ಜೀರ್ಣಕ್ರಿಯೆ ಸುಧಾರಿಸುವ, ಬೆನ್ನುಮೂಳೆ ಬಲಪಡಿಸುವ ಮತ್ತು ಮನಸ್ಸನ್ನು ಶಾಂತಗೊಳಿಸುವ ಆಸನ

ವಜ್ರಾಸನ ಅಥವಾ “ಥಂಡರ್ಬೋಲ್ಟ್ ಪೋಸ್,” ಎಂದು ಎದು ಕರೆಯಲ್ಪಡುವ ಈ ಆಸನವನ್ನು ಮಂಡಿಯೂರಿ ಮತ್ತು ನೇರವಾದ ಬೆನ್ನೆಲುಬಿನೊಂದಿಗೆ ನಮ್ಮ ಹಿಮ್ಮಡಿಯ ಮೇಲೆ ಸರಳವಾಗಿ ಕುಳಿತುಕೊಂಡು ಮಾಡಬಹುದಾಗಿದೆ.
ಯೋಗದ ಎಲ್ಲಾ ಆಸನಗಳಲ್ಲಿ ಇದು ವೈಶಿಷ್ಟ್ಯ , ಏಕೆಂದರೆ ಈ ಭಂಗಿಯನ್ನು ಊಟವಾದ ತಕ್ಷಣವೇ ಮಾಡಬಹುದಾಗಿದೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಮತ್ತು ಗ್ಯಾಸ್ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿಯಾಗಿದೆ. ಈ ಆಸನವನ್ನು “ಡೈಮಂಡ್ ಪೋಸ್” ಎಂದೂ ಕರೆಯುತ್ತಾರೆ. ನಮ್ಮ ಮನಸ್ಸನ್ನು ಶಾಂತಿ ಹಾಗು ಏಕಾಗ್ರತೆಯಿಂದ ಇರಿಸಿಕೊಳ್ಳಲು ಈ ಭಂಗಿಯು ಫಲಕಾರಿಯಾಗಿದೆ.

ಈ ಹೆಸರು ಸಂಸ್ಕೃತ ಪದಗಳಾದ “ವಜ್ರ” (ಸಿಡಿಲು ಅಥವಾ ವಜ್ರ) ಮತ್ತು “ಆಸನ” (ಭಂಗಿ ಅಥವಾ ಆಸನ) ದಿಂದ ಬಂದಿದೆ, ಇದು ಶಕ್ತಿ ಮತ್ತು ಸ್ಥಿರತೆಯನ್ನು ಸಂಕೇತಿಸುತ್ತದೆ.
 
ಆಸನ ಮಾಡುವ ವಿಧಾನ : ಮಂಡಿಯೂರಿ ನಮ್ಮ ಹಿಮ್ಮಡಿಯ ಮೇಲೆ ಕುಳಿತುಕೊಂಡು, ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಮತ್ತು ನಮ್ಮ ಕೈಗಳನ್ನು ನಮ್ಮ ತೊಡೆಗಳ ಮೇಲೆ ಇಟ್ಟುಕೊಳ್ಳಬೇಕು. 

ವಜ್ರಾಸನ ಪ್ರಯೋಜನಗಳೇನು ?

  1. ವಜ್ರಾಸನ ಮಾಡುವುದರಿಂದ ನಮ್ಮ ಜೀರ್ಣಾಂಗ ಕ್ರಿಯೆಯು ಸುಧಾರಿಸುತ್ತದೆ. ಈ ಆಸನವು ನಮ್ಮ ಕಾಲುಗಳು ಹಾಗು ತೊಡೆಗಳಿಗೆ ರಕ್ತದ ಸಂಚಾರವನ್ನು ನಿರ್ಬಂಧಿಸಿ , ನಮ್ಮ ಹೊಟ್ಟೆಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಮಾಡಲು ಸಹಾಯಕಾರಿಯಾಗಿದೆ.
  2. ಬೆನ್ನು ನೋವಿನ ನಿವಾರಣೆಗೆ ಸಹಾಯಕಾರಿಯಾಗಿದೆ.
    ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಪಡಿಸಿ, ನೋವು ಮತ್ತು ಬಿಗಿತದಿಂದ ಪಾರಾಗಲು ಈ ಆಸನವು ಫಲಕಾರಿಯಾಗಿದೆ.
  3. ಸಂಧಿವಾತದಿಂದ ನಿವಾರಣೆ ಹೊಂದಬಹುದು.
    ವಜ್ರಾಸನವು ನಮ್ಮ ತೊಡೆ ಮತ್ತು ಪಾದದ ಸ್ನಾಯುಗಳ ನಮ್ಯತೆಯನ್ನು ಕಾಪಾಡಿ, ನಮ್ಮ ಸೊಂಟ ಹಾಗು ಮೊಣಕಾಲುಗಳ ಸ್ನಾಯುಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.
  4. ನಮ್ಮ ಮನಸ್ಸನ್ನು ಶಾಂತಗೊಳಿಸಲು ಹಾಗು ಮನಸ್ಸಿನ ಏಕಾಗ್ರತೆಗೆ ಸಹಾಯ ಮಾಡುತ್ತದೆ.
    ಧ್ಯಾನ ಮಾಡಲು ಅತೀ ಉತ್ತಮವಾದ ಆಸನವೇ ಈ ವಜ್ರಾಸನ. ಈ ಭಂಗಿಯಲ್ಲಿ ನಾವು ಉಸಿರಾಟದ ವ್ಯಾಯಾಮಗಳನ್ನು ಮಾಡಿದರೆ ನಮ್ಮ ಮನಸ್ಸು ತಿಳಿಯಾಗಿ ಶಾಂತತೆ ಸಿಗುತ್ತದೆ ಹಾಗು ನಮ್ಮ ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಬಹಳ ಫಲಕಾರಿಯಾಗಿದೆ.
  5. ದೇಹದ ಭಂಗಿ ಸುಧಾರಿಸುತ್ತದೆ.
    ನಾವು ವಜ್ರಾಸನ ಮಾಡುವಾಗ ನಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಲೇ ಬೇಕು. ಇದರಿಂದ ದೇಹದ ಭಂಗಿ ಸುಧಾರಿಸಿ ಎಲ್ಲಾ ಸಮಯದಲ್ಲೂ ನಮ್ಮ ಬೆನ್ನನ್ನು ನೇರವಾಗಿಟ್ಟುಕೊಳ್ಳಲು ಈ ಆಸನ ಸಹಾಯಕವಾಗಿದೆ

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories