ಶತಮಾನಗಳಿಂದ ಈ ಗ್ರಾಮದಲ್ಲಿ ಆಚರಿಸಲ್ಪಡುತ್ತಿಲ್ಲ ದೀಪಾವಳಿ ಹಬ್ಬ : ಇದಕ್ಕೆ ಕಾರಣ ಮುತ್ತೈದೆಯ ಶಾಪ
Diwali festival: ದೀಪಾವಳಿ, ಸಂಪೂರ್ಣ ವಿಶ್ವವೇ ಸಂಭ್ರಮಿಸುವಂತಹ ಹಬ್ಬ. ಅದರಲ್ಲೂ ಹಿಂದೂಗಳೇ ಹೆಚ್ಚಿರುವ ನಮ್ಮ ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಾನ್ಯತೆಯಿದೆ. ಆದರೆ ನಮ್ಮ ಭಾರತದಲ್ಲೊಂದು ಗ್ರಾಮವಿದೆ. ಇಲ್ಲಿ ಹಲವು ಶತಮಾನಗಳಿಂದ ದೀಪಾವಳಿ ಹಬ್ಬ ಆಚರಣೆಗೆ ಅವಕಾಶವಿಲ್ಲ. ಇದಕ್ಕೆ ಕಾರಣ ಮುತ್ತೈದೆಯೊಬ್ಬಳು ನೀಡಿದ ಶಾಪವಂತೆ..!
ಹೌದು..! ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ಸಮ್ಮೂ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ಸಂಪ್ರದಾಯವಿದೆ. ಹಲವು ಶತಮಾನಗಳ ಹಿಂದೆ ಈ ಗ್ರಾಮದ ಮಹಿಳೆಯೊಬ್ಬರು ತನ್ನ ಗಂಡನ ಚಿತೆಗೆ ಹಾರಿ ತನ್ನನ್ನು ತಾನು ದಹಿಸಿಕೊಂಡು ದೀಪಗಳ ಹಬ್ಬವನ್ನು ಶಪಿಸಿದ್ದರಂತೆ.
ಇದೇ ಕಾರಣಕ್ಕಾಗಿ ಈ ಗ್ರಾಮದಲ್ಲಿ ದೀಪಾವಳಿ ಹಬ್ಬದಂದು ಸಂಪೂರ್ಣ ಗ್ರಾಮ ಕತ್ತಲೆಯಲ್ಲಿ ಮುಳುಗಿರುತ್ತದೆ. ಹಬ್ಬದ ದಿನದಂದು ಈ ಗ್ರಾಮದಲ್ಲಿ ಒಂದೇ ಒಂದು ದೀಪವೂ ಕಾಣಸಿಗುವುದಿಲ್ಲ.
Also Read: ರೈಲಿನಲ್ಲಿ ಸೀಟು ಸಿಗದಕ್ಕೆ ಕೋಪ, ಹುಸಿಬಾಂಬ್ ಕರೆ ಮಾಡಿ ಸಿಕ್ಕಿಹಾಕಿಕೊಂಡ ಸಹೋದರರು
ಹಮೀರ್ಪುರ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಸಮ್ಮೂ ಗ್ರಾಮಸ್ಥರಿಗೆ ಅಬ್ಬಬ್ಬಾ ಎಂದರೆ ದೀಪ ಬೆಳಗಲು ಅವಕಾಶವಿದೆ. ಆದರೆ ಪಟಾಕಿ ಸುಡಲು ಇಲ್ಲಿ ಸುತಾರಾಂ ಅನುಮತಿಯಿಲ್ಲ. ಹಾಗೂ ದುಂದು ವೆಚ್ಚಕ್ಕೆ ಇಲ್ಲಿ ಅವಕಾಶ ನೀಡಲಾಗುವುದಿಲ್ಲ.
ಗ್ರಾಮಸ್ಥರು ನೀಡಿರುವ ಮಾಹಿತಿಯ ಪ್ರಕಾರ, ಸರಿ ಸುಮಾರು ಶತಮಾನಗಳ ಹಿಂದೆ ಗರ್ಭಿಣಿ ಮಹಿಳೆಯೊಬ್ಬರು ದೀಪಾವಳಿಗೆ ತಯಾರಿ ನಡೆಸುತ್ತಿದ್ದಳಂತೆ. ಆಕೆಯ ಪತಿ ಸ್ಥಳೀಯ ರಾಜನ ಸೈನ್ಯದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ . ಆದರೆ ಆತ ಮೃತಪಟ್ಟಿದ್ದರಿಂದ ದೀಪಾವಳಿ ಹಬ್ಬದ ದಿನವೇ ಆತನ ಶವವನ್ನು ಮನೆಗೆ ಕರೆತರಲಾಗಿತ್ತು.
ಇದರಿಂದ ಮನನೊಂದು ಗರ್ಭಿಣಿಯು ಗಂಡನ ಶವವನ್ನು ಸುಡುತ್ತಿದ್ದ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡಿದ್ದಳು. ಆದರೆ ಸಾಯುವ ಮುನ್ನ ಆಕೆಯು ಈ ಗ್ರಾಮದ ಜನತೆ ಎಂದಿಗೂ ದೀಪಾವಳಿ ಆಚರಿಸಬಾರದು ಎಂದು ಶಪಿಸಿದ್ದಳು ಎನ್ನಲಾಗಿದೆ.
Also Read: ಆರ್ಥಿಕವಾಗಿ ಸ್ವತಂತ್ರರಾಗಿರುವ ಪತ್ನಿಗೆ ವಿಚ್ಛೇದನದ ಬಳಿಕ ಜೀವನಾಂಶ ಕೇಳುವ ಹಕ್ಕಿಲ್ಲ : ಹೈಕೋರ್ಟ್ ಮಹತ್ವದ ಆದೇಶ
ಅಲ್ಲದೇ ಕಾಕತಾಳೀಯ ಎಂಬಂತೆ ಯಾವ ವರ್ಷ ದೀಪಾವಳಿ ಹಬ್ಬವನ್ನು ಆಚರಿಸಲು ಯತ್ನಿಸಲಾಯ್ತೋ ಆ ವರ್ಷವೆಲ್ಲ ಗ್ರಾಮದಲ್ಲಿ ಯಾರಾದರೊಬ್ಬರು ಸಾಯುತ್ತಾರೆ ಅಥವಾ ಗ್ರಾಮದಲ್ಲಿ ವಿಪತ್ತು ಸಂಭವಿಸುತ್ತದೆ .
ಶಾಪ ವಿಮೋಚನೆಗೆ ಎಷ್ಟೇ ಹೋಮ – ಹವನಗಳನ್ನು ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ದೀಪಾವಳಿ ಹಬ್ಬದ ಆಚರಣೆಗೆ ಕಡಿವಾಣ ಹಾಕಿದ್ದೇವೆ ಎಂದು ಗ್ರಾಮಸ್ಥ ಠಾಕೂರ್ ಬಿಧಿ ಮಾಹಿತಿ ನೀಡಿದ್ರು.



