ ಅಂತ್ಯಕ್ರೀಯೆ ಪ್ರಕರಣಕ್ಕೆ ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ. 6ನೇ ಜಾಗದ ಗುಂಡಿಯಲ್ಲಿ ಅಸ್ತಿಪಂಜರ ಪತ್ತೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ನಿಗೂಢ ವ್ಯಕ್ತಿ ತೋರಿಸಿದ ಜಾಗದಲ್ಲಿ ಕಳೆದ 3 ದಿನಗಳಿಂದಲೂ ಉತ್ಖನನ ಕಾರ್ಯ ನಡೆಯುತ್ತಿದೆ. 2 ದಿನಗಳಲ್ಲಿ ಸುಮಾರು 5 ಕಡೆಗಳಲ್ಲಿ ಗುಂಡಿ ತೋಡಿ ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಅವಶೇಷ ಪತ್ತೆಯಾಗಿರಲಿಲ್ಲ.

ಇಂದು ಧರ್ಮಸ್ಥಳದ ನೇತ್ರಾವತಿ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಇಂದು ಉತ್ಕನನ ಕಾರ್ಯವನ್ನು ನಡೆಸಲಾಗಿದೆ. 6ನೇ ಗುಂಡಿಯಲ್ಲಿ ಅಗೆಯುವ ವೇಳೆಯಲ್ಲಿ ಅಸ್ತಿಪಂಜರ ಅವಶೇಷ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪತ್ತೆಯಾಗಿರುವ ಮೂಳೆಯನ್ನು ಸಂಗ್ರಹ ಮಾಡಲಾಗಿದ್ದು, ವಿಧಿ ವಿಜ್ಞಾನ ತಜ್ಞರು ಮೂಳೆಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ. 4 ಅಡಿ ಆಳದ ಗುಂಡಿಯಲ್ಲಿ ಮೂಳೆ ಪತ್ತೆಯಾಗಿದೆ.

ಮೂಳೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇದೇ ಗುಂಡಿಯಲ್ಲಿ ಇನ್ನಷ್ಟು ಜಾಗವನ್ನು ಅಗೆಯುವ ಸಾಧ್ಯತೆಯಿದೆ. ಸುಮಾರು 10 ಅಡಿಗಳಷ್ಟು ಆಳಕ್ಕೆ ಅಗೆಯುವ ಸಾಧ್ಯತೆಯಿದೆ.

Dharmasthala : ಗುಂಡಿಯಲ್ಲಿ ಸಿಕ್ಕಿದ್ದು ಯಾರ ಮೂಳೆ ?

ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಗುಂಡಿಯಲ್ಲಿ ಸಿಕ್ಕಿರುವ ಮೂಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದ್ದು, ಪರೀಕ್ಷೆಗೆ ಒಳಪಡಿಸಿದ್ದಾರೆ.

ಎಫ್‌ಎಸ್ಎಲ್‌ ತಜ್ಞರು ಪರೀಕ್ಷೆಯನ್ನು ನಡೆಸಿದ ನಂತರದಲ್ಲಿ ಮೂಳೆಯನ್ನು ಪರೀಕ್ಷೆ ನಡೆಸಿ ಇದು ಮಹಿಳೆ ಅಥವಾ ಪುರುಷನ ಮೂಳೆ ಅನ್ನೋದನ್ನು ಪತ್ತೆ ಹೆಚ್ಚಲಿದ್ದಾರೆ. ಮೂಳಯೆ ಸಾಂಧ್ರತೆಯ ಆಧಾರದಲ್ಲಿ ಇದು ಯಾರ ಮೂಳೆ ಅನ್ನೋದು ತಿಳಿಯಲಿದೆ.

ಇದನ್ನೂ ಓದಿ : ಪರಶುರಾಮ ಪ್ರತಿಮೆ ಸ್ಥಾಪನೆ : ಮುನಿಯಾಲು ನ್ಯಾಯಾಲಯಕ್ಕೆ ಪಿಐಎಲ್‌ ಅರ್ಜಿ ಅತ್ಯಂತ ಹಾಸ್ಯಾಸ್ಪದ : ನವೀನ್‌ ನಾಯಕ್‌  

ಗುಂಡಿಯಲ್ಲಿ ಸಿಕ್ಕಿರುವ ಎಲ್ಲಾ ಮೂಳೆಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತದೆ. ನಂತರವೇ ಅಧಿಕಾರಿಗಳು ನಿಖರವಾಗಿ ಇದು ಯಾರ ಮೂಳೆ ಅನ್ನುವ ಮಾಹಿತಿಯನ್ನು ನೀಡುತ್ತಾರೆ.

ಶ್ವಾನದಳದಿಂದ ಪರಿಶೀಲನೆ

6ನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆಯಾದ ನಂತರದಲ್ಲಿ ಶ್ವಾನದಳವನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಶ್ವಾನದಳ ಮೂಳೆಗೆ ಸಂಬಂಧಿಸಿದಂತಹ ಮಾಹಿತಿಯನ್ನು ಕಲೆ ಹಾಕಲಿದೆ.

ಇದನ್ನೂ ಓದಿ : ಧರ್ಮಸ್ಥಳ ಎಸ್‌ಐಟಿ ತನಿಖೆ : ಶವಗಳ ಪತ್ತೆಗೆ ಮಣ್ಣು ಪರೀಕ್ಷೆ, ಬಯಲಾಗುತ್ತಾ ಬುರುಡೆ ರಹಸ್ಯ ?

ಘಟನಾ ಸ್ಥಳಕ್ಕೆ ಪ್ರಣವ್‌ ಮೊಹಾಂತಿ

ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣವ್‌ ಮೊಹಾಂತಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೂಳೆಗಳ ಸಿಕ್ಕ ಪ್ರದೇಶದಲ್ಲಿ ಮೊಹಾಂತಿ ಅವರು ಪರಿಶೀಲನೆ ನಡೆಸಲಿದ್ದಾರೆ.

ಮೂಳೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗುಂಡಿಯಲ್ಲಿನ ಎಲ್ಲಾ ಮಾಹಿತಿಯನ್ನು ವಿಡಿಯೋ ರೆಕಾರ್ಡಿಂಗ್‌ ಮೂಲಕ ಚಿತ್ರೀಕರಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

Dharmasthala Whose skeletal remains were found at point 6 Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories