₹20 ಸಾವಿರಕ್ಕೂ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್ಫೋನ್

ಸ್ಮಾರ್ಟ್ಫೋನ್ ಜಗತ್ತಿನಲ್ಲಿ ಸ್ಯಾಮ್‌ಸಂಗ್ ಕಂಪನಿಯು ಪಾರುಪತ್ಯ ಸಾಧಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವಿದೇಶಗಳಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ( Samsung Galaxy A17 5G)ಮೊಬೈಲ್ ಎಂಟ್ರಿ ಕೊಡ್ತಿದೆ.
ಇದೀಗ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಎಂಬಂತೆ ಭಾರತದಲ್ಲಿ ಶೀಘ್ರದಲ್ಲಿಯೇ ಸ್ಯಾಮ್‌ಸಂಗ್ ಎ17 ಫೋನ್ನ್ನು ಬಿಡುಗಡೆಗೊಳಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಈ ಫೋನ್ನ ಬೆಲೆ ಎಷ್ಟಿರಬಹುದು ಎಂಬುದು ಕೂಡ ಲಾಂಚ್ಗೆ ಮೊದಲೇ ಮಾಹಿತಿ ಲಭ್ಯವಾಗಿದೆ. ಈ ನೂತನ ಫೋನ್ 3 ಬಗೆಯ ಸ್ಟೋರೆಜ್ ಕಾನ್ಫಿಗರೇಷನ್ಗಳನ್ನು ಹೊಂದಿರಲಿದೆ ಎನ್ನಲಾಗಿದೆ.
ಯುರೋಪಿಯನ್ ವರ್ಷನ್ನಲ್ಲಿ ಕೇವಲ ಒಂದು ಬಗೆಯ ಸ್ಟೋರೇಜ್ ಕಾನ್ಫಿಗರೇಷನ್ ಮಾತ್ರ ಲಭ್ಯವಿದೆ. ಆಗಸ್ಟ್ 6ರಂದು ಈ ಫೋನ್ನ ಯುರೋಪಿಯನ್ ವರ್ಷನ್ ಬಿಡುಗಡೆಯಾಗಿದ್ದು.
ಈ ಹೊಸ ಮಾದರಿಯ ಮೊಬೈಲ್ ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರು ಕಪ್ಪು, ನೀಲಿ ಹಾಗೂ ಬೂದು ಬಣ್ಣಗಳಲ್ಲಿ ಮೊಬೈಲ್ ಖರೀದಿ ಮಾಡಬಹುದಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A17 5G ಸ್ಮಾರ್ಟ್ ಫೋನ್ಗಳ ಬೆಲೆ :
ಸ್ಯಾಮ್‌ಸಂಗ್ ಕಂಪೆನಿಯ ಈ ಹೊಸ ಗ್ಯಾಲಕ್ಸಿ A17 5G ಸ್ಮಾರ್ಟ್ಫೋನ್ 6ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ಗಳಿಗೆ 18,999 ರೂಪಾಯಿ ಬೆಲೆಯಿದೆ..
ಅದೇ ರೀತಿ 8ಜಿಬಿ RAM ಹಾಗೂ 256 ಜಿಬಿ ಸ್ಟೋರೇಜ್ಗಳನ್ನು ಹೊಂದಿರುವ ಫೋನ್ಗಳು 20,499 ರೂಪಾಯಿಗಳಿಂದ 23,499 ರೂಪಾಯಿ ಮೌಲ್ಯವನ್ನು ಹೊಂದಿರಲಿದೆ.
ಆಗಸ್ಟ್ 6 ರಂದು ಯುರೋಪ್ ಮಾರ್ಕೇಟ್‌ನಲ್ಲಿ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ A17 5Gಯ ಬೆಲೆ EUR 239 ಇದೆ. ಅಂದರೆ ಭಾರತೀಯ ರೂಪಾಯಿ ಅಂದಾಜು 24,393 ರೂಪಾಯಿ ಆಗಿರಲಿದೆ.
ಈ ಫೋನ್ಗಳು 4ಜಿಬಿ RAM ಹಾಗೂ 128ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಸೌತ್ ಕೊರೋನಿಕ್ ಟೆಕ್ ಕಂಪನಿಯು ಈ ಮೊಬೈಲ್ ಫೋನ್ಗಳನ್ನು ಕಪ್ಪು, ನೀಲಿ ಹಾಗೂ ಬೂದು ಬಣ್ಣಗಳಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡಿದೆ.
ಇದನ್ನೂ ಓದಿ : ಐಪೋನ್ 16 ಪ್ರೋ ಬೆಲೆಯಲ್ಲಿ 20 ಸಾವಿರ ರೂಪಾಯಿ ಕಡಿತ
ಸ್ಯಾಮ್‌ಸಂಗ್ ಗ್ಯಾಲಕ್ಸಿ A17 5G ಭಾರತೀಯ ಸ್ಮಾರ್ಟ್ಫೋನ್ಗಳ ವಿಶೇಷತೆ :
ಸ್ಯಾಮ್‌ಸಂಗ್ ಗ್ಯಾಲಕ್ಸಿ A17 5G ಸ್ಮಾರ್ಟ್ಫೋನ್ ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವರ್ಷನ್ನಲ್ಲಿಯೂ ಅದೇ ರೀತಿಯ ಫೀಚರ್ಗಳನ್ನು ಹೊಂದಿರಬಹುದು .
ಯುರೋಪ್ ಮಾರುಕಟ್ಟೆಯಲ್ಲಿನ ಸ್ಮಾರ್ಟ್ಫೋನ್ ಅಂತೆ ಭಾರತದಲ್ಲಿಯೂ ಈ ಫೋನ್ಗಳು ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7 ಹೊಂದಿದೆ ಎನ್ನಬಹುದಾಗಿದೆ.
ಇದನ್ನೂ ಓದಿ : ಏರ್‌ಟೆಲ್ ಗ್ರಾಹಕರ ಗಮನಕ್ಕೆ : ಯಾವ ರಿಚಾರ್ಜ್ ಪ್ಲ್ಯಾನ್ ಬೆಸ್ಟ್
ಈ ಸ್ಮಾರ್ಟ್ಫೋನ್ಗಳು 6.7ಇಂಚಿನ ಹಾಗೂ Infinity-U Super AMOLED ಡಿಸ್ಪ್ಲೇ ಹೊಂದಿದೆ. ಇದರಲ್ಲಿ IP54 ಕೂಡ ಇರುವುದರಿಂದ ಧೂಳಿನಿಂದ ರಕ್ಷಣೆ ಪಡೆಯಬಹುದಾಗಿದೆ.
ಇದು ಸ್ಯಾಮ್‌ಸಂಗ್ ನ 5nm ಆಕ್ಟಾ ಕೋರ್ Exynos 1330 ಚಿಪ್ಸೆಟ್ಗಳಿಂದ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಯಲ್ಲಿ Mali-G68 MP2 GPU, 8GBವರೆಗೆ RAM ಹಾಗೂ 256ಜಿಬಿವರೆಗೆ ಇಂಟರ್ನಲ್ ಸ್ಟೋರೇಜ್ ಇರಲಿದೆ.
Samsung Galaxy A17 5G launch just 20000



