ಕರ್ನಾಟಕದ ಚಿರಾಪುಂಜಿ ಆಗುಂಬೆಯಲ್ಲೂ ಮಳೆಯ ಕೊರತೆ : ಜಲಾಶಯಗಳಲ್ಲೂ ಪಾತಾಳಕ್ಕೆ ಕುಸಿದ ನೀರಿನ ಮಟ್ಟ
ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಆಗುಂಬೆಯಲ್ಲಿ ಈ ಭಾರಿ ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಆರಂಭಕ್ಕೆ ಮೊದಲೇ ಆರ್ಭಟಿಸುತ್ತಿದ್ದ ಮಳೆ ಈ ಬಾರಿ ಕಣ್ಮರೆಯಾಗಿದೆ. ಅದ್ರಲ್ಲೂ ಮಳೆಕಾಡು ಎಂದೇ ಕರೆಯಿಸಿಕೊಳ್ಳುವ ಪಶ್ವಿಮ ಘಟದ ಪರ್ವತ ಶ್ರೇಣಿಗಳ ಸಾಲಿನಲ್ಲಿರುವ ಆಗುಂಬೆಯಲ್ಲಿ ಮಳೆಯ ಕೊರತೆ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಶಿವಮೊಗ್ಗ: ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಆಗುಂಬೆಯಲ್ಲಿ ಈ ಭಾರಿ ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಆರಂಭಕ್ಕೆ ಮೊದಲೇ ಆರ್ಭಟಿಸುತ್ತಿದ್ದ ಮಳೆ ಈ ಬಾರಿ ಕಣ್ಮರೆಯಾಗಿದೆ. ಅದ್ರಲ್ಲೂ ಮಳೆಕಾಡು ಎಂದೇ ಕರೆಯಿಸಿಕೊಳ್ಳುವ ಪಶ್ವಿಮ ಘಟದ ಪರ್ವತ ಶ್ರೇಣಿಗಳ ಸಾಲಿನಲ್ಲಿರುವ ಆಗುಂಬೆಯಲ್ಲಿ ಮಳೆಯ ಕೊರತೆ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಆಗುಂಬೆಯಲ್ಲಿ ವಾರ್ಷಿಕ 7,640 ಮಿ.ಮೀ ಮಳೆಯಾಗುತ್ತದೆ. ಆದರೆ ಹಲವು ವರ್ಷಗಳ ಬಳಿಕ ಆಗುಂಬೆಯಲ್ಲಿ ಜೂನ್ ಅಂತ್ಯದ ಬಿಸಿಲ ಝಳ ಕಾಣಿಸಿಕೊಂಡಿದೆ. ಈ ಬಾರಿ ಶೇಕಡಾ 54 ರಷ್ಟು ಮಳೆಯ ಕೊರತೆ ಎದುರಾಗಿದೆ. ಪಶ್ಚಿಮಘಟ್ಟದಲ್ಲಿಯೇ ಮಳೆಯ ಮರೆಯಾಗಿರುವುದು ರಾಜ್ಯದಲ್ಲಿ ಜಲಾಶಯಗಳ ಮೇಲೆ ನೇರ ಪರಿಣಾಮ ಬೀರಲಿದೆ. ಅದ್ರಲ್ಲೂ ಆಗುಂಬೆಯಲ್ಲಿ ಉಂಟಾಗಿರುವ ಮಳೆಯ ಕೊರತೆ ಕರ್ನಾಟಕ ರಾಜ್ಯದ ಮೇಲೆ ಪರಿಣಾಮವನ್ನುಂಟು ಮಾಡುವ ಆತಂಕ ಎದುರಾಗಿದೆ.
ಕರ್ನಾಟಕದಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಒಟ್ಟು 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಕೃಷಿಗೆ ಮಾತ್ರವಲ್ಲದೇ ಕುಡಿಯುವ ನೀರು, ವಿದ್ಯುತ್ ಉತ್ಪಾದನೆಯ ಮೇಲೆಯೂ ನೇರ ಪರಿಣಾಮವನ್ನು ಬೀರಲಿದೆ. ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಉಂಟಾದ್ರೆ ಕರ್ನಾಟಕದ ಹಲವು ರಾಜ್ಯಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
Also Read: ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ.. ಉಡುಪಿ, ದಕ್ಷಿಣ ಕನ್ನಡಕ್ಕೆ ಯೆಲ್ಲೋ ಅಲರ್ಟ್!
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿದಿಲ್ಲ. ಮಳೆಯ ಕೊರತೆ ಇದೀಗ ಮಲೆನಾಡು ಹಾಗೂ ಕರಾವಳಿ ಭಾಗದ ಕೃಷಿ ಚಟುವಟಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ದಕ್ಷಿಣದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ಎಂದಿನಂತೆ ಮಳೆಯ ಅಬ್ಬರ ಕಾಣದೆ ಇರುವುದು ಬರಗಾಲದ ಮುನ್ಸೂಚನೆ ನೀಡುತ್ತಿದೆ ಅಂತಾ ಅಭಿಪ್ರಾಯ ಪಡುತ್ತಿದ್ದಾರೆ.
Lack of rain in Cherrapunji and Agumbe in Karnataka Water levels in reservoirs have also dropped to record lows



