ಶೃಂಗೇರಿಗೆ ಬಂದಾಗ ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ

ಶ್ರೀ ಕ್ಷೇತ್ರ ಶೃಂಗೇರಿ.
ಶೃಂಗೇರಿ ಎಂದು ಕೇಳಿದ ಕೂಡಲೇ ನಮಗೆ ನೆನಪಾಗುವುದೇ ಶ್ರೀ ಶಾರದಾಂಬ ದೇವಸ್ಥಾನ. ಮಲೆನಾಡಿನ ತಪ್ಪಲಿನಲ್ಲಿ ಕಣ್ತುಂಬಿಕೊಳ್ಳುವ ದೇವಸ್ಥಾನ ಇದಾಗಿದೆ.
8 ನೇ ಶತಮಾನದಲ್ಲಿ ತತ್ವಜ್ಞಾನಿ ಶ್ರೀಯುತ ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ 4 ಪೀಠಗಳಲ್ಲಿ ಈ ಶೃಂಗೇರಿಯ ಶಾರದಾ ಪೀಠವು ಮೊದಲನೇಯದು.
ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ, ರಥೋತ್ಸವ , ಪಾರಾಯಣಗಳು, ಅರ್ಚನೆಗಳು , ಚಿನ್ನದ ರಥ ಸೇವೆ ಹೀಗೆ ಮುಂತಾದ ಸೇವೆಗಳು ನಡೆಯುತ್ತವೆ.
ಶಾರದಾಂಬ ದೇವಾಲಯದ ಇತಿಹಾಸವೇನು?
ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ ಶ್ರೀ ಕ್ಷೇತ್ರವನ್ನು ಸ್ಥಾಪಿಸಲು ಕಾರಣವಿದೆ.
ಒಮ್ಮೆ ಶಂಕರಾಚಾರ್ಯರು ತುಂಗಾ ನದಿ ತಟಕ್ಕೆ ಬಂದಾಗ ಅಲ್ಲಿ ಜೋರಾಗಿ ಬಿಸಿಲು ಇತ್ತು. ಆ ಉರಿ ಬಿಸಿಲಿನ ಸಂದರ್ಭದಲ್ಲಿ ಹಾವೊಂದು ತನ್ನ ಹೆಡೆ ಬಿಚ್ಚಿ ಕಪ್ಪೆಯೊಂದಕ್ಕೆ ರಕ್ಷಣೆ ನೀಡುತ್ತಿತ್ತಂತೆ.
ಶತ್ರುಗಳು ಕೂಡ ಮಿತ್ರರಾಗಿ ಸಹಾಯಕ್ಕೆ ನಿಂತ ಈ ಸ್ಥಳದಲ್ಲಿ ಅಪೂರ್ವವಾದ ಶಕ್ತಿ ಇದೆಯೆಂದು ಆದಿ ಶಂಕರಾಚಾರ್ಯರಿಗೆ ಮನದಟ್ಟಾಗಿ ಈ ಕ್ಷೇತ್ರವನ್ನು ಪುಣ್ಯಕ್ಷೇತ್ರವನ್ನಾಗಿ ಮಾಡಿದರೆಂದು ಹೇಳಲಾಗುತ್ತದೆ.
ಆದಿ ಶಂಕರಾಚಾರ್ಯರು ಮೊದಲನೇ ಪೀಠಾಧಿಪತಿಗಳು. ಇಲ್ಲಿವರೆಗೆ 36 ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.
ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು.
ಶ್ರೀ ಜಗದ್ಗುರುಗಳು ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮರನ್ನು ಶಿಷ್ಯ ಸ್ವೀಕಾರ ಮಾಡುವುದಾಗಿ ಹೇಳಿ 37ನೇ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ.
ಶ್ರೀ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮಾ ಅವರಿಗೆ ಶಿಷ್ಯ ಸ್ವೀಕಾರದ ನಂತರ ಜಗದ್ಗುರು ಭಾರತೀ ತೀರ್ಥರು ‘ವಿಧುಶೇಖರ ಭಾರತಿ’ ಎಂಬ ಯೋಗ ಪಟ್ಟ ನೀಡಿದ್ದಾರೆ.
ಹೀಗಿದೆ ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬ ದೇವಸ್ಥಾನದ ವೈಶಿಷ್ಟ್ಯ. ನೀವೆಲ್ಲರೂ ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಬಂದು ಶಾರದಾಂಬೆಯ ಅನುಗ್ರಹಕ್ಕೆ ಪಾತ್ರರಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.
ಶಾರದಂಬ ದೇವಸ್ಥಾನವನ್ನು ಹೊರತು ಪಡಿಸಿ ಶೃಂಗೇರಿಯಲ್ಲಿ ಹಲವು ದೇವಸ್ಥಾನಗಳು , ಪ್ರೇಕ್ಷಣೀಯ ಸ್ಥಳಗಳಿವೆ. ಪ್ರಮುಖವಾಗಿ ವಿದ್ಯಾಶಂಕರ ದೇವಸ್ಥಾನ, ತೋರಣ ಗಣಪತಿ ದೇವಸ್ಥಾನವಿದೆ. ಹಾಗೆಯೇ ಶೃಂಗೇರಿಯಿಂದ 15 -16 ಕಿಮೀ ದೂರದಲ್ಲಿ ಕಣ್ಮನ ಸೆಳೆಯುವಂತಹ ಒಂದು ಸಿರಿಮನೆ ಜಲಪಾತವಿದೆ. ಪ್ರಕೃತಿಯ ಮಡಿಲಲ್ಲಿ ಒಂದು ಸುಂದರ ವಾದ ಜಲಪಾತವನ್ನು ನೋಡವುದೇ ಒಂದು ಖುಷಿ.
ಹಾಗಾಗಿ ನೀವೆಲ್ಲರೂ ಒಮ್ಮೆ ಶೃಂಗೇರಿಗೆ ಬಂದು ಈ ಎಲ್ಲ ಸ್ಥಳಗಳಿಗೆ ಭೇಟಿ ನೀಡಲೇ ಬೇಕು.



