ಗೃಹಲಕ್ಷ್ಮೀ ಬೆನ್ನಲ್ಲೇ ಪಿಂಚಣಿ ಯೋಜನೆಗೆ ಮೇಜರ್ ಸರ್ಜರಿ :16 ಲಕ್ಷಕ್ಕೂ ಅಧಿಕ ಜನರ ಪೆನ್ಶನ್ ತಾತ್ಕಾಲಿಕ ಸ್ಥಗಿತ
ರಾಜ್ಯದಲ್ಲಿ ಅನರ್ಹರು ಮತ್ತು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿರುವವರಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆಯು ಭರ್ಜರಿ ಸರ್ಜರಿ ಆರಂಭಿಸಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಬೆನ್ನಲ್ಲೇ, ಈಗ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ 16.42 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗಳನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಅನರ್ಹರು ಮತ್ತು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿರುವವರಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆಯು ಭರ್ಜರಿ ಸರ್ಜರಿ ಆರಂಭಿಸಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಬೆನ್ನಲ್ಲೇ, ಈಗ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ 16.42 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗಳನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ರಾಜ್ಯಾದ್ಯಂತ ವೃದ್ಧಾಪ್ಯ, ವಿಧವೆ ಹಾಗೂ ವಿಕಲಚೇತನರ ಪಿಂಚಣಿ ಸೇರಿದಂತೆ ಒಟ್ಟು 83.11 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದಾರೆ. ಆದರೆ ಇಲಾಖೆಯು ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಬರೋಬ್ಬರಿ 23.13 ಲಕ್ಷ ಖಾತೆಗಳ ವಿವರಗಳ ಬಗ್ಗೆ ತೀವ್ರ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಆಧಾರಿತ ‘ಸಂಯೋಜನೆ ಆ್ಯಪ್’ ಮೂಲಕ ಸಂದೇಹಾಸ್ಪದ ಖಾತೆಗಳ ನೈಜತೆಯನ್ನು ಪರಿಶೀಲಿಸಲು ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿತ್ತು.
ಈ ವಿಶೇಷ ಜಂಟಿ ಪರಿಶೀಲನೆ ವೇಳೆ ನಕಲಿ ದಾಖಲೆ ಸಲ್ಲಿಕೆ, ತಪ್ಪು ವಯಸ್ಸಿನ ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸಾವಿರಾರು ಜನರು ನೀಡಿದ ವಿಳಾಸದಲ್ಲಿ ವಾಸವಾಗಿರದೆ ಇರುವುದು ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸದೇ ಇರುವುದು ಪತ್ತೆಯಾಗಿದೆ. ಹೀಗಾಗಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಒಟ್ಟು 16,42,303 ಜನರ ಪಿಂಚಣಿಯನ್ನು ತಕ್ಷಣದಿಂದಲೇ ತಡೆಹಿಡಿಯಲಾಗಿದೆ.
Also Read: ನಟ ದರ್ಶನ್ ಪುತ್ರ ವಿನೀಶ್ ಇದ್ದ ಕಾರು ಬೈಕ್ಗೆ ಡಿಕ್ಕಿ! ವಿಜಯಲಕ್ಷ್ಮೀ ಪ್ರತಿಕ್ರಿಯೆ
ಇನ್ನುಳಿದಂತೆ ಸಮರ್ಪಕ ದಾಖಲೆ ಹೊಂದಿದ್ದ 3.35 ಲಕ್ಷ ಫಲಾನುಭವಿಗಳ ಖಾತೆಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗಿದ್ದು, ಮೇ ತಿಂಗಳಲ್ಲಿ ಇವರೆಲ್ಲರಿಗೂ ನಿಯಮಿತವಾಗಿ ಪಿಂಚಣಿ ತಲುಪಿಸಲಾಗಿದೆ. ಸದ್ಯ ಪಿಂಚಣಿ ವಂಚಿತರಾಗಿರುವ ಆತಂಕದಲ್ಲಿರುವ ನಾಗರಿಕರಿಗೆ ಸರ್ಕಾರವು ಮತ್ತೊಂದು ಅವಕಾಶ ನೀಡಿದೆ. ಈ ಸಂಬಂಧ ಕಂದಾಯ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದು, ಪಿಂಚಣಿ ಸ್ಥಗಿತಗೊಂಡಿರುವ ಪ್ರತಿಯೊಬ್ಬರಿಗೂ ಆಯಾ ತಾಲ್ಲೂಕಿನ ತಹಶೀಲ್ದಾರ್ ಮೂಲಕ ಶೀಘ್ರದಲ್ಲೇ ಅಧಿಕೃತ ತಿಳಿವಳಿಕೆ ಪತ್ರ ಅಥವಾ ನೋಟಿಸ್ ಕಳುಹಿಸಲಾಗುವುದು.
ನೋಟಿಸ್ ತಲುಪಿದ ದಿನದಿಂದ ಮುಂದಿನ 30 ದಿನಗಳ ಒಳಗಾಗಿ ಬಾಧಿತರು ತಮ್ಮ ವಯಸ್ಸು, ಆದಾಯ ಹಾಗೂ ನಿವಾಸದ ಅಸಲಿ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿ ಅರ್ಹತೆಯನ್ನು ಸಾಬೀತುಪಡಿಸಬೇಕು. ಸೂಕ್ತ ದಾಖಲಾತಿ ಒದಗಿಸಿದರೆ ಮಾತ್ರ ಅಂತಹವರ ಮಾಸಿಕ ಪಿಂಚಣಿಯನ್ನು ಪುನರಾರಂಭಿಸಲಾಗುವುದು ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.
Major surgery for pension scheme on the heels of Gruhalakshmi Pension of over 16 lakh people temporarily suspended



