ನಿಮ್ಮ ಕಾರನ್ನು ಪದೇ ಪದೆ ವಾಶ್‌ ಮಾಡ್ತೀರಾ…? ಪಳಪಳ ಹೊಳೆಯುವ ಪೇಂಟ್‌ ಹೋದೀತು ಎಚ್ಚರ!

Car Washing Tips: ತಮ್ಮ ಕಾರು ‌ಯಾವಾಗಲೂ ಹೊಸದರಂತೆ ಪಳಪಳ ಹೊಳೆಯುತ್ತಿರಬೇಕು ಎಂಬುದು ಪ್ರತಿ ಕಾರು ಮಾಲೀಕರ ಮನದಾಳದ ಮಾತಾಗಿರುತ್ತದೆ.

ಹಾಗಾಗಿ ಕಾರನ್ನು ಸ್ವಚ್ಛವಾಗಿಡಲು ಪದೇ ಪದೆ ತಾವೇ ತೊಳೆಯುವುದು ಅಥವಾ ವಾಶಿಂಗ್‌ ಪಾಯಿಂಟ್‌ಗೆ ತೆಗೆದುಕೊಂಡು ಹೋಗುವುದನ್ನು ಮಾಡುತ್ತಾರೆ. ನಿಯಮಿತವಾಗಿ ಕಾರನ್ನು ತೊಳೆದು ಸ್ಚಚ್ಛವಾಗಿಡುವುದು ಬಹಳ ಮುಖ್ಯ.

ಅದರಿಂದ ಪ್ರತಿ ಪ್ರಯಾಣವು ಸಾಕಷ್ಟು ಆಹ್ಲಾದಕರವಾಗಿರುವುದಂತು ಸತ್ಯ. ಆದರೆ ಹಾಗೆ ಪದೇ ಪದೇ ತೊಳೆಯುವುದರಿಂದ ಸಂಕಷ್ಟ ಎದುರಿಸುವ ಸಂದರ್ಭವೂ ಬರಬಹುದು.

ಕಾರನ್ನು ಪದೇ ಪದೆ ವಾಶ್ ಮಾಡುವುದರಿಂದ ಅದರ ಮೇಲಿನ ಪಳಪಳ ಹೊಳೆಯುವ ಬಣ್ಣ ಹೋಗುವ ಸಾಧ್ಯತೆಗಳು ಇರುತ್ತವೆ.

ಹಾಗಾದರೆ, ತಿಂಗಳಿಗೆ ಎಷ್ಟು ಸಲ ಕಾರನ್ನು ವಾಶ್‌ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು.

ಇದನ್ನು ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ನಿಮ್ಮ ಪ್ರೀತಿಯ ಕಾರು ಯಾವಾಗಲೂ ಹೊಸದರಂತೆ ಕಾಣಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

ಇದನ್ನೂ ಓದಿ: Top 12 EV cars 2025 ರಲ್ಲಿ ಬಿಡುಗಡೆ ಆಗೋ ಟಾಪ್‌ 12 ಇವಿ ಕಾರುಗಳು

Car Washing Tips: ಕಾರಿನ ಬಣ್ಣ ಹೋಗಲು ಕಾರಣವೇನು?

ಕಾರಿನ ಬಣ್ಣ ಹೋಗಲು ಪ್ರಮುಖವಾಗಿ ಎರಡು ಕಾರಣಗಳವೆ. ಮೊದಲನೆಯದಾಗಿ ಕಾರು ಬಹಳಷ್ಟು ಕೊಳೆಯಾದರೂ ತೊಳೆಯದೇ ಇರುವುದು ಮತ್ತು ಕಾರನ್ನು ಪದೇಪದೇ ತೊಳೆಯುವುದು.

ಈ ಎರಡೂ ಸಂದರ್ಭದಲ್ಲಿ ಕಾರಿನ ಬಣ್ಣ ಬಹಳ ಬೇಗೆನೆ ಹೊರಟುಹೋಗುತ್ತದೆ. ಕೊಳೆಯಾದ ಕಾರಿನಲ್ಲಿ ಪ್ರಯಾಣ ಬೆಳೆಸುವುದೆಂದರೆ ಯಾರಿಗೂ ಇಷ್ಟವಾಗುವುದಿಲ್ಲ.

ಶಾಂಪೂ, ಸೋಪು ಬಳಸಿ ಪದೇಪದೆ ಕಾರು ತೊಳೆದರೆ ಕಾರಿನ ಬಣ್ಣ, ಹೊಳ‍ಪು ಹೋಗುತ್ತದೆ. ಅದಕ್ಕೆ ಕಾರನ್ನು ಯಾವಾಗ ಮತ್ತು ಹೇಗೆ ವಾಶ್‌ ಮಾಡಬೇಕು ಎಂದು ತಿಳಿಯೋಣ.

ಕಾರನ್ನು ತಿಂಗಳಿಗೆ ಎಷ್ಟು ಬಾರಿ ತೊಳೆಯಬೇಕು?

ಒಂದು ಕಾರನ್ನು ತಿಂಗಳಿಗೆ ಎಷ್ಟು ಬಾರಿ ತೊಳೆಯಬೇಕು ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿರುತ್ತದೆ. ಇದಕ್ಕೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ.

ಏಕೆಂದರೆ ಅದು ನೀವು ಎಲ್ಲಿ ವಾಸಿಸುತ್ತೀರಿ, ನಿಮ್ಮ ಕಾರನ್ನು ಎಷ್ಟು ಓಡಿಸುತ್ತೀರಿ ಮತ್ತು ಹವಾಮಾನ ಹೇಗಿ‌ದೆ ಮುಂತಾದ ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ.

ಸಾಮಾನ್ಯವಾಗಿ ತಿಂಗಳಿಗೆ 2 ರಿಂದ 4 ಬಾರಿ

ನೀವು ನಗರದಲ್ಲಿ ವಾಸಿಸುತ್ತಿದ್ದರೆ ಮತ್ತು ಪ್ರತಿದಿನ ನಿಮ್ಮ ಕಾರನ್ನು ಬಳಸುತ್ತಿದ್ದರೆ, ನಿಮ್ಮ ಕಾರನ್ನು ತಿಂಗಳಿಗೆ 2 ರಿಂದ 4 ಬಾರಿ ತೊಳೆಯುವುದು ಒಳ್ಳೆಯದು.

ಅಂದರೆ, ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಕಾರನ್ನು ತೊಳೆದರೆ ಸಾಕು. ಏಕೆಂದರೆ ನಗರಗಳಲ್ಲಿ, ಕಾರಿನ ಮೇಲ್ಮೈಯಲ್ಲಿ ಧೂಳು ಮತ್ತು ಮಾಲಿನ್ಯ ಸಂಗ್ರಹವಾಗುತ್ತದೆ.

ಇವುಗಳನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಇವು ಕಾರಿನ ಬಣ್ಣವನ್ನು ಹಾಳುಮಾಡಬಹುದು.

ನೀವು ಹಳ್ಳಿಯಲ್ಲಿ ವಾಸಿಸುತ್ತಿದ್ದರೆ ಅಥವಾ ನಿಮ್ಮ ಕಾರನ್ನು ಹೆಚ್ಚಾಗಿ ಧೂಳಿನ ಅಥವಾ ಡಾಂಬರು ಇಲ್ಲದ ರಸ್ತೆಗಳಲ್ಲಿ ಓಡಿಸಿದರೆ, ನಿಮ್ಮ ಕಾರು ಬೇಗನೆ ಕೊಳಕಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿ ವಾರ ನಿಮ್ಮ ಕಾರನ್ನು ತೊಳೆಯಬೇಕಾಗುತ್ತದೆ. ಅಷ್ಟೇ ಅಲ್ಲದೇ ಕಾರು ತೊಳೆಯಲೆಂದೇ ಬರುವ ಶಾಂಪೂವನ್ನೇ ಉಪಯೋಗಿಸುವುದು ಉತ್ತಮ.

ಋತುಮಾನಗಳು ಬಹಳ ಮುಖ್ಯ

ಮಳೆಗಾಲದಲ್ಲಿ ಕಾರು ಬೇಗನೆ ಕೊಳಕಾಗುತ್ತದೆ. ವಿಶೇಷವಾಗಿ ನೀವು ನೀರು ತುಂಬಿದ ರಸ್ತೆಯ ಮೂಲಕ ಹಾದು ಹೋದರೆ, ಮಣ್ಣು ಮಡ್‌ಗಾರ್ಡ್‌ನಲ್ಲಿ ಸಂಗ್ರಹವಾಗುತ್ತದೆ.

ಕೆಸರು ಕಾರಿನ ಬಣ್ಣವನ್ನು ಸಹ ಹಾನಿಗೊಳಿಸುತ್ತದೆ. ಆದ್ದರಿಂದ, ನೀವು ಮಳೆಯಲ್ಲಿ ಚಾಲನೆ ಮಾಡಿದರೆ, ನಿಮ್ಮ ಕಾರನ್ನು ನಿಲ್ಲಿಸುವ ಮೊದಲು ಚೆನ್ನಾಗಿ ತೊಳೆಯಿರಿ.

ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲು ಬೀಳುವ ಜಾಗದಲ್ಲಿ ಕಾರನ್ನು ನಿಲ್ಲಿಸಬೇಡಿ. ಬಿಸಿಲಿನ ಕಾರಣದಿಂದಲೂ ಪೇಂಟ್‌ ಹೋಗುತ್ತದೆ. ಆದಷ್ಟು ನೆರಳಿರುವ ಜಾಗವನ್ನೇ ಆಯ್ದುಕೊಳ್ಳಿ.

ಕಾರು ಒರೆಸುವ ಬಟ್ಟೆಯ ಬಗ್ಗೆ ಗಮನ ಕೊಡಿ

ಕಾರು ಒರೆಸುವ ಬಟ್ಟೆಯ ಬಗ್ಗೆಯೂ ವಿಶೇಷವಾದ ಗಮನ ಕೊಡುವುದು ಅಗತ್ಯ. ಏಕೆಂದರೆ ಕಾರನ್ನು ಮೃದುವಾದ ಅಥವಾ ಕಾರು ಒರೆಸಲೆಂದೇ ಬರುವ ಬಟ್ಟೆಯಿಂದ ಕಾರನ್ನು ಒರೆಸಿ.

ಆಗ ಬಣ್ಣ ಮಾಸುವುದಿಲ್ಲ. ಮತ್ತು ಕಾರಿನ ಮೇಲೆ ಗೀರುಗಳು ಬೀಳುವುದಿಲ್ಲ. ಕಾರಿನ ಗ್ಲಾಸ್‌ ಒರೆಸುವ ಬಟ್ಟೆಯಿಂದ ಕಾರಿನ ಬಾಡಿಯನ್ನು ಒರೆಸಬೇಡಿ. ಎರಡಕ್ಕೂ ಬೇರೆ ಬೇರೆ ಬಟ್ಟೆಗಳನ್ನು ಉಪಯೋಗಿಸಿ.

ಇದನ್ನೂ ಓದಿ: ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ 7 ಸೀಟರ್‌ ಟಾಪ್‌ 10 ಕಾರುಗಳ ಪಟ್ಟಿ

(Automobile car washing tips to keep your car paint brighter and durable know these information)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories