ವಾಸ್ತು ಸಲಹೆ: ಧನ ಪ್ರಾಪ್ತಿಗೆ ಕುಬೇರನನ್ನು ಮೆಚ್ಚಿಸುವುದು ಹೇಗೆ?

Vastu Rule For North Direction: ಮನುಷ್ಯನ ಜೀವನ ಸುಖ, ಸಮೃದ್ಧಿಗಳಿಂದ ಕೂಡಿರಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ನಾವು ವಾಸಿಸುವ ಮನೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ವಾಸ್ತು ಶಾಸ್ತ್ರದಲ್ಲಿ ಧನಾತ್ಮಕ ಅಂಶವನ್ನು ಹೆಚ್ಚಿಸಲು ಪ್ರತಿಯೊಂದು ದಿಕ್ಕಿಗೂ ಕೆಲವು ಉಪಾಯಗಳನ್ನು ಹೇಳಿದ್ದಾರೆ.

ಅದೇ ರೀತಿ ಉತ್ತರ ದಿಕ್ಕಿಗೆ ಸಂಬಂಧಿಸಿದ ಕೆಲವು ವಾಸ್ತು ಸಲಹೆ ಬಹಳ ಮುಖ್ಯವಾಗಿದೆ. ಏಕೆಂದರೆ ಉತ್ತರ ದಿಕ್ಕನ್ನು ಕುಬೇರ ಮೂಲೆ ಎಂದು ಕರೆಯುತ್ತಾರೆ. ಕುಬೇರನನ್ನು ಸಂಪತ್ತಿನ ದೇವತೆ ಎನ್ನಲಾಗುತ್ತದೆ.

ಹಾಗಾಗಿ ಜೀವನದಲ್ಲಿ ಸಂಪತ್ತು, ಸಮೃದ್ಧಿ ತುಂಬಿರಬೇಕೆಂದರೆ ಉತ್ತರ ದಿಕ್ಕಿನ ವಾಸ್ತು ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ. ಹಾಗಾದರೆ ಉತ್ತರ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡುವುದರಿಂದ ಸಂಪತ್ತಿನ ದೇವತೆ ಕುಬೇರನನ್ನು ಮೆಚ್ಚಿಸಬಹುದು ಎಂದು ನೋಡೋಣ.

ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ

ಮನೆಯ ಉತ್ತರ ದಿಕ್ಕಿನಲ್ಲಿ ಹಣ ಅಥವಾ ಕಪಾಟನ್ನು ಇಡುವುದರಿಂದ ಆರ್ಥಿಕ ಲಾಭ ಹೆಚ್ಚಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ದಿಕ್ಕಿನಲ್ಲಿ ಕುಬೇರ ದೇವರ ಚಿತ್ರ ಅಥವಾ ವಿಗ್ರಹವನ್ನು ಇಡುವುದು ಧನ ಪ್ರಾಪ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಈ ದಿಕ್ಕಿನಲ್ಲಿ ಕುಬೇರ ಯಂತ್ರವನ್ನು ಸ್ಥಾಪಿಸುವುದರಿಂದ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶವನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಪಿತೃ ಪಕ್ಷ ಯಾವಾಗ ಪ್ರಾರಂಭ: ದಿನಾಂಕ, ಪಿತೃ ತರ್ಪಣ, ಶ್ರಾದ್ಧ ನಿಯಮಗಳೇನು ?

ಉತ್ತರ ದಿಕ್ಕಿನಲ್ಲಿ ಯಾವ ಸಸ್ಯ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಮತ್ತು ಮನಿ ಪ್ಲಾಂಟ್‌ನಂತಹ ಸಸ್ಯಗಳನ್ನು ಇಡಬಹುದು. ಇದು ಸಂಪತ್ತನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಮನೆಯ ಉತ್ತರ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ನೆಡುವದರಿಂದ ಹೆಚ್ಚಿನ ಪ್ರಯೋಜನ ದೊರಕುತ್ತದೆ.

ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು?

ಕುಬೇರನ ಆಶೀರ್ವಾದ ಪಡೆಯಲು ಉತ್ತರ ದಿಕ್ಕಿನಲ್ಲಿ ಸಣ್ಣ ಕಾರಂಜಿ , ಅಕ್ವೇರಿಯಂ, ಲೋಹ ಅಥವಾ ಸ್ಪಟಿಕದ ಅಮೆ ಇಡಬಹುದು. ಇದರ ಜೊತೆಗೆ ನದಿ, ಜಲಪಾತದ ಚಿತ್ರ ಪಟಗಳನ್ನು ಹಾಕುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಮನೆಯ ಮುಖ್ಯ ದ್ವಾರದ ಬಳಿ ನಾಮಫಲಕ, ಗಂಟೆ ಇತ್ಯಾದಿಗಳನ್ನು ಸಹ ಹಾಕಬಹುದು.

ಉತ್ತರ ದಿಕ್ಕಿಗೆ ಈ ವಸ್ತುಗಳನ್ನಂತು ಇಡಲೇಬೇಡಿ

ಮನೆಯ ಉತ್ತರ ದಿಕ್ಕಿನಲ್ಲಿ ಶೂಗಳು, ಚಪ್ಪಲಿಗಳು, ಕಸದ ಬುಟ್ಟಿಗಳು ಅಥವಾ ಯಾವುದೇ ರೀತಿಯ ಭಾರವಾದ ವಸ್ತುಗಳನ್ನು ತಪ್ಪಾಗಿಯೂ ಇಡಬೇಡಿ. ಇದು ಕುಬೇರನಿಗೆ ಕೋಪ ತರಿಸಬಹುದು. ಇದರಿಂದಾಗಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ, ಉತ್ತರ ದಿಕ್ಕನ್ನು ಕೊಳಕಾಗಿ ಇಡಬೇಡಿ. ಏಕೆಂದರೆ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಬಹುದು.

ಇದನ್ನೂ ಓದಿ: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ

(vastu tips how to get blessings of lord kubera and vastu rule for north direction)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories