ವಿಶ್ವದ ಅತಿದೊಡ್ಡ ತುಟಿಗಳನ್ನು ಹೊಂದಿದ ಮಹಿಳೆ ಇವಳೇ

ಇಂದಿನ ದಿನಗಳಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು ಪ್ರಪಂಚದಾದ್ಯಂತ ಗಮನ ಸೆಳೆಯುತ್ತಿವೆ. ಅನೇಕ ಮಾಡೆಲ್‍ಗಳು, ಸಿನಿಮಾ ತಾರೆಯರು ಈ ಚಿಕಿತ್ಸೆಗೆ ಒಳಗಾಗಿ ತಮ್ಮ ರೂಪಗಳನ್ನು ಬದಲಾಯಿಸಿಕೊಂಡಿದ್ದರು.

ಆದರೆ ಕೆಲವು ಪ್ರಕರಣಗಳಲ್ಲಿ ಅದರ ಅಡ್ಡಪರಿಣಾಮಗಳ ಬಗ್ಗೆ ತೋರಿಸಲಾಗಿತ್ತು. ಆದರೂ ಜನರು ಈ ಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸಿಲ್ಲ. ಅಂದಹಾಗೇ ಬಲ್ಗೇರಿಯನ್ ಮಹಿಳೆ ಆಂಡ್ರಿಯಾ ಇವನೊವಾ ಫಿಲ್ಲರ್‌ಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಬಳಸಿಕೊಂಡು ತನ್ನ ರೂಪವನ್ನು ಬದಲಾಯಿಸುವ ಮೂಲಕ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾಳೆ.

ಹಾಗಾಗಿ ಅವಳನ್ನು ವಿಶ್ವದ ಅತಿದೊಡ್ಡ ತುಟಿಗಳನ್ನು ಹೊಂದಿದ ಮಹಿಳೆ ಎಂದು ಗುರುತಿಸಲಾಗುತ್ತದೆ. ಅವಳು ಇಷ್ಟು ದೊಡ್ಡ ತುಟಿಗಳನ್ನು ಪಡೆಯಲು ಸಾವಿರಾರು ಡಾಲರ್‌ಗಳನ್ನು ಖರ್ಚು ಮಾಡಿದ್ದಾಳಂತೆ ಮತ್ತು ಡಜನ್ಗಟ್ಟಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳಂತೆ. ಹಾಗಾದ್ರೆ ಆಂಡ್ರಿಯಾ ಇವನೊವಾಳ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಪ್ರಯಾಣ ಹೇಗಿತ್ತು ಎಂಬುದನ್ನು ತಿಳಿಯೋಣ.

ಆಂಡ್ರಿಯಾ ಇವನೊವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಮಾಡಿದ ಖರ್ಚು ಎಷ್ಟು ?

ಆಂಡ್ರಿಯಾ ಇವನೊವಾ 2018 ರಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ತನ್ನ ರೂಪವನ್ನು ಬದಲಾಯಿಸುವ ಕಾರ್ಯ ಶುರುಮಾಡಿದ್ದಾಳಂತೆ. ಅವಳ ಗುರಿ ಅವಳ ಮುಖವನ್ನು ಸಂಪೂರ್ಣವಾಗಿ ಮರುರೂಪಿಸುವುದು ಆಗಿತ್ತು.

ಅದರಲ್ಲೂ ಅವಳ ಹೆಚ್ಚು ಗಮನ ಲಿಪ್ ಫಿಲ್ಲರ್‌ಗಳ ಮೇಲೆ ಇತ್ತು. ಅವಳು ಅದಕ್ಕಾಗಿ $26,000 ಕ್ಕೂ ಹೆಚ್ಚು ಖರ್ಚು ಮಾಡಿದಳಂತೆ. ಅಷ್ಟೇ ಅಲ್ಲದೇ ಅವಳು ಗಲ್ಲದ ಆಕಾರ, ಗಲ್ಲದ ಹಿಗ್ಗುವಿಕೆ, ದವಡೆ ಆಕಾರ ಮತ್ತು ಕೆನ್ನೆಯ ಮೂಳೆ ವರ್ಧನೆ ಚಿಕಿತ್ಸೆಗೂ ಒಳಗಾಗಿದ್ದಾಳಂತೆ.

2022 ರ ಹೊತ್ತಿಗೆ, ಇವನೊವಾ 32 ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ್ದಳಂತೆ. ಬ್ರಾಟ್ಜ್ ಗೊಂಬೆಯನ್ನು ಹೋಲುವುದು ಅವಳ ಗುರಿಯಾಗಿತ್ತು. ಹಾಗಾಗಿ ವರ್ಷಗಳಲ್ಲಿ ಅವಳ ನೋಟವು ಗಮನಾರ್ಹವಾಗಿ ಬದಲಾಯಿತು. ಶಸ್ತ್ರಚಿಕಿತ್ಸೆಗಳಿಗೂ ಮುಂಚಿನ ಅವಳ ಫೋಟೊ ಮತ್ತು ಇತ್ತೀಚಿನ ಅವಳ ಫೋಟೋಗಳಿಗೆ ಭಾರೀ ವ್ಯತ್ಯಾಸವಿದೆ.

ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಬಗ್ಗೆ ಇವನೊವಾ ತಜ್ಞರು ಹೇಳಿದ್ದೇನು ?

ಈ ಚಿಕಿತ್ಸೆಯ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದರೂ ಸಹ ಇವನೊವಾ ತನ್ನ ಶಸ್ತ್ರಚಿಕಿತ್ಸೆಗಳನ್ನು ಮುಂದುವರೆಸಿದಳಂತೆ. ಅವಳ ವೈದ್ಯರು ಅವಳ ತುಟಿಗಳಿಗೆ ಹೆಚ್ಚು ಹೈಲುರಾನಿಕ್ ಆಮ್ಲವನ್ನು ಚುಚ್ಚುವುದು ಅಪಾಯಕಾರಿ ಎಂದು ಎಚ್ಚರಿಸಿದರು.

ಕೆಲವರು ಅವಳ ಸುರಕ್ಷತೆಯ ಬಗ್ಗೆಯೂ ಭಯಪಟ್ಟರು. ಆದರೆ ಇವನೊವಾ ಮುಂದುವರಿಸಲು ಒತ್ತಾಯಿಸಿದಳಂತೆ. ನಂತರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಆಕೆ ವಿಶ್ವದಲ್ಲೇ ಅತಿದೊಡ್ಡ ತುಟಿ ಹೊಂದಿರುವ ಮಹಿಳೆ ಎನಿಸಿಕೊಂಡಿದ್ದಾಳೆ.

ಆಂಡ್ರಿಯಾ ಇವನೊವಾ ಮಾಡಿಸಿಕೊಂಡ ಇತರ ಶಸ್ತ್ರಚಿಕಿತ್ಸೆ

ಲಿಪ್ ಫಿಲ್ಲರ್‌ಗಳ ಜೊತೆಗೆ, ಆಂಡ್ರಿಯಾ ಇವನೊವಾ ಗಲ್ಲದ ಆಕಾರ, ಗಲ್ಲದ ಹಿಗ್ಗುವಿಕೆ, ದವಡೆಯ ಆಕಾರ, ಕೆನ್ನೆಯ ಮೂಳೆ ವರ್ಧನೆ ಮತ್ತು ಸ್ತನಗಳ ವರ್ಧನೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಳಂತೆ. ಹಾಗಾಗಿ ಈಗ ಅವಳ ಬ್ರಾ ಗಾತ್ರವು 75C ನಿಂದ 75E ಬ್ರಾ ಗಾತ್ರಕ್ಕೆ ಬದಲಾಗಿದೆಯಂತೆ.

ಇವನೊವಾ ಅವಳ ಕಥೆಯು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳ ಕಡೆಗೆ ಜನರು ಎಷ್ಟು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಕೆಲವರು ತಾವು ಬಯಸಿದ್ದ ನೋಟವನ್ನು ಪಡೆದಿದ್ದರೆ, ಇತರರು ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

World Biggest Lips women Andrea Ivanova

Related Stories