Bigg Boss 12: ಎಲ್ಲರ ಪ್ರೀತಿಯ ಮಲ್ಲಮ್ಮ ಬಿಗ್‌ ಬಾಸ್‌ನಿಂದ ಹೊರಕ್ಕೆ

ಬಿಗ್‌ ಬಾಸ್‌ನಿಂದ 12ರಿಂದ ಮಲ್ಲಮ್ಮ (Mallamma Elimination) ಹೊರಬಿದ್ದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಲ್ಲಮ್ಮ ಬಿಗ್‌ ಬಾಸ್‌ನಿಂದ ಹೊರಬಿದ್ದ ಕುರಿತು ಊಹಾಪೋಹಗಳು ಹರಿದಾಡಿತ್ತು. ಆದರೆ ಅಂದು ಆ ವದಂತಿಗಳು ಸುಳ್ಳೆಂದು ಸಾಬೀತಾಗಿತ್ತು. ಆದರೆ, ಇದೀಗ ಬಿಗ್‌ ಬಾಸ್‌ನಿಂದ ಮಲ್ಲಮ್ಮ ನಿಜಕ್ಕೂ ಹೊರಬಿದ್ದಿದ್ದಾರೆ.

ಮಲ್ಲಮ್ಮ ಹೊರಬಿದ್ದ ಸುದ್ದಿ ಕೇಳಿ ಇನ್ನೋರ್ವ ಸ್ಪರ್ಧಿ ಮಾಪು ನಿಪನಾಳ, ಮಲ್ಲಮ್ಮ ಅವರ ಬದಲು ತಾವೇ ಬಿಗ್‌ ಬಾಸ್‌ನಿಂದ ಹೊರ ಹೋಗುವುದಾಗಿ ತಿಳಿಸಿದರು. ಆದರೆ, ಕಿಚ್ಚ ಸುದೀಪ್‌ ಅವರು, ಇದು ಜನರ ಆಯ್ಕೆ, ಹಾಗೆ ಬದಲಿಸಲು ಆಗುವುದಿಲ್ಲ ಎಂದು ತಿಳಿಸಿದರು. ನಂತರ, ಎಲ್ಲ ಸ್ಪರ್ಧಿಗಳೂ ಮಲ್ಲಮ್ಮರಿಗೆ ಜೈಕಾರ ಕೂಗಿದರು.

ಎಲ್ಲರ ಪ್ರೀತಿಯ ಮಲ್ಲಮ್ಮ ಇಂದು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಅವರು ಮನೆಯಿಂದ ಹೊರಗೆ ಬಿದ್ದಿರುವುದು ಅವರ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ. ಮನೆಯ ಎಲ್ಲ ಸದಸ್ಯರ ಜೊತೆಗೆ ಖುಷಿಯಿಂದ ಬೆರೆಯುತ್ತಿದ್ದ ಮಲ್ಲಮ್ಮ ಆಟದಿಂದ ಇಷ್ಟು ಬೇಗ ಹೊರ ನಡೆಯುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ.

​ಮಲ್ಲಮ್ಮ ಅವರ ಜರ್ನಿ ಅತ್ಯಂತ ಸ್ಫೂರ್ತಿದಾಯಕ. ಮೂಲತಃ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಹಳ್ಳಿಯವರಾದ ಮಲ್ಲಮ್ಮ, ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದವರು. ಇಲ್ಲಿ ಒಂದು ಫ್ಯಾಷನ್ ಡಿಸೈನ್ ಶಾಪ್‌ನಲ್ಲಿ (ಬೋಟಿಕ್‌ನಲ್ಲಿ) ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಮುಗ್ಧತೆ, ಗ್ರಾಮೀಣ ಶೈಲಿ ಮತ್ತು ಹಾಸ್ಯಭರಿತ ಪಂಚ್ ಡೈಲಾಗ್‌ಗಳು ಅಲ್ಲಿನ ಗ್ರಾಹಕರ ಗಮನ ಸೆಳೆದಿತ್ತು.

​ಇದೇ ಮಾತು ಮತ್ತು ಸರಳ ಜೀವನಶೈಲಿಯ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದಾಗ, ಅವರು ‘ಇನ್ನೊಸೆಂಟ್ ಇನ್‌ಫ್ಲುಯೆನ್ಸರ್‌’ ಎಂದು ಪ್ರಸಿದ್ಧಿ ಪಡೆದರು. ಕೇವಲ ಹಾಸ್ಯ ಮಾತ್ರವಲ್ಲದೆ, ಹಳ್ಳಿ ಸಂಸ್ಕೃತಿ, ಹಬ್ಬಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರು ಮಾತನಾಡುವ ರೀಲುಗಳು ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿಕೊಟ್ಟವು. ಅವರಿಗೆ ‘ಮಲ್ಲಮ್ಮ ಟಾಕ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿದೆ. ಹಳ್ಳಿಯಿಂದ ಬಂದು, ತಮ್ಮ ಸರಳತೆಯಿಂದಲೇ ಲಕ್ಷಾಂತರ ಜನಪ್ರಿಯತೆ ಪಡೆದ ಅವರ ಈ ಪಯಣ ನಿಜಕ್ಕೂ ಮೆಚ್ಚುವಂತದ್ದು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories