ಸ್ಕ್ರಬ್ ಮಾಡದೆ ಒವನ್ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ ನೋಡಿ

ನಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ನಾವು ಬಳಸುವ ಪ್ರತಿಯೊಂದು ವಸ್ತುವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹು ಮುಖ್ಯ. ಪ್ರತಿಯೊಂದು ವಸ್ತುವನ್ನು ಬಳಸುವ ವಿಧಾನ ಎಷ್ಟು ವಿಭಿನ್ನವೋ ಅದರ ಸ್ವಚ್ಛತೆಯೂ ಹಾಗೆಯೇ ಆಯಾ ವಸ್ತುಸ್ಥಿತಿಗೆ ತಕ್ಕಂತೆ ಯಾವುದೇ ರೀತಿಯ ಹಾನಿಯಾಗದಂತೆ ಸ್ವಚ್ಛಗೊಳಿಸಬೇಕು. ನಾವು ಬಳಸುವ ಓವನ್ ಬಹಳ ಸೂಕ್ಷ್ಮವಾದ ಉಪಕರಣ ಹಾಗಾಗಿ ಓವನ್ ಗೆ ಯಾವುದೇ ರೀತಿಯ ಹಾನಿಯಾಗದಂತೆ ಸ್ಕ್ರಬ್ ಮಾಡದೆಯೇ ಯಾವರೀತಿ ಸ್ವಚ್ಛಗೊಳಿಸಬಹುದು ಎಂಬ ಬಗ್ಗೆ ಕೆಲವು ಉ ಪ್ರಯುಕ್ತ ಮಾಹೀತಿ ಇಲ್ಲಿದೆ.

ವಿಧಾನ 1 :- ಅಡಿಗೆ ಸೋಡಾ ಮತ್ತು ವಿನೆಗರ್
ಹೆಚ್ಚು ಕೊಳೆಯಾದ ಓವನ್ ಅನ್ನು ಯಾವುದೇ ದುಬಾರಿ ಕ್ಲೀನರ್ ಗಳ ಅಗತ್ಯವಿಲ್ಲದೆ ಸುಲಭವಾಗಿ ಸ್ವಚ್ಛಗೊಳಿಸಬಹುದಾದ ವಿಧಾನ ಇದಾಗಿದೆ. ಓವನ್ ಸಂಪೂರ್ಣವಾಗಿ ತಣ್ಣಗಾಗಿದೆ ಎಂದು ಖಚಿತಪಡಿಸಿಕೊಂಡು ಅದರ ರೆಕ್ ಗಳನ್ನು ತೆಗೆದು ಒಂದು ಸಣ್ಣ ಪಾತ್ರೆಯಲ್ಲಿ ಅರ್ದ ಕಪ್ ಅಡಿಗೆ ಸೋಡಾ 3-4 ಚಮಚ ನೀರು ಬೆರೆಸಿ ಮಿಶ್ರಣ ತಯಾರಿಸಿ. ಕಠಿಣ ಕಲೆ ತೆಗೆಯುವ ಸಲುವಾಗಿ 1 ಚಮಚ ಉಪ್ಪು ಬೆರೆಸಿ ಮತ್ತೆ ಬೇಕೆಂದರೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಮೃದುವಾದ ಬ್ರಷ್ ಅಥವಾ ಕೈಗೆ ಗ್ಲೌಸ್ ಧರಿಸಿ ಓವನ್ ನ ಒಳಭಾಗ ಹಾಗೂ ಗಾಜಿನ ಬಾಗಿಲಿಗೆ ಸವರಿ ಹಾಗೆಯೇ 2 ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ಹಾಗೆಯೇ ಬಿಡಿ. ನಂತರ ಒಣಗಿದ ಆ ಭಾಗಕ್ಕೆ ಸಮ ಪ್ರಮಾಣದಲ್ಲಿ ನೀರು ಹಾಗೂ ವಿನೆಗರ್ ಬೆರೆಸಿ ಸಿಂಪಡಿಸಬೇಕು ನಂತರ ಒದ್ದೆಯಾದ ಮೈಕ್ರೋ ಫೈಬರ್ ಬಟ್ಟೆ ಬಳಸಿ ಸ್ವಚ್ಛವಾಗಿ ವರೆಸಿಬಿಡಿ.

