ಧರ್ಮಸ್ಥಳ ಬುರುಡೆ ಪ್ರಕರಣ : ಕೇಸ್ ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ SIT ನೋಟಿಸ್

Dharmasthala Skull Case SIT : ಸೌಜನ್ಯ ಪ್ರಕರಣವನ್ನು ದಾಳವಾಗಿಟ್ಟುಕ್ಕೊಂಡು ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿ ಬುರುಡೆ ಗ್ಯಾಂಗ್ ಈಗ ತಾನೇ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಪ್ರಕರಣದ ಇಂಚಿಂಚೂ ಜಾಲಾಡುತ್ತಿರುವ ಎಸ್ಐಟಿ ತನಿಖೆಯಿಂದಾಗಿ ಸುಸ್ತಾಗಿರುವ ಬುರುಡೆ ಗ್ಯಾಂಗ್ ಸದಸ್ಯರು ತಮ್ಮ ದೂರನ್ನೇ ವಾಪಾಸ್ಸು ತೆಗೆದುಕೊಳ್ಳುವ ಪ್ರಯತ್ನದಲ್ಲಿರುವ ನಡುವೆಯೇ ಇಂದು ಮತ್ತೆ ಎಸ್ಐಟಿ ಬುರುಡೆ ತಂಡಕ್ಕೆ ನೋಟಿಸ್ ನೀಡಿದೆ.
ಪ್ರಕರಣ ಸಂಬಂಧ ತನಿಖೆಗೆ ನಾಳೆ ಹಾಜರಾಗುವಂತೆ ವಿಠ್ಠಲಗೌಡಗೆ ಇಂದು ಎಸ್ಐಟಿ ಮತ್ತೊಂದು ನೋಟಿಸ್ ನೀಡಿದೆ. ಇದರ ಜೊತೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಜಯಂತ್ ಟಿ.ಗೆ ನವೆಂಬರ್ ಮೂರರಂದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ಎಸ್ಐಟಿ ನೋಟಿಸ್ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆಯ ತಿಮರೋಡಿ ನಿವಾಸಕ್ಕೆ ಇಂದು ಭೇಟಿ ನೀಡಿದ ಪಿಎಸ್ಐ ಗುಣಪಾಲ್ ನೇತೃತ್ವದ ತಂಡ ಅವರ ನಿವಾಸದ ಎದುರು ನವೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದೆ.
Aslo Read : ಧರ್ಮಸ್ಥಳ ಪ್ರಕರಣ ಕ್ಲೈಮ್ಯಾಕ್ಸ್ : ವರದಿ ಸಲ್ಲಿಕೆಗೆ ಎಸ್ಐಟಿಗೆ ಸರಕಾರದ ಸೂಚನೆ
ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೀಡಿರುವ ನೋಟಿಸ್ ಹಾಗೂ ಧರ್ಮಸ್ಥಳದಲ್ಲಿ ದಾಖಲಾಗಿರುವ ಬುರುಡೆ ಪ್ರಕರಣದ ಮೂಲ ಎಫ್ಐಆರ್ರನ್ನು ರದ್ದುಗೊಳಿಸುವಂತೆ ಬುರುಡೆ ಗ್ಯಾಂಗ್ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆಯ ನೆಪದಲ್ಲಿ 100 ತಾಸಿಗೂ ಅಧಿಕ ಕಾಲ ನಮ್ಮನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬೆಲ್ಲ ಕಾರಣವನ್ನು ಬುರುಡೆ ಗ್ಯಾಂಗ್ ಕೋರ್ಟ್ಗೆ ನೀಡಿದೆ. ಈ ಬೆನ್ನಲ್ಲೇ ಇದೀಗ ಎಸ್ಐಟಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಈ ನಾಲ್ವರಿಗೆ ನೋಟಿಸ್ ಕಳುಹಿಸಿದೆ.
Aslo Read : ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಮೋಸ :ಮಹಿಳೆ ಸಹಿತ ಇಬ್ಬರ ಬಂಧನ
Dharmasthala Skull Case SIT Issues Notice to Burude Gang Immediately After They Approach High Court to Quash FIR



