BBSNL 4G ಬಳಕೆದಾರರಿಗೆ ಸಿಹಿಸುದ್ದಿ : ಕೇವಲ 1 ರೂಪಾಯಿಗೆ, 30 ದಿನ ವ್ಯಾಲಿಡಿಟಿ, ಅನಿಯಮಿತ ಕರೆ

BSNL 4g : ಪ್ರಿಪೇಯ್ಡ್​ ಸಿಮ್​ಗಳ ರಿಚಾರ್ಜ್​ ಪ್ಲಾನ್​ಗಳ ದರ ಗಗನಕ್ಕೇರಿರುವ ಬೆನ್ನಲ್ಲೇ ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್​ಎನ್​ಎಲ್​ ತನ್ನ ಗ್ರಾಹಕರಿಗಿಂದೇ ಅತ್ಯಂತ ಕಡಿಮೆ ದರದ ರಿಚಾರ್ಜ್ ಪ್ಲಾನ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

84 ದಿನಗಳ ಪ್ಲಾನ್​ ಇದಾಗಿದ್ದು ಪ್ರತಿನಿತ್ಯ 3ಜಿಬಿ ಡೇಟಾ ಹಾಗೂ ಅನಿಯಮಿತ ಕರೆಯ ಸೌಲಭ್ಯ ನಿಮಗೆ ದೊರೆಯಲಿದೆ. ಏನಿದು ಪ್ಲಾನ್​ ? ಇದರ ದರವೆಷ್ಟು ಎಂಬುದನ್ನು ತಿಳಿದುಕೊಳ್ಳೋಣ.

599 ರೂಪಾಯಿಗೆ ಅತ್ಯದ್ಭುತ ರಿಚಾರ್ಜ್ ಪ್ಲಾನ್​ ಪರಿಚಯಿಸಿದೆ ಬಿಎಸ್​ಎನ್​ಎಲ್

ಎಕ್ಸ್​ನಲ್ಲಿ ಬಿಎಸ್​ಎನ್​ಎಲ್ ಕಂಪನಿಯು ತನ್ನ ಈ ಹೊಸ ಹಾಗೂ ವಿಶೇಷ ಪ್ರಿಪೇಯ್ಡ್​ ರಿಚಾರ್ಜ್​ ಪ್ಲಾನ್​ ಬಗ್ಗೆ ಮಾಹಿತಿ ನೀಡಿದೆ. ಈ ಹೊಸ ರಿಚಾರ್ಜ್ ಪ್ಲಾನ್​ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ಯಾವುದೇ ನೆಟ್​ವರ್ಕ್​ಗಳಿಗೆ ಅನಿಯಮಿತ ಕರೆಯ ಸೌಲಭ್ಯವನ್ನು ಇದು ನೀಡಲಿದೆ.

ಇದರ ಜೊತೆಯಲ್ಲಿ ಪ್ರತಿನಿತ್ಯ 3 ಜಿಬಿ ಹೈಸ್ಪೀಡ್​ ಡೇಟಾವನ್ನು ಕೂಡ ಗ್ರಾಹಕರು ಆನಂದಿಸಬಹುದಾಗಿದೆ. ಹಾಗೂ ನಿತ್ಯ 100 ಫ್ರೀ ಎಸ್​ಎಂಎಸ್​ಗಳನ್ನೂ ಮಾಡಬಹುದಾಗಿದೆ.

ಇದನ್ನೂ ಓದಿ : 20 ಸಾವಿರ ಒಳಗೆ ಕೈ ಸೇರುತ್ತೆ ಅತ್ಯಾಧುನಿಕ ತಂತ್ರಜ್ಞಾನದ ಸ್ಯಾಮ್‌ಸಂಗ್‌ ಪೋನ್‌

BSNL ನಿಂದ 1ರೂಪಾಯಿಯ ಆಫರ್​ ಕೂಡ ಲಭ್ಯ :

ಈ ಪ್ಲಾನ್​ನ್ನು ಹೊರತುಪಡಿಸಿ ಇಂದಿಗೂ BSNL ತನ್ನ ಗ್ರಾಹಕರಿಗೆ ಕೇವಲ 1 ರೂಪಾಯಿಗೆ ವಿಶೇಷ ಆಫರ್​ ಕೂಡ ನೀಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ BSNL ಕಂಪನಿಯೂ ಫ್ರೀಡಂ ಆಫರ್​ ಘೋಷಣೆ ಮಾಡಿತ್ತು.

ಇಂದಿಗೂ ಈ ಆಫರ್​ ಲಭ್ಯವಿದ್ದು ಕೇವಲ 1 ರೂಪಾಯಿ ನೀಡಿ ಗ್ರಾಹಕರು ಬಿಎಸ್​ಎನ್​ಎಲ್ ಸಿಮ್​ ಖರೀದಿ ಮಾಡಬಹುದಾಗಿದೆ. ಕೇವಲ ಸಿಮ್​ ಮಾತ್ರವಲ್ಲ ಇದರ ಜೊತೆಯಲ್ಲಿ ನಿಮಗೆ ಕರೆ ಹಾಗೂ ಡೇಟಾ ಸೌಲಭ್ಯ ಕೂಡ ದೊರೆಯುತ್ತಿದೆ.

ನೀವೇನಾದರೂ ಹೊಸ ಬಿಎಸ್​ಎನ್​ಎಲ್ ಸಿಮ್​ ಖರೀದಿಸಿದ್ದರೆ ಕೇವಲ 1 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ ದೊರೆಯಲಿದೆ. ಈ 30 ದಿನಗಳಲ್ಲಿ ನೀವು ಪ್ರತಿನಿತ್ಯ 2 ಜಿಬಿ ಡೇಟಾ ಹಾಗೂ ಯಾವುದೇ ನೆಟ್​ವರ್ಕ್​ಗಳಿಗೆ ಅನಿಯಮಿತ ಕರೆಯ ಮಜಾವನ್ನು ಆನಂದಿಸಬಹುದಾಗಿದೆ. ಅಂದಹಾಗೆ ಇದು ಸ್ವಾತಂತ್ರ್ಯ ದಿನಾಚರಣೆಯ ಆಫರ್​ ಆಗಿರುವುದರಿಂದ ಆಗಸ್ಟ್​ 31ರವರೆಗೆ ಮಾತ್ರ ಲಭ್ಯವಿದೆ.

Good news for BSNL 4g Customers : Lowest price unlimited calling Unlimited calling

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories