ಸಿನಿಮಾ, ನಾಟಕವಾಗಿ ಜನರ ಮನಸ್ಸಿನಲ್ಲಿ ನೆಲೆಸಿರುವ ಭೈರಪ್ಪನವರ ಕಾದಂಬರಿಗಳು ಯಾವುವು ಗೊತ್ತಾ?

SL Bhyrappa: ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕ, ಕಾದಂಬರಿಕಾರ ಎಸ್‌ ಎಲ್‌ ಭೈರಪ್ಪ ಅವರು ಇಂದು ನಿಧನರಾಗಿದ್ದಾರೆ. ಅವರು ಬರೆದಿರುವ ಅನೇಕ ಕಾದಂಬರಿಗಳು ಓದುಗರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿವೆ. ಅವರ ಹಲವು ಕೃತಿಗಳು ಸಿನಿಮಾ ಆಗಿ ಜನರಿಗೆ ಸೂಕ್ಷ್ಮ ಸಂದೇಶಗಳನ್ನು ಸಹ ನೀಡಿವೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ವಂಶವೃಕ್ಷ: ಎಸ್‌ ಎಲ್‌ ಭೈರಪ್ಪನವರು ಬರೆದಿರುವ ವಂಶವೃಕ್ಷ ಹೆಸರಿನ ಕಾದಂಬರಿ ಅದೇ ಹೆಸರಿನಿಂದ ಸಿನಿಮಾ ಆಗಿದೆ. ಬಿ. ವಿ. ಕಾರಂತ್‌ ಮತ್ತು ಗಿರೀಶ್‌ ಕಾರ್ನಾಡ್‌ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು.

ತಬ್ಬಲಿಯು ನೀನಾದೆ ಮಗನೆ: ಈ ಕಾದಂಬರಿಯೂ ಕೂಡಾ ಅದೇ ಹೆಸರಿನಿಂದಲೇ ಸಿನಿಮಾವಾಗಿ ಮೂಡಿಬಂದಿದೆ. 1977 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಬಿ. ವಿ. ಕಾರಂತ್‌ ಮತ್ತು ಗಿರೀಶ್‌ ಕಾರ್ನಾಡ್‌ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಬಾಲಿವುಡ್‌ ನಟ ನಸೀರುದ್ದೀನ್‌ ಶಾ ಅಭಿನಯಿಸಿದ್ದಾರೆ.

ಮತದಾನ: ಬೈರಪ್ಪನವರ ಮತದಾನ ಹೆಸರಿನ ಕಾದಂಬರಿ ಅದೇ ಹೆಸರಿನಿಂದ ಸಿನಿಮಾವಾಗಿದೆ. ಟಿ. ಎನ್‌. ಸೀತಾರಾಮ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅನಂತ್‌ ನಾಗ್‌, ತಾರಾ, ದೇವರಾಜ್‌ ನಟಿಸಿದ್ದಾರೆ.

ನಾಯಿ ನೆರಳು: 2006 ರಲ್ಲಿ ತೆರೆಕಂಡ ನಾಯಿ ನೆರಳು ಸಿನಿಮಾ ಅದೇ ಹೆಸರಿನ ಕಾದಂಬರಿ ಆಧರಿಸಿದೆ. ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಈ ಸಿನಿಮಾದಲ್ಲಿ ಪವಿತ್ರಾ ಲೋಕೇಶ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಪರ್ವ: ಎಸ್‌ ಎಲ್ ಭೈರಪ್ಪನವರ ಜನಪ್ರಿಯ ಕಾದಂಬರಿ ಪರ್ವ ನಾಟಕವಾಗಿ ‌ಯಶಸ್ವಿ ಪ್ರದರ್ಶನ ಕಂಡಿದೆ. ಪ್ರಕಾಶ ಬೆಳವಾಡಿ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ ಹಲವಾರು ಸ್ಥಳಗಳಲ್ಲಿ ಪ್ರದರ್ಶನಗೊಂಡಿದೆ.

ಬೈರಪ್ಪನವರು ಬರೆದಿರುವ ಗೃಹಭಂಗ ಕಾದಂಬರಿಯು ಧಾರಾವಾಹಿಯಾಗಿ ಇಂದಿಗೂ ಜನರ ಮನಸ್ಸಿನಲ್ಲಿ ನೆಲೆಸಿದೆ.

ಇದನ್ನೂ ಓದಿ: ಖ್ಯಾತ ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ ನಿಧನ

(Know the SL Bhyrappa novels based movies plays and TV Serials)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories