ಹೆಬ್ರಿ: Leopard rescued: ಮುದ್ರಾಡಿಯಲ್ಲಿ ಉರುಳಿಗೆ ಬಿದ್ದ ಚಿರತೆ ರಕ್ಷಣೆ
ಹೆಬ್ರಿ: Leopard rescued: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುದ್ರಾಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಮುದ್ರಾಡಿಯ ಅರಣ್ಯ ಪ್ರದೇಶದ ಸಮೀಪದ ಸ್ಥಳೀಯ ನಿವಾಸಿಗಳು ತೋಟದ ಬಳಿ ಚಿರತೆಯೊಂದು ಉರುಳಿಗೆ ಸಿಲುಕಿ ನರಳುತ್ತಿರುವುದನ್ನು ಮೊದಲು ಗಮನಿಸಿದ್ದಾರೆ. ಉರುಳಿಗೆ ಬಿಗಿಯಾಗಿ ಸಿಕ್ಕಿಬಿದ್ದು, ಗಾಯಗೊಂಡಿದ್ದ ಚಿರತೆ ಕೋಪದಿಂದ ಒದ್ದಾಡುತ್ತಿತ್ತು. ಇದರಿಂದ ಯಾರೂ ಅದರ ಹತ್ತಿರ ಹೋಗಲು ಧೈರ್ಯ ಮಾಡಲಿಲ್ಲ.
ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಹೆಬ್ರಿ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
Also Read: ಅರಣ್ಯ ಇಲಾಖೆ ಉದ್ಯೋಗದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ
ಚಿರತೆಯು ಅಪಾಯಕಾರಿ ಸ್ಥಿತಿಯಲ್ಲಿದ್ದ ಕಾರಣ, ಅದನ್ನು ಹಿಡಿಯಲು ಅರವಳಿಕೆ ಮದ್ದು ನೀಡಲು ನಿರ್ಧರಿಸಲಾಯಿತು. ಪಶುವೈದ್ಯರಾದ ಡಾ. ಮೇಘನಾ ಮತ್ತು ಡಾ. ಯಶಸ್ವಿನಿ ಅವರ ನೇತೃತ್ವದಲ್ಲಿ, ಸ್ನೇಕ್ ಟ್ರಸ್ಟ್‌ನ ಅಕ್ಷಯ್ ಶೆಟ್ಟಿ ಅವರ ನೆರವಿನೊಂದಿಗೆ ಚಿರತೆಗೆ ಅರವಳಿಕೆ ನೀಡಲಾಯಿತು. ಚಿರತೆ ಪ್ರಜ್ಞಾಹೀನವಾದ ನಂತರ, ಅದರ ಕುತ್ತಿಗೆಗೆ ಬಿಗಿದಿದ್ದ ಉರುಳನ್ನು ಎಚ್ಚರಿಕೆಯಿಂದ ತೆಗೆದುಹಾಕಿ, ಅದನ್ನು ಪಂಜರಕ್ಕೆ ವರ್ಗಾಯಿಸಲಾಯಿತು.
ಅದೃಷ್ಟವಶಾತ್ ಚಿರತೆಗೆ ಗಂಭೀರ ಗಾಯಗಳಾಗಿರಲಿಲ್ಲ. ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯ ನಂತರ, ಚಿರತೆಯನ್ನು ಮತ್ತೆ ಸುರಕ್ಷಿತವಾಗಿ ದಟ್ಟಾರಣ್ಯಕ್ಕೆ ಬಿಡಲಾಯಿತು. ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಅರಣ್ಯ ಇಲಾಖೆಯ ಪ್ರಯತ್ನದಿಂದ ಚಿರತೆಯ ಜೀವ ಉಳಿದಿದೆ
Also Read: Areca nut: 70,000 ರೂಪಾಯಿ ಗಡಿದಾಟಿದ ರಾಶಿ ಅಡಿಕೆ : ಅಡಿಕೆ ಬೆಳೆಗಾರರಿಗೆ ಬಂಪರ್



