Firework: ಪಟಾಕಿ ತಂದ ಅವಾಂತರ :ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಐದಂಸ್ತಿನ ಅಪಾರ್ಟ್​ಮೆಂಟ್​

Firework: ದೇಶಾದ್ಯಂತ ದೀಪಾವಳಿ(Deepavali) ಆಚರಣೆಯ ಸಂಭ್ರಮ ಜೋರಾಗಿದೆ. ಈ ಎಲ್ಲದರ ನಡುವೆ ಗಾಜಿಯಾಬಾದ್​ನಲ್ಲಿ ದೀಪಾವಳಿಯ ಸಂಭ್ರಮ ಸಂಕಷ್ಟಕ್ಕೆ ದಾರಿ ಮಾಡಿದೆ. ಪಟಾಕಿಯ ಬೆಂಕಿ ತಗುಲಿದ ಪರಿಣಾಮ ಐದಂಸ್ತಿನ ವಸತಿ ಕಟ್ಟಡ ಸುಟ್ಟು ಭಸ್ಮವಾಗಿದೆ.

ಅದೃಷ್ಟವಶಾತ್​ ಈ ಕಟ್ಟಡದಲ್ಲಿ ವಾಸಿಸುತ್ತಿದ್ದ ಎಲ್ಲಾ 19 ಕುಟುಂಬಗಳು ಪ್ರಾಣಾಪಯದಿಂದ ಪಾರಾಗಿವೆ. ಫ್ರೆಂಡ್ಸ್ ಅವೆನ್ಯೂ ಪ್ರದೇಶದ ಪ್ಲಾಟ್ ಸಂಖ್ಯೆ 188 ರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಟ್ಟಡದಾದ್ಯಂತ ಅಗ್ನಿಯ ಕೆನ್ನಾಲಿಗೆ ವೇಗವಾಗಿ ಹರಡಿತು

ದಟ್ಟವಾದ ಕಪ್ಪು ಹೊಗೆ ಸಂಪೂರ್ಣ ಕಟ್ಟಡವನ್ನೇ ಆವರಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಯಲ್ಲಿ ಸಂಪೂರ್ಣ ಕಟ್ಟಡ ಹೊತ್ತಿ ಉರಿಯುತ್ತಿದ್ದರೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟಿದ್ದಾರೆ.

Also Read: ಅಯ್ಯಪ್ಪನ ದರ್ಶನ ಪಡೆದ ಮೊದಲ ಮಹಿಳಾ ರಾಷ್ಟ್ರಪತಿ ಕೀರ್ತಿ ಗಳಿಸಿದ ದ್ರೌಪದಿ ಮುರ್ಮು

ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆಯು ಇಡೀ ಕಟ್ಟಡವನ್ನು ಆವರಿಸಿದ್ದು ಗೃಹೋಪಯೋಗಿ ವಸ್ತುಗಳು, ಮನೆಯ ಪೀಠೋಪಕರಣಗಳು, ಎಲೆಕ್ಟ್ರಾನಿಕ್​ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಗಾಜಿಯಾಬಾದ್​ ಅಗ್ನಿಶಾಮಕ ದಳ ಸಿಬ್ಬಂದಿ, ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಎಲ್ಲಾ 19 ಕುಟುಂಬಗಳನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳ ಅಧಿಕಾರಿ ಮಾಹಿತಿ ನೀಡಿದ್ದಾರೆ.

Also Read: ಕ್ಷುಲ್ಲಕ ಕಾರಣಕ್ಕೆ ಗಲಾಟೆ : 20 ವರ್ಷದ ಯುವಕನನ್ನು ಇರಿದು ಕೊಂದ ದುಷ್ಕರ್ಮಿಗಳು

ಮೇಲ್ನೋಟಕ್ಕೆ ಇದು ದೀಪಾವಳಿಯ ಸಂದರ್ಭದಲ್ಲಿ ಹಚ್ಚಿದ ಪಟಾಕಿಯ ಕಿಡಿಯಿಂದಾಗಿ ನಡೆದ ಅವಘಢದಂತೆ ಕಾಣುತ್ತಿದೆ. ಆದರೆ ಈ ಸಂಬಂಧ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತನಿಖೆ ಆರಂಭಿಸಿದ್ದು ಅವಘಢಕ್ಕೆ ಸೂಕ್ತ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories