ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ
Vastu Tips For Donation: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಎಂದಿಗೂ ದುಃಖ, ಕಷ್ಟಗಳು ಬರಬಾರದು ಎಂದು ಬಯಸುತ್ತಾನೆ.
ಅದರಲ್ಲೂ ಲಕ್ಷ್ಮಿ ದೇವಿಯ ಕೃಪೆ ಸದಾ ತನ್ನ ಮೇಲಿರಬೇಕು, ಯಾವುದೇ ರೀತಿಯ ಆರ್ಥಿಕ ಸಂಕಷ್ಟಗಳು ಬರಬಾರದು ಎಂದು ಬಯಸುತ್ತಾನೆ.
ಆದರೆ ಕೆಲವೊಮ್ಮೆ ಶ್ರಮವಹಿಸಿ ಕೆಲಸ ಮಾಡಿದರೂ ಕೂಡಾ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕೆ ನಾವು ಮಾಡುವ ಕೆಲಸಗಳೇ ಕಾರಣ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಜೀವನದಲ್ಲಿ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಆ ಕೆಲಸಗಳು ಕಾರಣವಾಗುತ್ತವೆ. ಹಿಂದೂ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ.
ಆದರೆ ಯಾವ ವಸ್ತುಗಳನ್ನು ಯಾವಾಗ ದಾನ ಮಾಡಬೇಕು ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಕೆಲವು ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ.
ಹಾಗೆ ದಾನ ಮಾಡುವುದನ್ನು ತಪ್ಪಿಸಬೇಕು ಎಂದು ವಾಸ್ತು ಹೇಳುತ್ತದೆ. ಅದರಿಂದ ಜೀವನದಲ್ಲಿರುವ ಕಷ್ಟಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಹಾಗಾದರೆ ಸೂರ್ಯಾಸ್ತದ ನಂತರ ಯಾವ ವಸ್ತುಗಳನ್ನು ದಾನ ಮಾಡಬಾರದು ಎಂದು ತಿಳಿಯೋಣ.
Vastu Tips For Donation: ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ
ಉಪ್ಪು
ಉಪ್ಪನ್ನು ನಕಾರಾತ್ಮಕ ಶಕ್ತಿಯಿಂದ ದೂರವಿರಲು ಬಳಸಲಾಗುತ್ತದೆ. ಸಂಜೆ ಉಪ್ಪನ್ನು ದಾನ ಮಾಡುವುದರಿಂದ ನಕಾರಾತ್ಮಕ ಶಕ್ತಿ ಬಲಗೊಳ್ಳುತ್ತದೆ.
ಆದ್ದರಿಂದ ವಾಸ್ತು ಪ್ರಕಾರ ಸಂಜೆಯ ವೇಳೆ ಯಾರಿಗೂ ಉಪ್ಪನ್ನು ದಾನ ಮಾಡಬಾರದು. ಮುಸ್ಸಂಜೆಯ ವೇಳೆ ಉಪ್ಪನ್ನು ದಾನ ಮಾಡುವುದರಿಂದ ಗೃಹ ಕಲಹ ಹೆಚ್ಚಾಗುತ್ತದೆ.
ಕುಟುಂಬದ ಸದಸ್ಯರ ಸಂಬಂಧಗಳು ಹದಗೆಡುತ್ತವೆ. ಇದು ಪ್ರಗತಿ ಮತ್ತು ಸಮೃದ್ಧಿಗೆ ತಡೆಯನ್ನು ಒಡ್ಡುತ್ತದೆ.
ಇದನ್ನೂ ಓದಿ: ವಾಸ್ತು ಪ್ರಕಾರ ಈ ಶುಭ ಸಂಕೇತಗಳು ನಿಮ್ಮ ಕಣ್ಣಿಗೆ ಕಾಣಿಸಿದೆಯಾ? ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ಬಿಡಿ!
ಅರಿಶಿಣ
ಮುಸ್ಸಂಜೆಯ ವೇಳೆ ಅರಿಶಿಣವನ್ನು ಎಂದಿಗೂ ದಾನ ಮಾಡಬೇಡಿ. ಏಕೆಂದರೆ ಗುರು ಗ್ರಹವು ದುರ್ಬಲಗೊಳ್ಳುತ್ತದೆ. ಅರಿಶಿಣವನ್ನು ಗುರುವಿನ ಅಂಶವೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.
ಸೂರ್ಯಾಸ್ತದ ನಂತರ ಅದನ್ನು ದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ಗುರು ಗ್ರಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಗುರು ಬಲ ದುರ್ಬಲಗೊಳ್ಳುತ್ತದೆ.
ಹೀಗಾಗಿ ಸೂರ್ಯಾಸ್ತದ ನಂತರ ಅರಿಶಿಣವನ್ನು ದಾನ ಮಾಡುವುದನ್ನು ತಪ್ಪಿಸಿ.
ಈರುಳ್ಳಿ ಮತ್ತು ಬೆಳ್ಳುಳ್ಳಿ
ವಾಸ್ತು ಶಾಸ್ತ್ರದ ಪ್ರಕಾರ ಈರುಳ್ಳಿ ಮತ್ತ ಬೆಳ್ಳುಳ್ಳಿಯನ್ನು ತಾಮಸ ಆಹಾರವೆಂದು ಪರಿಗಣಿಸಲಾಗಿದೆ. ಇವೆರಡೂ ಕೇತು ಗ್ರಹಕ್ಕೆ ಸಂಬಂಧಿಸಿದೆ.
ಮುಸ್ಸಂಜೆಯ ವೇಳೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕೇತು ಗ್ರಹದ ಪ್ರಭಾವವು ಬಲಗೊಳ್ಳುತ್ತದೆ. ಅದು ನಕಾರಾತ್ಮಕ ಪರಿಣಾಮಗಳನ್ನು ತರುತ್ತದೆ.
ನಿಮ್ಮ ಕೆಲಸ ನಷ್ಟವಾಗಬಹುದು. ಈರುಳ್ಳಿ, ಬೆಳ್ಳುಳ್ಳಿಯನ್ನು ದಾನ ಮಾಡುವುದರಿಂದ, ದಾನ ಪಡೆದವರೊಂದಿಗೆ ನಿಮ್ಮ ಸಂಬಂಧ ಹದಗೆಡಬಹುದು.
ಆದ್ದರಿಂದ ಸಂಜೆಯ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದಾನ ಮಾಡಬೇಡಿ.
ಹಾಲು
ಸೂರ್ಯಾಸ್ತದ ನಂತರ ಹಾಲನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಹಾಲು ಚಂದ್ರನಿಗೆ ಸಂಬಂಧಪಟ್ಟಿದೆ. ಸೂರ್ಯಾಸ್ತದ ನಂತರ ಸೂರ್ಯ ದುರ್ಬಲನಾಗಿರುತ್ತಾನೆ.
ಹಾಗೆ ಚಂದ್ರನೂ ಕೂಡಾ ದುರ್ಬಲನಾಗುತ್ತಾನೆ. ಇದರಿಂದ ಮನೆಯಲ್ಲಿ ಶಾಂತಿ, ಸಂತೋಷ ಹಾಳಾಗುತ್ತದೆ. ಚಂಚಲ ಬುದ್ಧಿ ನಿಮ್ಮದಾಗುತ್ತದೆ.
ಇದಷ್ಟೇ ಅಲ್ಲದೇ ಲಕ್ಷ್ಮಿ ಮತ್ತು ಮಹಾವಿಷ್ಣು ಇಬ್ಬರೂ ಇರುವುದು ಕ್ಷೀರಸಾಗರದಲ್ಲಿ. ಆದ್ದರಿಂದ ಸಂಜೆಯ ಸಮಯದಲ್ಲಿ ಹಾಲನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ.
ಹಣ
ಸಾಮಾನ್ಯವಾಗಿ ಹಣವನ್ನು ಸಂಜೆಯ ಸಮಯದಲ್ಲಿ ಬೇರೆಯವರಿಗೆ ಕೊಡಲು ಯಾರೂ ಮುಂದಾಗುವುದಿಲ್ಲ. ಏಕೆಂದರೆ ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗೆ ಬರುತ್ತಿರುತ್ತಾಳೆ.
ಆದರೂ ಕೆಲವೊಮ್ಮೆ ಸಂಜೆಯ ಸಮಯದಲ್ಲಿ ಹಣವನ್ನು ಬೇರೆಯವರಿಗೆ ನೀಡುತ್ತವೆ. ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿ ಅವರ ಮನೆಗೆ ಹೋಗುತ್ತಾಳೆ. ಲಕ್ಷ್ಮಿ ದೇವಿಯ ಕೃಪೆ ದೂರವಾಗುತ್ತದೆ. ಅದರಿಂದ ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು.
9ಆದ್ದರಿಂದ ಮುಸ್ಸಂಜೆಯ ಸಮಯದಲ್ಲಿ ಯಾರಿಗೂ ಹಣವನ್ನು ನೀಡಬೇಡಿ.
ಇದನ್ನೂ ಓದಿ: ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದೇಕೆ ? ಗಂಟೆಯ ಶಬ್ದಕ್ಕಿರುವ ಮಹತ್ವವೇನು ?
(Never Donate these 5 things to anyone after sunset vastu tips for donation in kannada)



