Udupi Crime Report : ಕಾರ್ಕಳದಲ್ಲಿ ಆಟೋ ಚಾಲಕ ಸಾವು, ಗಂಗೊಳ್ಳಿಯಲ್ಲಿ ವರದಕ್ಷಿಣೆ ಕಿರುಕುಳ

Udupi Crime Report : ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಅಪಘಾತ ಸಂಭವಿಸಿದ್ದು, ರಿಕ್ಷಾ ಚಾಲಕರೋರ್ವ ಸಾವನ್ನಪ್ಪಿದ್ದಾರೆ. ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿಯಾಗಿದ್ದಾಳೆ. ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಅಪರಾಧ ಸುದ್ದಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾರ್ಕಳದಲ್ಲಿ ಅಪಘಾತಕ್ಕೆ ರಿಕ್ಷಾ ಚಾಲಕ ಬಲಿ
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಆಟೋರಿಕ್ಷಾ ಚಾಲಕ ರವಿ ಮೃತಪಟ್ಟಿದ್ದಾರೆ. ಧೀರಜ್ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಆಟೋ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಆಟೋ ಪಲ್ಟಿಯಾಗಿ ಚಾಲಕ ರವಿ ಆಟೋದ ಅಡಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೋಟಾರ್ ಸೈಕಲ್ ಸವಾರ ಧೀರಜ್ ಮತ್ತು ಸಹಸವಾರ ಜಿತೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ :ವರದಕ್ಷಿಣೆ ಕಿರುಕುಳ, ಸಂಶಯಾಸ್ಪದ ಸಾವು
ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ರಜೀಯಾ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ಆಕೆಯ ಮಗಳ ಗಂಡ ಮತ್ತು ಕುಟುಂಬದ ಇತರ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ರಜೀಯಾ ಅವರ ಮಗಳು ಅಲ್ಪೀನಾ ಶೇಖ್ ಮದುವೆಯ ನಂತರ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿದ್ದರು. 40 ತೊಲೆ ಬಂಗಾರ ಮತ್ತು ನಗದು ವರದಕ್ಷಿಣೆಯಾಗಿ ನೀಡುವಂತೆ ಒತ್ತಾಯಿಸಿದ್ದರು.
ನಂತರ 1,50,000 ರೂಪಾಯಿ ಹಣವನ್ನೂ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. 2022ರಲ್ಲಿ ಅಲ್ಪೀನಾ ಶೇಖ್ ಮೃತಪಟ್ಟ ನಂತರ, ಮೊಮ್ಮಗಳು ಐಶಾ ಜುರೀನ್‌ಳನ್ನು ನೋಡಲು ಬಿಟ್ಟಿಲ್ಲ ಎಂದೂ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ ಎಸ್‌ಐಟಿ ರಚಿಸಿದ್ಯಾಕೆ ? ಸತ್ಯ ಬಾಯ್ಬಿಟ್ಟ ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬ್ರಹ್ಮಾವ : ಸ್ಕೂಟರ್ ಕಳವು
ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದಲ್ಲಿ ಹೆಚ್.ಕೆ.ಜಿ.ಎನ್ ಮಟನ್ ಸ್ಟಾಲ್ ಮಾಲೀಕರಾದ ಸಾಧಿಕ್ ಸನಾಉಲ್ಲಾ ಸಾಹೇಬ್ ಅವರ ಅಂಗಡಿಯಿಂದ ₹4,80,000 ನಗದು ಮತ್ತು ₹20,000 ಮೌಲ್ಯದ ಸ್ಕೂಟರ್ ಕಳವಾಗಿದೆ.
ಆರೋಪಿಗಳಾದ ಶಾಭಾಜ್ ಮತ್ತು ಸಲೀಂ ಎಂಬ ಕೆಲಸಗಾರರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಕ್ರೀದ್ ಮರುದಿನ ಸಾಧಿಕ್ ಹಣ ನೀಡಿ ಅಂಗಡಿ ನೋಡಿಕೊಳ್ಳಲು ಹೇಳಿ ಹೋಗಿದ್ದರು.
ಈ ವೇಳೆಯಲ್ಲಿ ಆರೋಪಿಗಳು ಹಣ ಮತ್ತು ಸ್ಕೂಟರ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ನಿಗೂಢ ಸಿಲಿಂಡರ್ ಸ್ಪೋಟ : ಬಾಲಕ ಸಾವು, ಹಲವರು ಗಂಭೀರ
Udupi Crime Report : ಅಸ್ವಾಭಾವಿಕ ಸಾವು ಪ್ರಕರಣ
ಮಲ್ಪೆ: ಆಗಸ್ಟ್ 13 ರಂದು ಮೀನುಗಾರಿಕೆ ಕೆಲಸ ಮಾಡುತ್ತಿದ್ದಾಗ, 46 ವರ್ಷದ ಶ್ರೀನಿವಾಸ ರಾಮ ತಾಂಡೇಲ ಅವರು ಸಮುದ್ರದಲ್ಲಿ ಬೋಟಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗಿಲ್ಲ.
ಕಾರ್ಕಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 56 ವರ್ಷದ ಕೆ. ಪ್ರಕಾಶ್ ಪೈ ಅವರು ಆಗಸ್ಟ್ 12 ರಂದು ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದರು. ಆದರೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಉಡುಪಿ : ರೂಪ (35 ವರ್ಷದ ) ಎಂಬ ಮಹಿಳೆ ಆಗಸ್ಟ್ 14ರಂದು ಉಡುಪಿಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂಗಡಿ ಹುಡುಗನೊಬ್ಬ ಬೈಕ್ ಕೀ ತರಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
Udupi Crime Report Today Auto driver dies Karkala, dowry harassment Gangolli Kannada news



