ಎಸ್‌ಬಿಐ ಗೃಹಸಾಲ ಬಡ್ಡಿದರ ಪರಿಷ್ಕರಣೆ : ಸಾಲಗಾರರಿಗೆ ಏನು ಲಾಭ ?

sbi home loan interest rates : ಭಾರತದ ಪ್ರಮುಖ ರಾಷ್ಟೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲದ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಇದು ಸಾಲಗಾರರ ಮೇಲೆ ನೇರ ಪರಿಣಾಮವನ್ನು ಬೀರಲಿದೆ.

ಹಾಗಾದ್ರೆ ಬಡ್ಡಿದರ ಪರಿಷ್ಕರಣೆಯಿಂದ ಯಾರಿಗೆ ಲಾಭ ಅನ್ನೋ ಮಾಹಿತಿ ಇಲ್ಲಿದೆ. ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ 25 ಬೇಸಿಸ್ ಪಾಯಿಂಟ್‌ಗಳಷ್ಟು (0.25%) ಹೆಚ್ಚಿಸಿದೆ. ಈ ಹೆಚ್ಚಳವು ಮುಖ್ಯವಾಗಿ ಹೊಸ ಸಾಲಗಾರರಿಗೆ ಮತ್ತು ಕಡಿಮೆ ಕ್ರೆಡಿಟ್ ಸ್ಕೋರ್ (CIBIL) ಹೊಂದಿರುವವರಿಗೆ ಅನ್ವಯಿಸುತ್ತದೆ.

ಎಸ್‌ಬಿಐ ಹೊಸ ಬಡ್ಡಿದರ

ಹೊಸ ನಿಯಮಗಳ ಪ್ರಕಾರ, SBI ಯ ಗೃಹ ಸಾಲದ ಬಡ್ಡಿದರಗಳು ಈಗ 7.50% ರಿಂದ 8.70% ವರೆಗೆ ಇವೆ. ಈ ಮೊದಲು, ಈ ದರಗಳು 7.50% ರಿಂದ 8.45% ರ ವ್ಯಾಪ್ತಿಯಲ್ಲಿ ಇದ್ದವು. ಅಂದರೆ, ಗರಿಷ್ಠ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಡ್ಡಿದರ ಪರಿಷ್ಕರಣೆ ಮಾಡಿರುವುದರಿಂದಾಗಿ ಹೊಸ ಸಾಲಗಾರರ ಮಾಸಿಕ EMI ಗಳ ಮೇಲೆ ನೇರ ಪರಿಣಾಮ ಬೀರಲಿದೆ.

  • ಸಾಮಾನ್ಯ ಗೃಹ ಸಾಲ (Regular Home Loan): 7.50% ರಿಂದ 8.70%
  • ಮ್ಯಾಕ್ಸ್‌ಗೇನ್ (Maxgain) ಸಾಲ: 7.75% ರಿಂದ 8.95%
  • ಟಾಪ್-ಅಪ್ ಸಾಲ (Top-up Loan): 8.00% ರಿಂದ 10.75%

ಎಸ್‌ಬಿಐ ಗೃಹಸಾಲ ಬಡ್ಡಿದರ ಪರಿಷ್ಕರಣೆ : ಯಾರ ಮೇಲೆ ಪರಿಣಾಮ ?

ಈ ಬಡ್ಡಿದರಗಳ ಹೆಚ್ಚಳವು ಮುಖ್ಯವಾಗಿ ಹೊಸ ಸಾಲಗಾರರ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಸಾಲ ಪಡೆದ ಗ್ರಾಹಕರು, ಅವರ ಸಾಲಗಳು ಬಾಹ್ಯ ಬೆಂಚ್‌ಮಾರ್ಕ್ (EBLR) ಅಥವಾ ರೆಪೊ ದರಕ್ಕೆ ಲಿಂಕ್ ಆಗಿದ್ದರೆ, RBI ನಿಂದ ರೆಪೊ ದರದಲ್ಲಿ ಯಾವುದೇ ಬದಲಾವಣೆ ಆಗುವವರೆಗೂ ಅವರ EMI ಗಳು ಸ್ಥಿರವಾಗಿರುತ್ತವೆ.

ಆದಾಗ್ಯೂ, ಹೊಸದಾಗಿ ಗೃಹ ಸಾಲ ಪಡೆಯುವ ಗ್ರಾಹಕರು ಈಗ ಹೆಚ್ಚಿದ ಬಡ್ಡಿದರದೊಂದಿಗೆ ಹೆಚ್ಚು EMI ಪಾವತಿಸಬೇಕಾಗುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಡ್ಡಿದರ ಪರಿಷ್ಕರಣೆ ಮಾಡಿರುವುದು ಇತರ ಬ್ಯಾಂಕುಗಳ ಮೇಲೆಯೂ ಗಂಭೀರ ಪರಿಣಾಮವನ್ನು ಬೀರಲಿದೆ.

ಅಷ್ಟೇ ಅಲ್ಲದೇ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲಯೂ ಪ್ರಭಾವ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಎಸ್‌ಬಿಐ ಗೃಹ ಸಾಲದ ಬಡ್ಡಿದರ ಹೆಚ್ಚಳದ ಹೊಸ ನಿಯಮವು ಆಗಸ್ಟ್ 1, 2025 ರಿಂದ ಜಾರಿಗೆ ಬಂದಿದೆ.

ಇದನ್ನೂ ಓದಿ : ಈ ಕೆಲಸ ಮಾಡದಿದ್ರೆ ಇನ್ಮುಂದೆ ಸಿಗಲ ಯುವನಿಧಿ ಹಣ

ಈ ಹೊಸ ದರಗಳು, ಹೆಚ್ಚಿದ ಬಡ್ಡಿದರಗಳನ್ನು ಒಳಗೊಂಡಿವೆ. ಇವು ಹೊಸ ಗೃಹ ಸಾಲದ ಅರ್ಜಿಗಳಿಗೆ ಅನ್ವಯಿಸುತ್ತವೆ. ಈಗಾಗಲೇ ಸಾಲ ಪಡೆದಿರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿರಲ್ಲ.

ಆದರೆ ಹೊಸದಾಗಿ ಸಾಲ ಪಡೆಯಲು ಅರ್ಜಿ ಸಲ್ಲಿಸುವವರು ಹೆಚ್ಚಿದ ಬಡ್ಡಿದರದ ಅನ್ವಯ ಸಾಲ ಪಡೆಯುತ್ತಾರೆ. ಈ ನಿರ್ಧಾರವು ಬ್ಯಾಂಕಿನ ಲಾಭದಾಯಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ಬಂದಿದೆ.

ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್‌ ಕಡ್ಡಾಯ

sbi home loan interest rates revision: What are the benefits for borrowers ?

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories