ಸುಖಕರ ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುತ್ತೆ ಬಣ್ಣ : ಈ ವರ್ಣದ ಬೆಡ್ಶೀಟ್ಗಳೇ ನಿಮ್ಮ ಆಯ್ಕೆಯಾಗಿರಲಿ

bed sheets : ಮನೆ ವಾಸ್ತು ಪ್ರಕಾರ ನಿರ್ಮಾಣಗೊಂಡಿದ್ದರೆ ಸುಖ ಶಾಂತಿ ತುಂಬಿ ತುಳುಕುತ್ತದೆ. ವಾಸ್ತು ಶಾಸ್ತ್ರದಲ್ಲಿ ಯಾವುದ್ಯಾವುದು ಎಲ್ಲೆಲ್ಲಿ ಇರಬೇಕು ಎಂಬುದಕ್ಕೆ ಸಾಕಷ್ಟು ನಿಯಮಗಳಿವೆ. ಇದಕ್ಕೆ ಅನುಗುಣವಾಗಿ ಮನೆಯನ್ನು ನಿರ್ಮಿಸುವುದು ಅತ್ಯಗತ್ಯ. ಆದರೆ ವಾಸ್ತು ಶಾಸ್ತ್ರವು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ನಿಮ್ಮ ಮನೆಯ ಗೋಡೆಯ ಬಣ್ಣ, ನೀವು ಮಲಗುವ ಹಾಸಿಗೆಯ ಮೇಲೆ ಹಾಸುವ ಬೆಡ್ಶೀಟ್ನ ಬಣ್ಣಕ್ಕೂ ಅನ್ವಯವಾಗುತ್ತದೆ.
ಹೌದು..! ದಾಂಪತ್ಯ ಜೀವನ ಸುಖಕರವಾಗಿ ಸಾಗುವುದರ ಹಿಂದೆ ನೀವು ಬಳಸುವ ಬೆಡ್ಶೀಟ್ನ ಬಣ್ಣ ಕೂಡ ಪಾತ್ರ ವಹಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ. ವಾಸ್ತು ಶಾಸ್ತ್ರವು ಸಂಬಂಧಗಳು ಗಟ್ಟಿಯಾಗಿ ಬೇರೂರಲು ಕೆಲವು ಆಯ್ದ ಬಣ್ಣಗಳ ಬೆಡ್ಶೀಟ್ಗಳನ್ನೇ ಆಯ್ಕೆ ಮಾಡುವಂತೆ ಹೇಳಿದೆ.
ವಾಸ್ತು ಶಾಸ್ತ್ರದ ಪ್ರಕಾರ ಯಾವ ವರ್ಣದ ಬೆಡ್ಶೀಟ್ಗಳನ್ನು ಆಯ್ಕೆ ಮಾಡಬೇಕು
ಬಿಳಿ ಬಣ್ಣ : ಬಿಳಿ ಬಣ್ಣ ಶಾಂತಿ, ಶುದ್ಧತೆ ಹಾಗೂ ಸಮತೋಲನದ ಸಂಕೇತವಾಗಿದೆ. ಆದರೆ ಅನೇಕರು ಬಿಳಿ ಬಣ್ಣದ ಹೊದಿಕೆಗಳು ಬೇಗನೆ ಕಲೆಯಾಗುತ್ತದೆ ಎಂಬ ಕಾರಣಕ್ಕೆ ಬಳಕೆ ಮಾಡುವುದಿಲ್ಲ.
ಆದರೆ ವಾಸ್ತು ಶಾಸ್ತ್ರದ ಪ್ರಕಾರ ಬಿಳಿ ಬಣ್ಣದ ಬೆಡ್ಶೀಟ್ಗಳು ನೀವು ಮಲಗುವ ಕೋಣೆಯಲ್ಲಿ ಯಾವುದೇ ನಕಾರಾತ್ಮಕ ಅಂಶಗಳು ಸುಳಿಯಲು ಬಿಡುವುದಿಲ್ಲ. ಅಲ್ಲದೇ ಇವುಗಳು ಶಾಂತಿಯ ಪ್ರತೀಕ ಕೂಡ ಆಗಿರುವುದಿಂದ ಪತಿ ಪತ್ನಿ ನಡುವೆ ಮನಸ್ತಾಪಗಳು ಕಡಿಮೆಯಾಗಿ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂಬ ನಂಬಿಕೆಯಿದೆ.
ಮಾನಸಿಕವಾಗಿ ದಣಿದಿದ್ದರೆ ಅವುಗಳನ್ನು ಕಡಿಮೆಗೊಳಿಸುವ ಶಕ್ತಿ ಬಿಳಿ ಬಣ್ಣಕ್ಕಿದೆ. ಬಿಳಿ ಬಣ್ಣವು ನಿಮ್ಮ ಮನಸ್ಸಿನಲ್ಲಿ ಶಾಂತಿ ಮೂಡಿಸುತ್ತದೆ. ಗೊಂದಲಗಳನ್ನು ದೂರ ಮಾಡುವ ತಾಕತ್ತನ್ನು ಹೊಂದಿದೆ.
ಪತಿ – ಪತ್ನಿ ನಡುವೆ ಪದೇ ಪದೇ ಕಲಹ ಉಂಟಾಗುತ್ತಿದ್ದರೆ,
Also Read : Vastu Shastra: ಗೃಹಾಲಂಕಾರಕ್ಕೆ ಈ ವಸ್ತುಗಳನ್ನೂ ತನ್ನಿ: ಮನೆಯ ಅಂದದ ಜೊತೆಗೆ ಸಮೃದ್ಧಿಯು ಹೆಚ್ಚುತ್ತದೆ
ಮಲಗುವ ಕೋಣೆಯಲ್ಲಿ ಶಾಂತಿ ಎಂಬುದೇ ಹೊರಟುಹೋಗಿದ್ದರೆ ಒಮ್ಮೆ ನಿಮ್ಮ ಹಾಸಿಗೆಯ ಹೊದಿಕೆಯ ಬಣ್ಣವನ್ನು ಬಳಿ ವರ್ಣಕ್ಕೆ ಬದಲಿಸಿ ನೋಡಿ. ಇದರಿಂದ ನೀವೇ ಬದಲಾವಣೆಗಳನ್ನು ಗಮನಿಸಲಿದ್ದೀರಿ. ನಕಾರಾತ್ಮಕತೆಯನ್ನು ಕಡಿಮೆಗೊಳಿಸಿ ಸಕಾರಾತ್ಮಕತೆಗೆ ಜಾಗ ನೀಡುವ ಶಕ್ತಿ ಶ್ವೇತ ವರ್ಣಕ್ಕಿದೆ.
ಹೀಗಾಗಿ ಕೊಳೆಯ ಚಿಂತೆ ಬಿಡಿ.ಇಂದೇ ನಿಮ್ಮ ಮನೆಯ ಮಲಗುವ ಕೋಣೆಗಳಲ್ಲಿ ಬಿಳಿ ಬಣ್ಣದ ಹೊದಿಕೆಗಳಿಗೆ ಜಾಗ ನೀಡಿ. ಇದರಿಂದ ನಿಮ್ಮ ದಾಂಪತ್ಯ ಜೀವನ ಅತ್ಯಂತ ಸುಖಕರವಾಗಿ ಸಾಗುವುದು ಮಾತ್ರವಲ್ಲದೇ ಮನೆಯಲ್ಲಿ ಸದಾ ಕಾಲ ಶಾಂತಿ ಹಾಗೂ ನೆಮ್ಮದಿ ಮನೆ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.
Also Read : ಕೆಟ್ಟ ದೃಷ್ಠಿಗಳು ನಿಮ್ಮನ್ನು ತಾಕುತ್ತಿದ್ದೆಯೇ : ಇದರಿಂದ ಪಾರಾಗಲು ವಾಸ್ತು ಶಾಸ್ತ್ರದಲ್ಲಿದೆ ಮಾರ್ಗ
Color influences a happy married life: This color of bed sheets should be your choice



