ಬೆಂಗಳೂರಿನ ವೀಕೆಂಡ್ ಸುತ್ತಾಟಕ್ಕೆ ಈ ಪ್ಲೇಸ್ ಬೆಸ್ಟ್

ಬೆಂಗಳೂರು ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿದೆ. ಆದರೆ ಇದನ್ನು ಹೊರತುಪಡಿಸಿ ಇನ್ನೂ ಒಂದಷ್ಟು ಜಾಗ ಸುತ್ತಬಹುದು.

ಬೆಂಗಳೂರಿನ ಅತ್ಯಂತ ಹಳೆಯ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಐತಿಹಾಸಿಕ ದೇವಾಲಯಗಳು, ಕಣ್ಮನ ಸೆಳೆಯುವ ಉದ್ಯಾನವನ, ಹಳೆಯ ರೆಸ್ಟೋರೆಂಟ್ಗಳು, ವೈವಿಧ್ಯಮಯ ತಿನಿಸುಗಳು, ತಾಜಾ ಹಣ್ಣು ಸುಗಂಧಭರಿತ ಹೂಗಳನ್ನು ಮಾರಾಟ ಮಾಡುವ ಚೆಂದದ ಸುಸಜ್ಜಿತ ಮಾರುಕಟ್ಟೆಯನ್ನು ಹೊಂದಿರುವ ಬಸವನ ಗುಡಿ ವೀಕೆಂಡ್ ಸುತ್ತಾಟಕ್ಕೆ ಒಂದು ಉತ್ತಮ ಸ್ಥಳವಾಗಿದೆ. ಬಸವನ ಗುಡಿಯಲ್ಲಿರುವ ಕೆಲವು ಚೆಂದದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

  1. ದೊಡ್ಡ ಬಸವನ ಗುಡಿ
    ಪ್ರಶಾಂತವಾದ ವಾತಾವರಣ ಹಾಗೂ ಜನ ದಟ್ಟಣೆ ಕಡಿಮೆಯಿದ್ದು ಆರಾಮವಾಗಿ ಸಮಯ ಕಳೆಯಬೇಕೆಂದರೆ ಇಲ್ಲಿ ಬೆಳಗ್ಗಿನ ಜಾವ ಹೊಗುವದು ಅತ್ಯಂತ ಸೂಕ್ತ. ವಿಜಯನಗರ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯವನ್ನು ಬಿಗ್ ಬುಲ್ ಟೆಂಪಲ್ ಎಂದೂ ಕರೆಯಲಾಗುತ್ತದೆ. ಶತಮಾನಗಳಷ್ಟು ಹಳೆಯ ಈ ದೇವಾಲಯದಲ್ಲಿ ಬೃಹತ್ ಗ್ರಾನೆಟ್ ಶಿಲೆಯಿಂದ ಸುಮಾರು 15 ಅಡಿ ಎತ್ತರ 20 ಅಡಿ ಉದ್ದವಿರುವ ನಂದಿ ಪ್ರತಿಮೆ ಇದೆ. ಈ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಬೃಹತ್ ಗಣೇಶನ ಗುಡಿ ಇದೆ. ಇದು ಮತ್ತೊಂದು ಬೃಹತ್ ಏಕಶಿಲಾ ವಿಗ್ರಹವಾಗಿದೆ.
  2. ಬ್ಯೂಗಲ್ ರಾಕ್ ಉದ್ಯಾನವನ
    ಬಸವನ ಗುಡಿಯಲ್ಲಿರುವ ಬ್ಯೂಗಲ್ ಶಿಲಾ ರಚನೆಯು ವಿಶ್ರಾಂತಿ ಪಡೆಯಲು ಉತ್ತಮ ಸ್ಥಳವಾಗಿದೆ. ಸುಮಾರು 3000 ಮಿಲಿಯನ್ ವರ್ಷಗಳಷ್ಟು ಹಳೆಯ ಈ ಶಿಲಾ ರಚನೆಯು ಸುತ್ತಲೂ ಉದ್ಯಾನವನ ಹಾಗೂ ಕೃತಕ ಜಲಪಾತಗಳು, ಕಾರಂಜಿಗಳನ್ನು ಒಳಗೊಂಡ ಹಸಿರಿನಿಂದ ಕಂಗೊಳಿಸುವ ಉದ್ಯಾನವನ. ಇದು ಐತಿಹಾಸಿಕ ಕಾವಲು ಗೋಪುರವನ್ನು ಹೊಂದಿದೆ. 16 ಎಕರೆಯಷ್ಟು ವಿಶಾಲವಾಗಿ ಹರಡಿದೆ.
  3. ಗಾಂಧಿ ಬಜಾರ್
    ಇದೊಂದು ಜನ ದಟ್ಟಣೆ ಇರುವ ಸಾಂಪ್ರದಾಯಿಕ ಬೀದಿ ಮಾರುಕಟ್ಟೆಯಾಗಿದೆ. ಇಲ್ಲಿ ವಿಶೇಷವಾಗಿ ತಾಜಾ ಸುಗಂಧಭರಿತ ತರ ತರದ ಹೂಗಳು ಕಣ್ಮನ ಸೆಳೆಯುತ್ತವೆ. ಧಾರ್ಮಿಕ ಸಮಾರಂಭಗಳಿಗೆ ಬಳಸುವ ಸಾಮಾಗ್ರಿಗಳು ಸಾಂಪ್ರದಾಯಿಕ ಕರಕುಶಲ ವಸ್ತುಗಳು ಬಟ್ಟೆ, ಜವಳಿ, ಅಲಂಕಾರ ವಸ್ತುಗಳು ಇವೆಲ್ಲ ಇದರ ಮುಖ್ಯ ಆಕರ್ಷಣೆ. ಇಲ್ಲಿರುವಂತಹ ವಿದ್ಯಾರ್ಥಿ ಭವನ ಒಂದು ಅದ್ಭುತ ರೆಸ್ಟೋರೆಂಟ್ ಆಗಿದೆ. ತರತರದ ವೈವಿಧ್ಯಮಯ ಚಾಟ್ ಗಳು, ಸಿಹಿ ತಿನಿಸುಗಳು ತಾಜಾ ಹಣ್ಣು ಹೀಗೆ ಇವುಗಳನ್ನು ಸವಿದು ಸಂಭ್ರಮಿಸ ಬಹುದು.
  4. ಲಾಲ್ಬಾಗ್
    ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ ಬೆಂಗಳೂರಿನ ಅತಿ ಸುಂದರ ಉದ್ಯಾನವನ. ಸುಮಾರು 240 ಎಕರೆಯಷ್ಟು ವಿಸ್ತಾರವಾದ ಇದು ನಗರದ ಹೃದಯ ಭಾಗದಲ್ಲಿರುವ ಕಾರಣ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಈ ಉದ್ಯಾನವನದಲ್ಲಿ ಸುಮಾರು 1800 ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಸಸ್ಯಗಳ ಸಂಗ್ರಹ, ಬಗೆ ಬಗೆಯ ಹೂವುಗಳು, ಭವ್ಯವಾದ ಗಾಜಿನ ಮನೆ, ಶತಮಾನಗಳಷ್ಟು ಹಳೆಯ ಬಂಡೆಗಳ ರಚನೆಗೆ ಹೆಸರುವಾಸಿಯಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories