ಸ್ಯಾಮ್‌ಸಂಗ್ ಗ್ಯಾಲಕ್ಸಿ S24 Ultra ಬೆಲೆಯಲ್ಲಿ ಬಾರೀ ಇಳಿಕೆ : ಬೆಲೆ ಕೇಳಿದ್ರೆ ಸುಸ್ತಾಗೋದು ಫಕ್ಕಾ

Samsung Galaxy S24 Ultra : ಸ್ಯಾಮ್‌ಸಂಗ್‌ ಕಂಪೆನಿ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌24 ಆಲ್ಟ್ರಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವಲ್ಲೇ ಗ್ರಾಹರಿಗೆ ಗುಡ್‌ ನ್ಯೂಸ್‌ ಸಿಕ್ಕಿದ್ದು, ಫೋನಿನ ಬೆಲೆಯಲ್ಲಿ ಬಾರೀ ಇಳಿಕೆ ಕಂಡು ಬಂದಿದೆ.

ಫೋನ್ ಬಿಡುಗಡೆಯಾದಾಗ ಇದ್ದ ಬೆಲೆಗೆ ಹೋಲಿಸಿದರೆ, ಇದೀಗ ₹45,000 ರಿಂದ ₹50,000 ವರೆಗೆ ಬೆಲೆ ಇಳಿಕೆಯಾಗಿದೆ. ಜೊತೆಗೆ ವಿವಿಧ ಬ್ಯಾಂಕ್ ಕಾರ್ಡ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್‌ ಘೋಷಿಸಿವೆ. ಇದನ್ನು ಬಳಸಿಕೊಂಡ್ರೆ ಇನ್ನಷ್ಟು ಲಾಭ ದೊರೆಯುವುದು ಖಚಿತ.

Samsung Galaxy S24 Ultra ಆರಂಭಿಕ ಬೆಲೆ: 12GB RAM ಮತ್ತು 256GB ಸ್ಟೋರೇಜ್ ಮಾದರಿಯು ₹1,29,999 ಬೆಲೆಗೆ ಬಿಡುಗಡೆಯಾಗಿತ್ತು.

ಇತ್ತೀಚಿನ ಬೆಲೆ: ಪ್ರಸ್ತುತ, ಈ ಮಾದರಿ ₹80,000 ಕ್ಕಿಂತ ಕಡಿಮೆ ಬೆಲೆಗೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸ್ಮಾರ್ಟ್‌ಫೋನ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ಯಾಲಕ್ಸಿ ಎಐ (Galaxy AI) ಅನ್ನೋ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಈ ತಂತ್ರಜ್ಞಾನವು ಗ್ರಾಹಕರ ಗಮನ ಸೆಳೆದಿದೆ. ಭಾರತದಲ್ಲಿ ಈ ಫೋನ್‌ನ ಬೆಲೆ ವಿವಿಧ ಸ್ಟೋರೇಜ್ ಮತ್ತು ಮೆಮೊರಿ ಆಯ್ಕೆಗಳಿಗೆ ಅನುಗುಣವಾಗಿ ಬದಲಾಗುತ್ತದೆ.

Samsung Galaxy S24 Ultra price Huge Discount Kannada News

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಫೋನ್‌ನ ಮೂಲ ಬೆಲೆಗಳು ಹೀಗಿವೆ:

  • 12GB RAM ಮತ್ತು 256GB ಸ್ಟೋರೇಜ್: ₹1,29,999
  • 12GB RAM ಮತ್ತು 512GB ಸ್ಟೋರೇಜ್: ₹1,39,999
  • 12GB RAM ಮತ್ತು 1TB ಸ್ಟೋರೇಜ್: ₹1,59,999

ಈ ಬೆಲೆಗಳು ಫೋನ್‌ ಬಿಡುಗಡೆಯಾದಾಗ ಇದ್ದವು. ಪ್ರಸ್ತುತ, ಆನ್‌ಲೈನ್ ಮಾರಾಟದ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ರಿಯಾಯಿತಿಗಳು ಲಭ್ಯವಿದೆ.

ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಈ ಮೊಬೈಲ್‌ ರಿಚಾರ್ಜ್‌..!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಪ್ರಮುಖ ವೈಶಿಷ್ಟ್ಯಗಳು:

Samsung Galaxy S24 Ultra price Huge Discount Kannada News
  • 6.8 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇ
  • 200MP ಕ್ವಾಡ್ ಕ್ಯಾಮೆರಾ ಸೆಟಪ್
  • ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್
  • Galaxy AI ವೈಶಿಷ್ಟ್ಯಗಳು ಮತ್ತು 7 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್‌ಗಳು.

ಇದನ್ನೂ ಓದಿ : ರಿಯಲ್‌ ಮೀ 15 ಪ್ರೋ ಬೆಲೆ ಎಷ್ಟು ಗೊತ್ತಾ ?

ಗ್ಯಾಲಕ್ಸಿ ಎಸ್25 ಸರಣಿಯ ಬಿಡುಗಡೆಯ ನಂತರ, ಎಸ್24 ಅಲ್ಟ್ರಾ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಉತ್ತಮ ಕಾರ್ಯಕ್ಷಮತೆಯ ಫೋನ್ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

Samsung Galaxy S24 Ultra price Huge Discount Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories