ಇಂಟೆಲಿಜೆನ್ಸ್ ಬ್ಯೂರೋ ನೇಮಕಾತಿ: 394 ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
IB JIO Recruitment 2025: ಗೃಹ ಸಚಿವಾಲಯದ ಗುಪ್ತಚರ ಬ್ಯೂರೋ ಸ್ವಲ್ಪ ದಿನಗಳ ಹಿಂದೆ 4987 ಭದ್ರತಾ ಸಹಾಯಕ ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.
ಇದೀಗ ಮತ್ತೊಮ್ಮೆ ಜೂನಿಯರ್ ಇನ್ವೆಸ್ಟಿಗೇಷನ್ ಆಫೀಸರ್ ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಬಂಪರ್ ಆಫರ್ನ್ನು ನೀಡುತ್ತದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಐಬಿ, ಖಾಲಿ ಇರುವ 394 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಯುವಕರು ಆಗಸ್ಟ್ 23 ರಿಂದ ಸೆಪ್ಟೆಂಬರ್ 14 ಮಧ್ಯಾಹ್ನ 11:59 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಗೃಹ ಸಚಿವಾಲಯದ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ, ಅಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸ ಬೇಕು.
IB JIO Recruitment 2025: ಹುದ್ದೆಗೆ ಸಂಬಂಧಿಸಿದ ವಿವರಗಳು
ಹುದ್ದೆಯ ಹೆಸರು
ಜೂನಿಯರ್ ಇಂಟೆಲಿಜನ್ಸ್ ಆಫೀಸರ್ ಗ್ರೇಡ್ – 2
ಒಟ್ಟು ಹುದ್ದೆಗಳು
394
ವಯೋಮಿತಿ
ಜೂನಿಯರ್ ಇಂಟೆಲಿಜನ್ಸ್ ಆಫೀಸರ್ ಗ್ರೇಡ್ – 2 ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 27 ವರ್ಷಗಳ ಒಳಗೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆಯಿರುತ್ತದೆ.
ಆಯ್ಕೆ ಪ್ರಕ್ರಿಯೆ
ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು 3 ಹಂತದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.
ಇದನ್ನೂ ಓದಿ: ಬಿಪಿಎಸ್ಸಿ 539 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆ
- ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ / ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಅಥವಾ ಐಟಿ / ಸಿಎಸ್ ಅಥವಾ ಸಿಎಸ್ಇ/ ಕಂಪ್ಯೂಟರ್ ಅಪ್ಲಿಕೇಶನ್ಸ್ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ. ಅಥವಾ
- ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ / ಕಂಪ್ಯೂಟರ್ ವಿಜ್ಞಾನ / ಭೌತಶಾಸ್ತ್ರ / ಗಣಿತದೊಂದಿಗೆ ವಿಜ್ಞಾನದಲ್ಲಿ ಪದವಿ. ಅಥವಾ
- ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಂಪ್ಯೂಟರ್ ಅಪ್ಲಿಕೇಶನ್ಗಳಲ್ಲಿ ಪದವಿ.
ಸಂಬಳ: 25500 ರೂ. – 81100 ರೂ.
ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
IB JIO Recruitment 2025: ಅರ್ಜಿ ಸಲ್ಲಿಕೆ ಹೇಗೆ?
– ಮೊದಲಿಗೆ ಇಂಟೆಲಿಜನ್ಸ್ ಬ್ಯೂರೋದ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ.
– ಅಲ್ಲಿ ರೆಜಿಸ್ಟ್ರೇಷನ್ ವಿಂಡೋಗೆ ಹೋಗುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.
– ನಂತರ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
– ನಿಮ್ಮ ಇತ್ತೀಚೆಗಿನ ಭಾವಚಿತ್ರ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
– ನಂತರ ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ.
– ಭವಿಷ್ಯದ ಉಲ್ಲೇಖಗಳಿಗಾಗಿ ಅರ್ಜಿ ನಮೂನೆಯ ಪ್ರತಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ.
ಇದನ್ನೂ ಓದಿ: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ನಲ್ಲಿ ಖಾಲಿ ಇರುವ 750 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
(IB JIO Recruitment 2025 apply online for junior intelligence officer grade 2 within September 14)



