ಧ್ವಂಸವಾಗಲಿದೆಯಾ ಪ್ಯಾರಿಸ್ನ ಐಕಾನಿಕ್ ಐಫೆಲ್ ಟವರ್ : ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು
Viral News: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎಂಬ ಬಯಕೆ ಹಲವರದ್ದು. ಆದರೆ ಈ ನಡುವೆಯೇ ಫ್ರಾನ್ಸ್(France) ಸರ್ಕಾರವು 2026ರಲ್ಲಿ ಈ ಐಕಾನಿಕ್ ಟವರ್ರನ್ನು ಧ್ವಂಸಗೊಳಿಸಲು ನಿರ್ಧರಿಸಿದೆ ಎಂಬ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಈ ವದಂತಿ ಎಲ್ಲಿಂದ ಆರಂಭಗೊಂಡಿತು ಎಂಬುದಕ್ಕೆ ನಿಖರವಾದ ಮಾಹಿತಿ ಇಲ್ಲವಾದರೂ ಸಹ ವಿಡಂಬನಾತ್ಮಕ ಪೋಸ್ಟ್ಗಳಿಗೆ ಹೆಸರುವಾಸಿಯಾಗಿರುವ ‘ಟ್ಯಾಪಿಯೋಕಾ ಟೈಮ್ಸ್’ ಎಂಬ ವೆಬ್ಸೈಟ್ನಲ್ಲಿ ಸೆಪ್ಟೆಂಬರ್ 18ರಂದು ಈ ಕುರಿತಾದ ಲೇಖನ ಪ್ರಕಟವಾಗಿದೆ ಎನ್ನಲಾಗಿದೆ. ಈ ಲೇಖನದಿಂದ ಐಫೆಲ್ ಟವರ್ ಬಂದ್ ಆಗಲಿದ್ದು ಇನ್ಮೇಲೆ ಯಾರಿಗೂ ಈ ಐಕಾನಿಕ್ ಟವರ್ ನೋಡಲು ಸಾಧ್ಯವಿಲ್ಲ ಎಂದು ಬರೆಯಲಾಗಿತ್ತು ಎನ್ನಲಾಗಿದೆ.
ಈ ಲೇಖಕನದಲ್ಲಿ ವಕ್ತಾರರೊಬ್ಬರು ನೀಡಿದ ಹೇಳಿಕೆಯಂತೆ ಬಿಂಬಿಸಲಾಗಿದ್ದು ‘ ಚಿಕ್ಕಮಕ್ಕಳು ಕೂಡ ಅಲ್ಲಿಗೆ ಹೋಗಲು ಬಯಸುವುದಿಲ್ಲ. ಟವರ್ನ ಸುತ್ತಲೂ ಡ್ರೋನ್ಗಳ ಹಾರಾಟದ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಬಹುಶಃ ಇದೆ ಕಾರಣಕ್ಕೆ ಸಂದರ್ಶಕರ ಸಂಖ್ಯೆ ಕೂಡ ಕಡಿಮೆಯಾಗಿದ್ದರಬಹುದು ಎಂದು ಹೇಳಲಾಗಿದೆ.
Also Read: Viral News: ಸಮೋಸಾ ತರಲಿಲ್ಲವೆಂದು ಪತಿ ಹಾಗೂ ಮಾವನಿಗೆ ಹೊಡೆದ ಮಹಿಳೆ
ಇದು ಮಾತ್ರವಲ್ಲದೇ ಐಫೆಲ್ ಟವರ್ನಲ್ಲಿ ಅಳಿಲುಗಳು ಹಾಗೂ ಪಾರಿವಾಳಗಳ ಸಂಖ್ಯೆ ಮಿತಿಮೀರಿ ಹೋಗಿರುವ ಹಿನ್ನೆಲೆಯಲ್ಲಿ ಅದನ್ನು ಕೆಡವಲಾಗುವುದು ಎಂದು ಹೇಳಲಾಗಿದೆ. ಹಾಗೂ ಈ ಜಾಗದಲ್ಲಿ ಲಾಸ್ ವೇಗಾಸ್ ಶೈಲಿಯ ಸಂಗೀತ ಸ್ಥಳ ಅಥವಾ ವಾಟರ್ ಸ್ಲೈಡ್ಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.
2026ರಿಂದ ಟವರ್ ಧ್ವಂಸ ಕಾರ್ಯ ಆರಂಭಗೊಳ್ಳಲಿದ್ದು ಯಾರಿಗಾದರೂ ಐಫೆಲ್ ಟವರ್ ನೋಡುವೆ ಆಸೆಯಿದ್ದರೆ ಈಗಲೇ ಫ್ರಾನ್ಸ್ಗೆ ಪ್ರಯಾಣ ಬೆಳೆಸಿ ಎಂದು ಹೇಳಲಾಗಿತ್ತು.ಈ ಲೇಖನವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
ಆದರೆ ಅಸಲಿಗೆ ಇದು ಸಂಪೂರ್ಣ ಕಾಲ್ಪನಿಕ ಲೇಖನವಾಗಿದೆ. ಐಫಲ್ ಟವರ್ ನಿರ್ವಹಣೆ ನೋಡುತ್ತಿರುವ ಡಿ’ಎಕ್ಸ್ಪ್ಲೋಯಿಟೇಶನ್ ಡಿ ಲಾ ಟೂರ್ ಐಫೆಲ್ ಅಥವಾ ಫ್ರಾನ್ಸ್ ಸರ್ಕಾರವು ಈ ಐಕಾನಿಕ್ ಟವರ್ ಧ್ವಂಸ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಹೀಗಾಗಿ ಐಫೆಲ್ ಟವರ್ ಪ್ರಿಯರು ಭಯಪಡುವ ಅವಶ್ಯಕತೆಯಿಲ್ಲ.
Also Read: Viral Video: ಅಮ್ಮನ ಸೀರೆಯನ್ನೇ ಧೋತಿ ಮಾಡಿಕೊಂಡ ಮಗ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ!



