ಕರುಳು ಹಿಂಡುತ್ತೆ ಸಾವಿಗೂ ಮುನ್ನ ಪಾಪಿ ಪತಿಗೆ ಕೃತಿಕಾ ರೆಡ್ಡಿ ಕಳುಹಿಸಿದ ಸಂದೇಶ : ಏನದು ಮೆಸೇಜ್​

ಬೆಂಗಳೂರು : ವೈದ್ಯೆ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣ (Doctor Krutika Reddy Murder Case) ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಆಕೆ ತನ್ನ ಗಂಡನಿಗೆ ಸಾಯುವ ಮೊದಲು ಕಳುಹಿಸಿದ್ದ ಮೆಸೇಜ್‌ ವೈರಲ್‌ ಆಗಿದೆ. ಮೇಸೆಜ್‌ ವಿಚಾರ ತಿಳಿದ್ರೆ ಕರುಳು ಹಿಂಡುತ್ತೆ.

ಉತ್ತಮ ವ್ಯಾಸಂಗ ಮಾಡಿ ವೈದ್ಯೆ ಕೆಲಸ ಪಡೆದು ಮದುವೆಯಾಗಿ ಸುಂದರ ಸಂಸಾರ ಮಾಡಬೇಕಿದ್ದ ಡಾ. ಕೃತಿಕಾ ರೆಡ್ಡಿ ಪತಿಯಿಂದಲೇ ಬಾರದ ಲೋಕಕ್ಕೆ ತೆರಳುವಂತಾಗಿರೋದು ದುರಂತ.

ತನ್ನ ಕಪಟ ಬುದ್ಧಿಯಿಂದಲೇ ಎಲ್ಲರನ್ನೂ ಪುಸಲಾಯಿಸಿಕೊಂಡಿದ್ದ ಪಾಪಿ ಗಂಡ ಮಹೇಂದ್ರ ರೆಡ್ಡಿ ಪತ್ನಿಗೆ ಇಂತಹ ನರಕ ಸದೃಶ ಸಾವು ನೀಡಬಲ್ಲ ಎಂಬ ಊಹೆ ಯಾರಿಗೂ ಇರಲಿಲ್ಲ.

ಪತ್ನಿಯನ್ನು ತಾನೇ ಕೊಂದು ಇಲ್ಲಸಲ್ಲದ ನಾಟಕ ಕಟ್ಟಿದ್ದ ಪಾಪಿ ಪತಿ ಇದೀಗ ಪೊಲೀಸರ ಬಂಧನದಲ್ಲಿದ್ದಾನೆ. ವಿಚಾರಣೆ ವೇಳೆ ಕೃತಿಕಾ ತನ್ನ ಪತಿಗೆ ಮಾಡಿರುವ ಕೊನೆಯ ಮೆಸೇಜ್​ ವಿಚಾರ ಪ್ರಸ್ತಾಪವಾಗಿದೆ.

ಹೌದು..! ಪತಿಯೇ ತನ್ನ ಸಾವಿಗೆ ಖೆಡ್ಡಾ ತೋಡುತ್ತಿರಬಹುದು ಎಂಬ ಸಣ್ಣ ಅರಿವು ಇಲ್ಲದ ಕೃತಿಕಾ ರೆಡ್ಡಿ ತಾನು ಅನುಭವಿಸುತ್ತಿರುವ ನೋವಿನ ಬಗ್ಗೆ ಪತಿಗೆ ಮೆಸೇಜ್​ ಮಾಡಿ ಹೇಳಿಕೊಂಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ : ಬದುಕಿದ್ದಾಗಲೇ ಸತ್ತಂತೆ ನಟಿಸಿದ ವೃದ್ದ : ಕಾರಣ ಕೇಳಿದ್ರೆ ನಗು ಬರೋದು ಗ್ಯಾರಂಟಿ

ಏಪ್ರಿಲ್​ 23ರಂದು ಪತಿಗೆ ಕೊನೆಯ ಮೆಸೇಜ್​ ಮಾಡಿರುವ ಪತ್ನಿ ಕೃತಿಕಾ ರೆಡ್ಡಿ ನನ್ನಿಂದ ಈ ನೋವು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಳಂತೆ.

ಏಪ್ರಿಲ್​ 21ರಿಂದ 23ರವರೆಗೂ ಪತಿ ಮಹೇಂದ್ರ ರೆಡ್ಡಿ ಪತದನಿ ಕೃತಿಕಾಗೆ ಡ್ರಿಪ್​ ಹಾಕಿದ್ದ. ಕಾಲಿನ ನರಕ್ಕೆ ಪತಿ ಡ್ರಿಪ್ಸ್​ ಹಾಕಿದ್ದ ಎನ್ನಲಾಗಿದೆ. ಇದರಿಂದ ನೋವು ತಡೆಯಲಾರದೆಯೇ ಕೃತಿಕಾ ರೆಡ್ಡಿ ನಾನು ಈ ಡ್ರಿಪ್ಸ್​ ತೆಗೆಯುತ್ತೇನೆ. ನನ್ನಿಂದ ಈ ನೋವು ತಡೆಯಲು ಸಾಧ್ಯವಿಲ್ಲ ಎಂದು ಮೆಸೇಜ್​ ಮಾಡಿದ್ದಳು ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ಆರೋಪಿ ಮಹೇಂದ್ರನನ್ನು ಪೊಲೀಸರು ಬಂಧಿಸಿದ್ದು ಗಂಜೂರಿನಲ್ಲಿರುವ ಮಹೇಂದ್ರ ರೆಡ್ಡಿ ನಿವಾಸದಲ್ಲಿ ಮಹಜರು ಕಾರ್ಯ ಮುಗಿಸಿದ್ದಾರೆ.

ಮಹೇಂದ್ರ ರೆಡ್ಡಿ ಮೊಬೈಲ್​, ಲ್ಯಾಪ್‌ ಟಾಪ್‌ ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಯಲ್ಲಿ ಕೃತಿಕಾ ರೆಡ್ಡಿಗೆ ಸೇರಿರುವ ಮೊಬೈಲ್​ ಹಾಗೂ ಲ್ಯಾಪ್​ಟಾಪ್​ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ವಿರೋಧಿಸಿ ದಲಿತ ಯುವಕನ ಮೇಲೆ ಮೂತ್ರ ವಿಸರ್ಜನೆ : ಮಾನವೀಯತೆ ಮರೆತ ಪಾಪಿಗಳು

Doctor Krutika Reddy Murder Case, send to her sinful husband before her death What is the message ?

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories