ಟಾಟಾ ಕರ್ವ್ ದಾಖಲೆಯ ಮಾರಾಟ : ಏನಿದರ ವಿಶೇಷತೆ ? ಬೆಲೆ ಎಷ್ಟು ಗೊತ್ತಾ ?

tata curvv record sales : ಟಾಟಾ ಮೋಟಾರ್ಸ್‌ ಹೊಸ ವಿನ್ಯಾಸ, ಹೊಸ ತಂತ್ರಜ್ಞಾನದ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆ ಆಗಿರುವ ಟಾಟಾ ಕರ್ವ ಇದೀಗ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.

ಟಾಟಾ ಕಂಪೆನಿಯ ನೂತನ ಕೂಪೆ-ಎಸ್‍ಯುವಿ ಟಾಟಾ ಕರ್ವ್, ತನ್ನ ವಿಶಿಷ್ಟ ವಿನ್ಯಾಸ ಮತ್ತು ಆಕರ್ಷಕ ವೈಶಿಷ್ಟ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿರುವ ಈ ಕಾರಿನ ಆರಂಭಿಕ ಬೆಲೆ 10 ಲಕ್ಷ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ. ಅದ್ರಲ್ಲೂ ಟಾಪ್-ಎಂಡ್ ಮಾದರಿಯ ಕಾರುಗಳಿಗೆ ₹ 19.52 ಲಕ್ಷದವರೆಗೆ (ಎಕ್ಸ್-ಶೋರೂಂ) ಬೆಲೆಯಿದೆ.

ಟಾಟಾ ಕರ್ವ್‌ ಕಾರಿನ ವೈಶಿಷ್ಟ್ಯತೆ ಏನು ?

ಟಾಟಾ ಕರ್ವ್ ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ. ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ 360 ಡಿಗ್ರಿ ಕ್ಯಾಮೆರಾ, ಪನಾರಮಿಕ್ ಸನ್‌ರೂಫ್‌, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕಾರಿನ ಇಂಟೀರಿಯರ್‌ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದೆ.

tata curvv record sales features and price Kannada News

ಇಂಜಿನ್‌ ಮತ್ತು ಕಾರ್ಯಕ್ಷಮತೆ ಹೇಗಿದೆ ?

ಕರ್ವ್ ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಟರ್ಬೊ-ಪೆಟ್ರೋಲ್ (118 bhp) ಮತ್ತು ಹೈಪರಿಯನ್ GDI ಎಂಜಿನ್ (123 bhp) ಆಯ್ಕೆಗಳಲ್ಲಿ ಲಭ್ಯವಿದೆ. ಡೀಸೆಲ್ ಮಾದರಿಯು 1.5-ಲೀಟರ್ ಕ್ರಿಯೋಜೆಟ್ ಡೀಸೆಲ್ ಎಂಜಿನ್ (116 bhp) ಹೊಂದಿದೆ.

ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ (DCT) ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡುತ್ತಿದೆ. ಇಂಧನ ದಕ್ಷತೆಯಲ್ಲಿ, ಪೆಟ್ರೋಲ್ ಆವೃತ್ತಿಯು ಸುಮಾರು 17-18 kmpl ಮತ್ತು ಡೀಸೆಲ್ ಆವೃತ್ತಿಯು 19 kmpl ಮೈಲೇಜ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಎಲೆಕ್ಟ್ರಿಕ್ ಆವೃತ್ತಿಯು ಒಂದೇ ಚಾರ್ಜ್‌ನಲ್ಲಿ 450 ಕಿ.ಮೀಗಳಿಗಿಂತ ಹೆಚ್ಚು ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಇದನ್ನೂ ಓದಿ : ಮಳೆಗಾಲದಲ್ಲಿ ಇವಿ ಕಾರುಗಳನ್ನು ಸಂರಕ್ಷಿಸುವುದು ಹೇಗೆ ?

ಒಂದೇ ವರ್ಷದಲ್ಲಿ ಟಾಟಾ ಕರ್ವ್‌ ದಾಖಲೆಯೆ ಮಾರಾಟ

ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಟಾಟಾ ಕರ್ವ್ ಕೂಪೆ ಎಸ್‌ಯುವಿಯ ಮಾರಾಟದ ಅಂಕಿಅಂಶಗಳು ಉತ್ತಮವಾಗಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2024ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಒಟ್ಟು 8,218 ಯೂನಿಟ್‌ಗಳು ಮಾರಾಟವಾಗಿವೆ.

ಸೆಪ್ಟೆಂಬರ್‌ನಲ್ಲಿ 4,763 ಯೂನಿಟ್‌ಗಳು ಮಾರಾಟವಾಗಿದ್ದು, ಆಗಸ್ಟ್‌ಗೆ ಹೋಲಿಸಿದರೆ ಶೇ. 38ರಷ್ಟು ಬೆಳವಣಿಗೆಯನ್ನು ಕಂಡಿದೆ. ಟಾಟಾ ಹ್ಯಾರಿಯರ್‌ನ ಮಾಸಿಕ ಮಾರಾಟಕ್ಕಿಂತ ಹೆಚ್ಚಾಗಿದ್ದು, ನೆಕ್ಸಾನ್‌ಗಿಂತ ಸ್ವಲ್ಪ ಕಡಿಮೆಯಿದೆ. ಇದು ಕಂಪನಿಯ ಒಟ್ಟಾರೆ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

tata curvv record sales features and price Kannada News

ಜನವರಿ 2025ರಲ್ಲಿ 3,087 ಯೂನಿಟ್‌ಗಳು ಮತ್ತು ಫೆಬ್ರವರಿಯಲ್ಲಿ 3,483 ಯೂನಿಟ್‌ಗಳು ಮಾರಾಟವಾಗಿವೆ. ಇತ್ತೀಚೆಗೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 2025ರ ಜೂನ್‌ನಲ್ಲಿ 2,060 ಯೂನಿಟ್‌ಗಳು ಮತ್ತು ಜುಲೈನಲ್ಲಿ 2,005 ಯೂನಿಟ್‌ಗಳು ಮಾರಾಟವಾಗಿವೆ.

ಇದನ್ನೂ ಓದಿ : 2025ರಲ್ಲಿ ಬಿಡುಗಡೆ ಆಗಲಿರುವ ಟಾಪ್‌ 12 ಇವಿ ಕಾರುಗಳು

ಈ ಯಶಸ್ಸಿಗೆ ಪ್ರಮುಖ ಕಾರಣ, ಟಾಟಾ ಕರ್ವ್ ಐಸಿಇ (ಪೆಟ್ರೋಲ್/ಡೀಸೆಲ್) ಮತ್ತು ಇವಿ ಆವೃತ್ತಿಗಳಲ್ಲಿ ಲಭ್ಯವಿರುವುದು. ಗ್ರಾಹಕರಿಗೆ ವಿವಿಧ ವೈಶಿಷ್ಟ್ಯಗಳು ಮತ್ತು ಬೆಲೆಯ ಆಯ್ಕೆಗಳನ್ನು ಒದಗಿಸುತ್ತಿರುವುದು ಇದರ ಜನಪ್ರಿಯತೆಯನ್ನು ಹೆಚ್ಚಿಸಿದೆ.

tata curvv record sales features and price Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories