ಕುಂದಾಪುರ : ಕೃಷಿ ಹೆಸರಲ್ಲಿ ಚಿನ್ನದ ಚೈನ್ ಅಡವಿಟ್ಟು 4.5 ಲಕ್ಷ ವಂಚನೆ
ಕುಂದಾಪುರ: Kundapura Fraud Case: ಕೃಷಿ ಹೆಸರಿನಲ್ಲಿ ಹಣ ಪಡೆದು ಮತ್ತು ಚಿನ್ನದ ಚೈನ್ ಅಡವಿಟ್ಟು ಮಹಿಳೆಯೋರ್ವರಿಗೆ 4.5 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರ(Kundapura) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದವರಾದ ತೆರೆಸಾ ಮೆಂಡೊನ್ಸಾ (60 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ತೆರೆಸಾ ಅವರು ಹರ್ಬಲ್ ಲೈಫ್ ನ್ಯೂಟ್ರಿಶನ್ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು.
ತೆರೆಸಾ ಅವರಿಗೆ ಬಿದ್ಕಲಕಟ್ಟೆಯ ಸಂತೋಷ (50 ವರ್ಷ) ಎಂಬುವವರ ಪರಿಚಯವಾಗಿತ್ತು. ಮೂರು ವರ್ಷಗಳ ಹಿಂದೆ ಸಂತೋಷ್ ತನ್ನ ಕೃಷಿ ತೋಟದ ಖರ್ಚಿಗಾಗಿ ಹಣ ನೀಡುವಂತೆ ತೆರೆಸಾ ಬಳಿ ಕೇಳಿಕೊಂಡಿದ್ದ.
Also Read: Manipal News: ಮಣಿಪಾಲ: ಯುವಕ ನಾಪತ್ತೆ, ಸೇತುವೆ ಬಳಿ ಬೈಕ್ ಪತ್ತೆ
ಬೆಳೆ ಮಾರಾಟವಾದ ನಂತರ ಹೆಚ್ಚುವರಿ ಹಣ ಸೇರಿಸಿ ವಾಪಸ್ ನೀಡುವುದಾಗಿ ಆತ ನಂಬಿಸಿದ್ದ. ಸಂತೋಷನ ಮಾತನ್ನು ನಂಬಿದ ತೆರೆಸಾ ಮೆಂಡೊನ್ಸಾ ಅವರು ಹಂತ ಹಂತವಾಗಿ ಒಟ್ಟು ₹ 4,50,000 (ನಾಲ್ಕು ಲಕ್ಷದ ಐವತ್ತು ಸಾವಿರ) ರೂಪಾಯಿಗಳನ್ನು ನೀಡಿದ್ದಾರೆ.
ಆರೋಪಿಯು ತೆರೆಸಾರವರ ಚಿನ್ನದ ಚೈನ್ ಅನ್ನು ಸಹ ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ. ಸುಮಾರು ಮೂರು ತಿಂಗಳ ಹಿಂದೆ ತೆರೆಸಾ ಅವರು ಚಿನ್ನದ ಮೇಲಿನ ಸಾಲದ ಬಡ್ಡಿ ಕಟ್ಟಲು ಹಣ ಕೇಳಿದಾಗ, ಸಂತೋಷ ಹಣ ನೀಡಲು ನಿರಾಕರಿಸಿದ್ದಾನೆ.
Also Read: ಮಣಿಪಾಲ: ಜುಗಾರಿ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ
ಅಲ್ಲದೇ ತೆರೆಸಾ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ಸಂಪರ್ಕ ಕಡಿದುಕೊಂಡು ಮೋಸ ಮಾಡಿರುವುದಾಗಿ ತೆರೆಸಾ ದೂರು ನೀಡಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



