ಧರ್ಮಸ್ಥಳ ಪ್ರಕರಣ ಎಸ್‌ಐಟಿ ರಚಿಸಿದ್ದು ಯಾಕೆ ? ಸತ್ಯ ಹೇಳಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ..!

dharmasthala SIT Investigation : ಬೆಂಗಳೂರು : ಧರ್ಮಸ್ಥಳದ ತಲೆಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಯಾಕೆ ರಚನೆ ಮಾಡಿದ್ದು ಅನ್ನುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಸತ್ಯವನ್ನು ಹೊರಗೆ ತರುವುದು ರಾಜ್ಯ ಸರಕಾರದ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಧರ್ಮ ಅಥವಾ ರಾಜಕೀಯವನ್ನು ಬೆರೆಸುವುದು ಸರಿಯಲ್ಲ ಎಂದು ಪರಮೇಶ್ವರ್‌ ಅವರು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಗೆ ಯಾವುದೇ ಕಾಲಮಿತಿಯನ್ನು ಸರ್ಕಾರ ನಿಗದಿಪಡಿಸಿಲ್ಲ. ಸತ್ಯ ಹೊರಬರುವವರೆಗೂ ತನಿಖೆ ಮುಂದುವರಿಯುತ್ತದೆ ಎಂದರು.

ಇದನ್ನೂ ಓದಿ : ಧರ್ಮಸ್ಥಳ ಎಸ್‌ಐಟಿ ತನಿಖೆ : ಮದ್ಯಂತರ ವರದಿ ಕೊಡಿ : ಸುನಿಲ್‌ ಕುಮಾರ್‌

ಗೃಹ ಸಚಿವರು ಮತ್ತು ಸರ್ಕಾರ ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಾರ ನಂಬಿಕೆ ಇಟ್ಟಿದೆ. ಆದರೆ, ಆರೋಪಗಳ ಸತ್ಯಾಸತ್ಯತೆಯನ್ನು ಹೊರಗೆ ತರಬೇಕಾಗಿದೆ. ತಪ್ಪಿಲ್ಲದವರು ಈ ಆರೋಪಗಳಿಂದ ಮುಕ್ತರಾಗಬೇಕು.

ಧರ್ಮಸ್ಥಳದ ಬಗ್ಗೆ ನಮಗೂ ಅಪಾರ ನಂಬಿಕೆಯಿದೆ. ಅದರ ಧಾರ್ಮಿಕ ಕ್ಷೇತ್ರದ ಗೌರವ ಕಾಪಾಡುವುದು ನಮ್ಮ ಉದ್ದೇಶ. ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಮಂಜುನಾಥ ದೇವರ ಮೇಲೆ ನಮಗೆ ನಂಬಿಕೆಯಿದೆ ಎಂದಿದ್ದಾರೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ನಡೆಸುವ ಎಸ್ಐಟಿ ಕಾರ್ಯವ್ಯಾಪ್ತಿಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸೇರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ದರ್ಶನ್‌ ತೂಗುದೀಪ್‌ ಜಾಮೀನು ರದ್ದು : ಮುಂದಿನ ಆಯ್ಕೆಯೇನು ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಾದರೂ ಮುಂದೆ ಬಂದು ದೂರು ನೀಡಿದರೆ, ಅದನ್ನು ಪರಿಗಣಿಸಿ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಸತ್ಯ ಹೊರಬರುವವರೆಗೂ ನಿಷ್ಪಕ್ಷಪಾತ ತನಿಖೆ ನಡೆಸುವುದೇ ಸರ್ಕಾರದ ನಿಲುವು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

dharmasthala mass burial SIT Investigation Big Statement Home Minister Parameshwara

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories