ನಿಮ್ಮ ಮಕ್ಕಳು ಅತಿಯಾಗಿ ಫೋನ್ ನೋಡುತ್ತಿದ್ದಾರೆಯೇ : ಕಾದಿದೆ ಕಂದಮ್ಮಗಳ ಪ್ರಾಣಕ್ಕೆ ಸಂಚಕಾರ
Smart Phone : ಈಗಂತೂ ಡಿಜಿಟಲ್ ಯುಗ. ಪೋಷಕರ ಕೈಯಲ್ಲೂ ಮೊಬೈಲ್. ಮಕ್ಕಳ ಕೈಯಲ್ಲೂ ಮೊಬೈಲ್. ಆನ್ಲೈನ್ ತರಗತಿಗಳು, ಗೇಮಿಂಗ್ ಮತ್ತು ಸ್ಟ್ರೀಮಿಂಗ್ ಹೀಗೆ ನಾನಾ ಕಾರಣಕ್ಕಾಗಿ ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೂ ಮೊಬೈಲ್ ಬಳಕೆಯಾಗುತ್ತಲೇ ಇರುತ್ತದೆ.
ಈ ರೀತಿ ದಿನವಿಡೀ ಮೊಬೈಲ್ ಬಳಕೆ ಮಾಡುವ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಎಂದು ಜರ್ನಲ್ ಆಫ್ ಡಿ ಅಮೆರಿಕನ್ ಅಸೋಸಿಯೇಷನ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರಲ್ಲಿ ತಿಳಿದುಬಂದಿದೆ.
ಹೆಚ್ಚುಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕ್ರೋಲ್ ಮಾಡುವುದು, ಗೇಮಿಂಗ್ಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳಲ್ಲಿ ಹೃದಯರಕ್ತನಾಳಗಳು ಬ್ಲಾಕ್ ಆಗುವ ಅಪಾಯ ಜಾಸ್ತಿ ಇರುತ್ತದೆ.
ಈ ಅಧ್ಯಯನಕ್ಕಾಗಿ ಸಂಶೋಧಕರು 1 ಸಾವಿರಕ್ಕೂ ಅಧಿಕ ಪೋಷಕರು ಹಾಗೂ ಮಕ್ಕಳನ್ನು ಬಳಸಿಕೊಂಡಿದ್ದರು.
ಇದರಲ್ಲಿ ಹೆಚ್ಚು ಕಾಲ ಸ್ಮಾರ್ಟ್ಫೋನ್ಗಳನ್ನು ಬಳಕೆ ಮಾಡಿದವರಲ್ಲಿ ಹೃದಯ ರಕ್ತನಾಳದ ಅಪಾಯವನ್ನು ಗುರುತಿಸಲಾಯಿತು. ಸೊಂಟದ ಸುತ್ತಳತೆ, ರಕ್ತದೊತ್ತಡ, ಉತ್ತಮ ಕೊಲೆಸ್ಟ್ರಾಲ್ ಮಟ್ಟ, ಟ್ರೈಗ್ಲಿಸರೈಡ್ಗಳು ಹಾಗೂ ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳನ್ನು ಪರೀಕ್ಷಿಸುವ ಮೂಲಕ ಈ ವರದಿ ತಯಾರಿಸಲಾಗಿದೆ.
Also Read: ಜೀರ್ಣಕ್ರಿಯೆ ಸುಧಾರಿಸುವ, ಬೆನ್ನುಮೂಳೆ ಬಲಪಡಿಸುವ ಮತ್ತು ಮನಸ್ಸನ್ನು ಶಾಂತಗೊಳಿಸುವ ಆಸನ
ಮಕ್ಕಳಲ್ಲಿ ಸ್ಮಾರ್ಟ್ಫೋನ್ ಬಳಕೆ ಕುರಿತಂತೆ ಪೋಷಕರು ತಿಳಿದುಕೊಳ್ಳಲೇಬೇಕಾದ ಅಂಶಗಳು :
- ಪ್ರತಿ ಹೆಚ್ಚುವರಿ ಸ್ಕ್ರೀನ್ ಸಮಯದಿಂದ ಮಕ್ಕಳಲ್ಲಿ 0.08 ಪ್ರತಿಶತ ಹಾಗೂ ಹದಿ ಹರೆಯದವರಲ್ಲಿ0.13 ಪ್ರತಿಶತದಷ್ಟು ಹೃದಯ ರಕ್ತನಾಳದ ಅಪಾಯ ಹೆಚ್ಚಿರುತ್ತದೆ.
- ಅತಿಯಾಗಿ ಮೊಬೈಲ್ ನೋಡುವವರಲ್ಲಿ ನಿದ್ರೆ ಕಳಪೆಮಟ್ಟದಲ್ಲಿದ್ದು ಇಂತವರು ಬಲವಾದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದು ಕಂಡು ಬಂದಿದೆ.
- ಉತ್ತಮ ನಿದ್ರೆಯಿಂದ ಹೃದಯದ ಅಪಾಯವನ್ನು 12 ಪ್ರತಿಶತಕ್ಕೆ ಕಡಿಮೆ ಮಾಡಬಹುದು.ಹೀಗಾಗಿ ಉತ್ತಮ ನಿದ್ರೆ ಬಹಳ ಮುಖ್ಯವಾಗಿದೆ.
- ಸ್ಮಾರ್ಟ್ಫೋನ್ಗಳನ್ನು ಅತಿಯಾಗಿ ಬಳಸುವ ಮಕ್ಕಳಲ್ಲಿ ಜೀರ್ಣಾಂಗ ಸಂಬಂಧಿ ಸಮಸ್ಯೆಗಳು ಇರುವುದು ಕೂಡ ಅಧ್ಯಯನದಲ್ಲಿ ಬೆಳಕಿಗೆ ಬಂದಿತು.
- ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆಯಿಂದ 10 ವರ್ಷ ಮೇಲ್ಪಟ್ಟವರಲ್ಲಿ ಹೃದಯದ ಅಪಾಯ ಜಾಸ್ತಿ ಇದೆ ಎಂದು ಈ ಅಧ್ಯಯನ ತಿಳಿಸಿದೆ.
Also Read: ಸ್ಕ್ರಬ್ ಮಾಡದೆ ಒವನ್ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ ನೋಡಿ
ಹೀಗಾಗಿ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುವುದು ಖಂಡಿತ ಮುಖ್ಯ, ಹಾಗೆಂದು ಅತಿಯಾದರೆ ಅಮೃತವೂ ವಿಷ ಎಂಬಂತೆ, ಡಿಜಿಟಲ್ ಲೋಕವೇ ನಿಮ್ಮ ಮಕ್ಕಳ ಬದುಕಾಗದಿರಲಿ. ಮಕ್ಕಳಿಗೆ ಸ್ಮಾರ್ಟ್ ಫೋನ್ಗಳ ಹೊರತಾಗಿಯೂ ಸುಂದರ ಜಗತ್ತೊಂದಿದೆ ಎಂಬುದನ್ನು ಅರಿವು ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ. ಈ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಕೂಡ ಪೋಷಕರ ಮೇಲಿದೆ.



