ಪೂಜೆಯ ಸಮಯದಲ್ಲಿ ಗಂಟೆ ಬಾರಿಸುವುದೇಕೆ ? ಗಂಟೆಯ ಶಬ್ದಕ್ಕಿರುವ ಮಹತ್ವವೇನು ?
Bells in Hindu Worship: ಹಿಂದೂ ಸಂಪ್ರದಾಯದಲ್ಲಿ ಪೂಜೆ ಮಾಡುವಾಗ ಗಂಟೆ ಬಾರಿಸುವುದು ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಗಂಟೆಯಿಂದ ಹೊರಡುವ ನಾದವನ್ನು ಶುಭವೆಂದು ಪರಿಗಣಿಸಲಾಗಿದೆ.
ಈ ನಾದವು ದೇವರುಗಳನ್ನು ಮೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ಗಂಟೆ ನಾದವು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಇದು ಸುತ್ತಮುತ್ತಲಿನ ಪರಿಸರದಲ್ಲಿಯೂ ಧನಾತ್ಮಕ ಅಂಶ ಹರಡುವಂತೆ ಮಾಡುತ್ತದೆ.
ಸಕಾರಾತ್ಮಕ ಶಕ್ತಿಯನ್ನು ಜಾಗ್ರತಗೊಳಿಸಲು ಸಹಾಯ ಮಾಡುತ್ತದೆ. ಗಂಟೆಯಿಂದ ಹೊರಡುವ ಸುಮುಧರ ನಾದವು ದೇವಾನುದೇವತೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
ಜೊತೆಗೆ ಪೂಜೆಯ ಸಮಯದಲ್ಲಿ ಗಂಟೆಯನ್ನು ಬಾರಿಸುವುದರಿಂದ ಪೂಜೆಯಲ್ಲಿ ಏಕಾಗ್ರತೆ ಹೆಚ್ಚಿಸಿ, ದೇವರ ಸಾನಿಧ್ಯ ಪಡೆಯುವಂತೆ ಮಾಡುತ್ತದೆ.
ವಾಸ್ತವವಾಗಿ ಗಂಟೆಯನ್ನು ಬಾರಿಸುವುದರಿಂದ ಅಶಾಂತ ಸ್ಥಿತಿಯಲ್ಲಿರುವ ಮನಸ್ಸು ಶಾಂತ ಸ್ಥಿತಿಗೆ ಬರುತ್ತದೆ. ಸ್ಕಂದ ಪುರಾಣದ ಪ್ರಕಾರ ಗಂಟೆ ಬಾರಿಸುವುದರಿಂದ ಓಂ ಶಬ್ದ ಉತ್ಪತ್ತಿಯಾಗುತ್ತದೆ.
ಅದನ್ನು ಸರಿಯಾಗಿ ಆಲಿಸುವುದರಿಂದ ಓಂ ಶಬ್ದವನ್ನು ಉಚ್ಚರಿಸಿದಷ್ಟೇ ಪುಣ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬ್ರಹ್ಮಾಂಡದ ಉತ್ಪತ್ತಿಯ ಸಮಯದಲ್ಲಿ ಪ್ರತಿಧ್ವನಿಸಿದ ಶಬ್ದವು ಗಂಟೆಯ ಶಬ್ದದಂತೆ ಇತ್ತು ಎಂದು ಹೇಳಲಾಗುತ್ತದೆ.
ಗಂಟೆಯ ನಾದಕ್ಕೆ ಅಷ್ಟೊಂದು ಮಹತ್ವವಿರುವುದರಿಂದಲೇ ದೇವಸ್ಥಾನ ಹಾಗೂ ಮನೆಗಳಲ್ಲಿ ದೇವರ ಪೂಜೆಯ ಸಮಯದಲ್ಲಿ ಗಂಟೆಯನ್ನು ಬಾರಿಸಲಾಗುತ್ತದೆ.
ಆದರೆ ಗಂಟೆಯನ್ನು ಬಾರಿಸಲು ಏನಾದರೂ ನಿಯಮಗಳಿವೆಯೇ? ಗಂಟೆಯ ಶಬ್ದದಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ.
ಇದನ್ನೂ ಓದಿ: ಅಂದದ ಮನೆಗೆ ಚೆಂದದ ಬಾಲ್ಕನಿ
ಗಂಟೆ ಬಾರಿಸಲೂ ಇದೆ ನಿಯಮ
ಗಂಟೆ ಬಾರಿಸಲು ಒಂದಿಷ್ಟು ನಿಯಮಗಳಿವೆ. ದೇವಸ್ಥಾನವನ್ನು ಪ್ರವೇಶಿಸುವಾಗ ಗಂಟೆ ಬಾರಿಸುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಇದು ದೇವರ ಎದುರಲ್ಲಿ ನಿಮ್ಮ ಉಪಸ್ಥಿತಿಯನ್ನು ಹೇಳುವ ಒಂದು ಮಾರ್ಗವಾಗಿದೆ.
ಇದು ದೇವರನ್ನು ನಿಮ್ಮೆಡೆಗೆ ಆಕರ್ಷಿಸುವ ಉದ್ದೇಶವನ್ನು ಈಡೇರಿಸುತ್ತದೆ. ಅಷ್ಟೇ ಅಲ್ಲದೇ ಗಂಟೆಯನ್ನು ಪೂಜೆಯ ಸಮಯದಲ್ಲಿ ಬಾರಿಸಲಾಗುತ್ತದೆ. ಆದರೆ ದೇವಸ್ಥಾನದಲ್ಲಿ ದೇವರಿಗೆ ಶಯನ ಆರತಿಯನ್ನು ಮಾಡಿದ ನಂತರ ಗಂಟೆಯನ್ನು ಬಾರಿಸಬಾರದು. ಹಾಗೆ ಮಾಡಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಧ್ವನಿ ಚಿಕಿತ್ಸೆಯಲ್ಲಿದೆ ಗಂಟೆ ನಾದಕ್ಕೆ ಸ್ಥಾನ
ಹೌದು, ಧ್ವನಿ ಚಿಕಿತ್ಸೆಯಲ್ಲಿ ಗಂಟೆ ನಾದವು ಪರಿಣಾಮಕಾರಿಯಾಗಿದೆ. ವಾಸ್ತವವಾಗಿ ಗಂಟೆಯ ಶಬ್ದವು ಒಂದು ನಿರ್ದಿಷ್ಟ ಆವರ್ತನಗಳನ್ನು ಉತ್ಪಾದಿಸುತ್ತದೆ.
ಅದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ವಿವಿಧ ನಾದಗಳನ್ನು ಹೊರಡಿಸುವ ವಿವಿಧ ಗಾತ್ರದ ಗಂಟೆಗಳನ್ನು ಧ್ವನಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಗಂಟೆ ನಾದದಿಂದ ಉಂಟಾಗುವ ಕಂಪನಗಳು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ.
ಇದನ್ನೂ ಓದಿ: ವಾಸ್ತು ಪ್ರಕಾರ ಈ ಶುಭ ಸಂಕೇತಗಳು ನಿಮ್ಮ ಕಣ್ಣಿಗೆ ಕಾಣಿಸಿದೆಯಾ? ಹಾಗಾದ್ರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ಬಿಡಿ!
(Significance of Bells in Hindu Worship Bell rules in rituals and Sound Therapy)



