ನವರಾತ್ರಿಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ; ದುರ್ಗಾ ದೇವಿಯ ಜೊತೆಗೆ ಶನಿ ದೇವರ ಆಶೀರ್ವಾದ ಪಡೆಯಿರಿ

Navratri 2025: ಹಿಂದೂ ಧರ್ಮದಲ್ಲಿ ಪಾರ್ವತಿಯನ್ನು ಶಕ್ತಿ ಎಂದ ಆರಾಧಿಸಲಾಗುತ್ತದೆ. ನವರಾತ್ರಿ ಹಬ್ಬದಲ್ಲಿ ದೇವಿಯನ್ನು ಒಂಬತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ.

ಈ ವರ್ಷದ ನವರಾತ್ರಿಯು ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿ ಅಕ್ಟೋಬರ್ 2 ರಂದು ಕೊನೆಗೊಳ್ಳುತ್ತದೆ. ನವರಾತ್ರಿಯ ಈ ಶುಭ ಸಮಯದಲ್ಲಿ ನೀವು ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿರುವ ಕಷ್ಟಗಳೆಲ್ಲಾ ದೂರವಾಗಿ ಸುಖ, ಸಂತೋಷ, ಸಮೃದ್ಧಿ ದೊರಕುತ್ತದೆ.

ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ದೇವಿಯ ಆಶೀರ್ವಾದದಿಂದ ಕೆಲಸದಲ್ಲಿರುವ ತೊಡಕುಗಳು ದೂರವಾಗುತ್ತವೆ. ನವರಾತ್ರಿಯ ಸಮಯದಲ್ಲಿ ಯಾವ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯೋಣ.

ಮನೆಯನ್ನು ಸ್ವಚ್ಛವಾಗಿಡಿ

ನವರಾತ್ರಿಯ ಸಮಯವು ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುವುದಾಗಿದೆ. ಆದ್ದರಿಂದ ಆ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿಡಿ. ದೇವಿಯನ್ನು ಸ್ವಾಗತಿಸಲು ಮನೆಯ ಮುಂದೆ ರಂಗೋಲಿ ಹಾಕಿ. ರಂಗೋಲಿ ಹಾಕುವುದರಿಂದ ಮನೆಯೊಳಗೆ ಬರುವ ನಕಾರಾತ್ಮಕ ಶಕ್ತಿಯ ಪ್ರವೇಶವನ್ನು ತಡೆಯಬಹುದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ದಿಕ್ಕಿನ ಸ್ವಚ್ಛತೆಗೆ ವಿಶೇಷ ಗಮನ ಕೊಡಿ. ಈ ದಿಕ್ಕನ್ನು ಶನಿಯ ಕ್ಷೇತ್ರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ನವರಾತ್ರಿ 2ನೇ ದಿನ ಬ್ರಹ್ಮಚಾರಿಣಿಯಾಗಿ ಜಗಜ್ಜನನಿ ಮನೋಬಲ ಹೆಚ್ಚಿಸಲು ತಾಯಿಯನ್ನು ಸ್ಮರಿಸಿ

ಮನೆಯ ಮುಖ್ಯ ದ್ವಾರ ಹೀಗಿರಲಿ

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ದ್ವಾರಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಏಕೆಂದರೆ ಇದರ ಮೂಲಕವೇ ಧನಾತ್ಮಕ ಶಕ್ತಿ ಮನೆಗೆ ಪ್ರವೇಶಿಸುತ್ತದೆ. ಆದ್ದರಿಂದ ಮುಖ್ಯ ದ್ವಾರದ ಬಳಿ ಕಸದ ಬುಟ್ಟಿಗಳು ಅಥವಾ ಪೊರಕೆಗಳನ್ನು ಇಡಬೇಡಿ. ನವರಾತ್ರಿಯ ಸಮಯದಲ್ಲಿ ಸಂಜೆ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಿ. ದೀಪ ಬೆಳಗಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಜೀವನದಲ್ಲಿ ತುಂಬಿರುವ ಕತ್ತಲೆ ದೂರವಾಗುತ್ತದೆ.

ಇದನ್ನು ಖಂಡಿತ ಮರೆಯಬೇಡಿ

ನಿಮ್ಮ ಮನೆಯಲ್ಲಿ ನವರಾತ್ರಿಯ ಸಮಯದಲ್ಲಿ ನಂದಾದೀಪ ಇಡುವ ರೂಢಿಯಿದ್ದರೆ ಅದನ್ನು ಖಂಡಿತ ಮುಂದುವರಿಸಿ. ಆದರೆ ಹಾಗೆ ದೀಪ ಇಡಬೇಕಾದರೆ ಆಗ್ನೇಯ ದಿಕ್ಕನ್ನು ಆರಿಸಿಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕು ಮನೆಗೆ ಶುಭವನ್ನು ತರುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ನೀವು ಸಂಜೆಯ ಸಮಯದಲ್ಲಿ ಮನೆಯ ನಾಲ್ಕು ಮೂಲೆಗಳಲ್ಲಿ ದೀಪ ಬೆಳಗಿಸಿದರೆ ಇನ್ನೂ ಉತ್ತಮ.

ಈ ವಸ್ತುಗಳನ್ನು ದಾನ ಮಾಡಿ

ನವರಾತ್ರಿಯ ಸಮಯದಲ್ಲಿ ದಾನ ಮಾಡುವುದನ್ನ ಒಳ್ಳೆಯದು ಎಂದು ಹೇಳಲಾಗಿದೆ. ಹಾಗಾಗಿ ಅಗತ್ಯವಿರುವರಿಗೆ ಕಪ್ಪು ಎಳ್ಳು, ತಿಂಡಿ, ಉದ್ದಿನ ಬೇಳೆ ಮುಂತಾದವುಗಳನ್ನು ದಾನ ಮಾಡಿ. ಇದರಿಂದ ನಿಮಗೆ ಶನಿ ದೇವರ ಆಶೀರ್ವಾದವೂ ದೊರಕುತ್ತದೆ.

ಇದನ್ನೂ ಓದಿ: ವಾಸ್ತು ಸಲಹೆ: ಧನ ಪ್ರಾಪ್ತಿಗೆ ಕುಬೇರನನ್ನು ಮೆಚ್ಚಿಸುವುದು ಹೇಗೆ?

(Follow these Vastu rules during Navratri 2025 get blessings of Lord Shani along with Goddess Durga)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories