ರಸ್ತೆ ಅಪಘಾತ ಪರಿಹಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು : ಮೃತರ 2ನೇ ಪತ್ನಿಗೂ ಸಮಾನ ಪಾಲು
ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ವಾಹನ ಅಪಘಾತದ ಪರಿಹಾರ ಘೋಷಿಸುವಾಗ ಮೃತರ ಎರಡನೇ ಪತ್ನಿ ಹಾಗೂ ಮಕ್ಕಳಿಗೂ ಮೊದಲ ಪತ್ನಿಯಂತೆಯೇ ಸಮಾನವಾದ ಹಕ್ಕು ಮತ್ತು ಪರಿಹಾರ ಸಿಗಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ವಾಹನ ಅಪಘಾತದ ಪರಿಹಾರ ಘೋಷಿಸುವಾಗ ಮೃತರ ಎರಡನೇ ಪತ್ನಿ ಹಾಗೂ ಮಕ್ಕಳಿಗೂ ಮೊದಲ ಪತ್ನಿಯಂತೆಯೇ ಸಮಾನವಾದ ಹಕ್ಕು ಮತ್ತು ಪರಿಹಾರ ಸಿಗಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಆದೇಶದೊಂದಿಗೆ ಈ ಹಿಂದೆ ನಿಗದಿಯಾಗಿದ್ದ 15 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು ಬರೋಬ್ಬರಿ 30.12 ಲಕ್ಷ ರೂಪಾಯಿಗಳಿಗೆ ದುಪ್ಪಟ್ಟುಗೊಳಿಸಲಾಗಿದೆ.
ದಾವಣಗೆರೆಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.
ಮೋಟಾರು ವಾಹನ ಕಾಯ್ದೆಯು ಸಂತ್ರಸ್ತರ ಒಳಿತಿಗಾಗಿ ಇರುವ ಸಾಮಾಜಿಕ ಕಾನೂನಾಗಿದೆ. ಇಲ್ಲಿ ಮೃತರ ಕಾನೂನುಬದ್ಧ ವಾರಸುದಾರರು ಎಂದರೆ ಕೇವಲ ಮೊದಲ ಪತ್ನಿ ಅಥವಾ ಪೋಷಕರಿಗೆ ಮಾತ್ರ ಸೀಮಿತವಲ್ಲ. ಮೃತನ ದುಡಿಮೆಯನ್ನು ನಂಬಿ ಜೀವನ ನಡೆಸುತ್ತಿದ್ದ ಮತ್ತು ಆತನ ಸಾವಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪ್ರತಿಯೊಬ್ಬ ಅವಲಂಬಿತರಿಗೂ ಈ ಪರಿಹಾರದ ಹಣದ ಮೇಲೆ ಸಂಪೂರ್ಣ ಹಕ್ಕಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
Also Read: ಗೃಹಲಕ್ಷ್ಮೀ ಬೆನ್ನಲ್ಲೇ ಪಿಂಚಣಿ ಯೋಜನೆಗೆ ಮೇಜರ್ ಸರ್ಜರಿ :16 ಲಕ್ಷಕ್ಕೂ ಅಧಿಕ ಜನರ ಪೆನ್ಶನ್ ತಾತ್ಕಾಲಿಕ ಸ್ಥಗಿತ
ವಿಚಾರಣೆ ವೇಳೆ ಇಬ್ಬರೂ ಪತ್ನಿಯರು ಕೋರ್ಟ್ ನೀಡುವ ಹಣವನ್ನು ತಲಾ ಶೇಕಡಾ 50 ರಂತೆ ಸಮಾನವಾಗಿ ಹಂಚಿಕೊಳ್ಳಲು ಸೌಹಾರ್ದಯುತವಾಗಿ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಟ್ರಿಬ್ಯೂನಲ್ ಮೃತನ ಮಾಸಿಕ ಆದಾಯವನ್ನು ಕೇವಲ ಹತ್ತು ಸಾವಿರ ರೂಪಾಯಿ ಎಂದು ಅಂದಾಜಿಸಿ ತಪ್ಪು ಲೆಕ್ಕಾಚಾರ ಮಾಡಿತ್ತು.
ಹೈಕೋರ್ಟ್ ಇದನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕೋಷ್ಟಕದ ಅನ್ವಯ 14,000 ರೂಪಾಯಿಗಳಿಗೆ ಹೆಚ್ಚಿಸಿ, ಭವಿಷ್ಯದ ಆದಾಯದ ಬೆಳವಣಿಗೆಯನ್ನು ಶೇ. 40 ರಷ್ಟು ಸೇರಿಸಿದೆ. ಅಂತಿಮವಾಗಿ ಇನ್ಶೂರೆನ್ಸ್ ಕಂಪನಿಯು ಶೇಕಡಾ 9 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಈ ಒಟ್ಟು 30,12,400 ರೂಪಾಯಿಗಳ ಮೊತ್ತವನ್ನು ಮುಂದಿನ ಎಂಟು ವಾರಗಳಲ್ಲಿ ಸಂತ್ರಸ್ತ ಕುಟುಂಬಕ್ಕೆ ಪಾವತಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
High Court makes landmark ruling on road accident compensation Equal share for deceaseds second wife



