ಸ್ನೇಹಿತನ ಹಲ್ಲು ಹರಿತಗೊಳಿಸಲು ಈತ ಮಾಡಿದ್ದೇನು ಗೊತ್ತಾ ?

Viral News : ಸಾಮಾನ್ಯವಾಗಿ ಹಲ್ಲಿನ ಸಮಸ್ಯೆಗಳಿಗೆ ಜನರು ದಂತ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹಲ್ಲುಗಳನ್ನು ಹರಿತವಾಗಿಸಲು ತನ್ನ ಟೈಲ್ಸ್ ಪಾಲಿಶ್ ಮಾಡುವ ಸ್ನೇಹಿತನ ಬಳಿಗೆ ಬಂದಿದ್ದಾನೆ. ಇಲ್ಲಿ ಸ್ನೇಹಿತ ಆ ವ್ಯಕ್ತಿಯ ಹಲ್ಲುಗಳನ್ನು ಹರಿತಗೊಳಿಸಲು ಅಸಾಮಾನ್ಯವಾದುದ್ದನ್ನೇ ಮಾಡಿದ್ದಾನೆ.
ಅದೇನೆಂದರೆ ಟೈಲ್ಸ್ ಮತ್ತು ಪ್ಲೈವುಡ್ ಅನ್ನು ಕತ್ತರಿಸಿ ಹರಿತಗೊಳಿಸಲು ಸಾಮಾನ್ಯವಾಗಿ ಬಳಸುವ ಟೈಲ್ ಪಾಲಿಶಿಂಗ್ ಬ್ಲೇಡ್ ಅನ್ನು ಹಲ್ಲುಗಳ ಮೇಲೆ ಬಳಸಿ ಅವುಗಳನ್ನು ಹರಿತಗೊಳಿಸಿದ್ದಾನೆ. ಜೀವಕ್ಕೆ ಅಪಾಯಕಾರಿಯಾದ ಸಾಹಸವನ್ನು ಪ್ರದರ್ಶಿಸಿದ ಈ ಸ್ನೇಹಿತರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.
ಅನೇಕರು ಇದನ್ನು ಹುಚ್ಚುತನ ಎಂದು ಕರೆದಿದ್ದಾರೆ. Viral ಆದ ವಿಡಿಯೊದಲ್ಲಿ ಅಪಾಯಕಾರಿ ಟೈಲ್ ಪಾಲಿಶಿಂಗ್ ಬ್ಲೇಡ್ ಅನ್ನು ತನ್ನ ಸ್ನೇಹಿತನ ಹಲ್ಲುಗಳನ್ನು ಹರಿತಗೊಳಿಸಲು ಬಳಸುವುದು ರೆಕಾರ್ಡ್ ಆಗಿದೆ.
ಒಬ್ಬ ವ್ಯಕ್ತಿ ಟೈಲ್ ಪಾಲಿಶ್ ಮಾಡುವ ಮೆಷಿನ್ ಅನ್ನು ಹಿಡಿದುಕೊಂಡು ಬಾಯಿ ಅಗಲ ಮಾಡಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿಯ ಹಲ್ಲುಗಳ ಮೇಲೆ ಕಷಿನ್ ಅನ್ನು ಪ್ರಯೋಗಿಸಿ ಹಲ್ಲುಗಳ ಮೇಲೆ ಶಸ್ತ್ರಚಿಕಿತ್ಸೆ ಮಾಡುತ್ತಾನೆ. ಕೆಲವು ಸೆಕೆಂಡುಗಳ ಕಾಲ ಮುಂಭಾಗದ ಹಲ್ಲುಗಳನ್ನು ಹರಿತಗೊಳಿಸಿದ ನಂತರ, ಮೆಷಿನ್ ಅನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ : ವಿಶ್ವದ ಅತೀ ದೊಡ್ಡ ತುಟಿಗಳನ್ನು ಹೊಂದಿರುವ ಮಹಿಳೆ ಇವಳೇ
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಅಪಾಯಕಾರಿ ಕರ್ತ್ಯವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ವಿಡಿಯೊಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೊ ನೋಡಿದ ಒಬ್ಬ ನೆಟ್ಟಿಗರು, “ಹುಡುಗರು ಹುಡುಗಿಯರಿಗಿಂತ ಕಡಿಮೆ ಕಾಲ ಬದುಕಿರಲು ಇದೇ ಕಾರಣ” ಎಂದಿದ್ದಾರೆ.
ಈ ವಿಡಿಯೊವನ್ನು ಗಮನಿಸಿದ ದಂತ ವೈದ್ಯರೊಬ್ಬರು, “ನನ್ನ ಎಂಡೋಡಾಂಟಿಕ್ ಉಪಕರಣಗಳು ಮೂಲೆಯಲ್ಲಿ ಅಳುತ್ತಿವೆ.” ಎಂದು ಬರೆದಿದ್ದಾರೆ. ಇಂತಹ ಅಪಾಯಕಾರಿ ಸಾಹಸದ ಸಮಯದಲ್ಲಿ ಸಂಭವಿಸಬಹುದಾದ ಅಪಾಯದ ಬಗ್ಗೆ ಕೆಲವು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಒಬ್ಬರು, “ಇದು ನರಗಳ ಸಮಸ್ಯೆಗೆ ಕಾರಣವಾಗಬಹುದು. ಹಲ್ಲುಗಳು ಸಾಮಾನ್ಯ ಮೂಳೆಗಳಲ್ಲ, ಅವು ನರಗಳನ್ನು ಸಹ ಹೊಂದಿವೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಘರ್ಷಣೆಯಿಂದ ಉಂಟಾಗುವ ಶಾಖವು ದಂತ ಸುಡುವಿಕೆಗೆ ಕಾರಣವಾಗುತ್ತದೆ. ಅದು ಒಸಡಿಗೆ ಹಾನಿ ಮಾಡುತ್ತದೆ.
ಇದನ್ನೂ ಓದಿ : ಮದುವೆಗೂ ಕರಾರು ಪತ್ರ : ಯುವ ಜೋಡಿಯ ಹೊಸ ತಂತ್ರ
ಇದು ಹಲ್ಲಿನಲ್ಲಿ ತೀವ್ರ ಸಂವೇದನೆ, ದಂತಕವಚದಲ್ಲಿ ಸಣ್ಣ ಬಿರುಕುಗಳಿಗೆ ಕಾರಣವಾಗಬಹುದು” ಎಂದು ಬರೆದಿದ್ದಾರೆ. ಒಬ್ಬರು ಈ ಕೆಲಸವನ್ನು ತಮಾಷೆಯಾಗಿ “ಸುರೇಶ್ ಮಿಸ್ತ್ರಿ ದಂತ ಸೇವೆ” ಎಂದು ಕರೆದಿದ್ದಾರೆ. ಒಟ್ಟಾರೆ ಈ ವಿಡಿಯೊ ‘ಭಾರತ ಆರಂಭಿಕರಿಗಾಗಿ ಅಲ್ಲ’ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.
Man Sharpens friend Teeth Using tile polishing Machine