ವಿಧಾನ 2 :- ವಿನೆಗರ್ ಹಾಗೂ ಲಿಂಬು
ಈ ವಿಧಾನ ಚಿಕ್ಕ ಪ್ರಮಾಣದ ಕೊಳೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಹಾಗೂ ದಿನನಿತ್ಯದ ಶುಚಿಗೊಳಿಸುವಿಕೆಗೆ ಸಹಕಾರಿ.
ಒಂದು ಕಪ್ ನೀರಿಗೆ ಅರ್ದ ಹೋಳು ಲಿಂಬು ರಸ ಅಥವಾ ಅರ್ದ ಕಪ್ ಬಿಳಿ ವಿನಿಗರ್ ಮಿಶ್ರಣ ಮಾಡಿ ಓವನ್ ಸುರಕ್ಷಿತ ಪಾತ್ರೆಯಲ್ಲಿ ಹಾಕಿ ಮಧ್ಯೆ ರೆಕ್ ನಲ್ಲಿ ಇಡಿ ಓವನ್ ನ ತಾಪಮಾನ 250°F (120°C) ಗೆ ಹೊಂದಿಸಿ 30 ರಿಂದ 60 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಓವನ್ ಸಂಪೂರ್ಣವಾಗಿ ತಣ್ಣಗಾದ ನಂತರ ಒಳಗಿನ ಹಬೆಗೆ ಸಡಿಲವಾದ ಕೊಳೆಯನ್ನು ಮೈಕ್ರೋ ಫೈಬರ್ ಬಟ್ಟೆ ಬಳಸಿ ಸ್ವಚ್ಛವಾಗಿ ವರೆಸಿಬಿಡಿ.

ವಿಧಾನ 3 :- ಡಿಶ್ವಾಶ್ ಟ್ಯಾಬ್ಲೆಟ್
ಅತ್ಯಂತ ಗಟ್ಟಿಯಾದ ಕೊಳೆಯನ್ನು ಕಲೆಯನ್ನು ತೆಗೆದುಹಾಕಲು ಇದೊಂದು ಉತ್ತಮ ವಿಧಾನ.
ಓವನ್ ಸುರಕ್ಷಿತ ಪಾತ್ರೆಯಲ್ಲಿ ಡಿಶ್ವಾಶ್ ಟ್ಯಾಬ್ಲೆಟ್ ಹಾಕಿ ಒಂದು ಲೀಟರ್ ಬಿಸಿ ನೀರು ಬೆರೆಸಿ ಓವನ್ ನ ತಾಪಮಾನ 100°C ಗೆ ಹೊಂದಿಸಿ. 1 ಗಂಟೆಯ ನಂತರ ಸಂಪೂರ್ಣವಾಗಿ ತಣ್ಣಗಾದ ಮೇಲೆ ಒದ್ದೆಯಾದ ಮೈಕ್ರೋ ಫೈಬರ್ ಬಟ್ಟೆ ಬಳಸಿ ಸ್ವಚ್ಛವಾಗಿ ವರೆಸಿಬಿಡಿ.

ಪ್ರಮುಖ ಸಲಹೆಗಳು

  1. ಓವನ್ ನಲ್ಲಿ ಚೆಲ್ಲಿದ ಕೊಳೆಯುನ್ನು ಸಾಧ್ಯವಾದಷ್ಟು ಆಗಿಂದಾಗ್ಗೆ ಸ್ವಚ್ಛಗೊಳಿಸಿ.
  2. ಓವನ್ ಲೈನರ್ ಗಳನ್ನು ಹಾಕಬೇಕು. ಈ ಮ್ಯಾಟ್ಗಳು ಹನಿಗಳು ಹಾಗೂ ಸೋರಿಕೆಯನ್ನು ತಡೆಯುತ್ತದೆ.
  3. ಬೇಕಿಂಗ್ ಶೀಟ್ ಅನ್ನು ಬಳಸುವುದರಿಂದ ಓವನ್ ಮೇಲೆ ಆಗುವ ಅರ್ದ ಕೊಳೆ ತಡೆಯಬಹುದು

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories