ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಭಿನ್ನಮತ.. ಪಕ್ಷ ತೊರೆಯುತ್ತಾರಾ ಸಿಂಗಂ ಅಣ್ಣಾಮಲೈ..?

Singam Annamalai: ಕರ್ನಾಟಕ ಪೊಲೀಸ್​ ಇಲಾಖೆಯ ನಿಷ್ಠಾವಂತ ಅಧಿಕಾರಿ ಎನಿಸಿದ್ದ ಅಣ್ಣಾಮಲೈ ಕರ್ನಾಟಕದ ಸಿಂಗಂ ಎಂಬ ಬಿರುದನ್ನೇ ಪಡೆದಂತಹ ಅಧಿಕಾರಿಯಾಗಿದ್ದವರು. ಆದರೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮಿಳುನಾಡಿನಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಣ್ಣಾಮಲೈ ದ್ರಾವಿಡರ ನಾಡಿನಲ್ಲಿ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೀಗ ಅಣ್ಣಾಮಲೈ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ.

ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೆ ಪಳನಿಸ್ವಾಮಿ ಹಾಗೂ ಅಣ್ಣಾಮಲೈ ನಡುವೆ ರಾಜಕೀಯ ಸಂಬಂಧ ಕದಡಿದೆ ಎನ್ನಲಾಗ್ತಿದೆ. ಆದರೆ ಸದ್ಯ ಹೈಕಮಾಂಡ್​ ಅಣ್ಣಾಮಲೈ ಅವರನ್ನೇ ಮೂಲೆಗುಂಪು ಮಾಡ್ತಿದೆ ಎಂದು ಹೇಳಲಾಗ್ತಾ ಇದೆ.

ಈ ಎಲ್ಲಾ ಮಾತಿಗೆ ಪೂರಕ ಎಂಬಂತೆ ಅಣ್ಣಾಮಲೈ ಕೊಯಂಬತ್ತೂರಿನಲ್ಲಿ ನೀವು ಬಲವಂತದಿಂದ ಯಾರನ್ನೂ ಉಳಿಸಿಕೊಳ್ಳಲಾರಿರಿ ಎಂಬ ಹೇಳಿಕೊಂದನ್ನು ನೀಡಿದ್ದಾರೆ. ಈ ಹೇಳಿಕೆಯು ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಕಲಹ ಸ್ಪೋಟಗೊಂಡಿದೆ ಎಂಬುದನ್ನು ಸಾರಿ ಸಾರಿ ಹೇಳಿದೆ.

Also Read: MLA HY Meti passes away : ಮಾಜಿ ಸಚಿವ, ಹಾಲಿ ಶಾಸಕ ಹೆಚ್.ವೈ. ಮೇಟಿ ನಿಧನ

ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವ ಎಐಡಿಎಂಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಸಹ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಣ್ಣಾಮಲೈ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ್ದೂ ಸಹ ಪಳನಿಸ್ವಾಮಿ ಎನ್ನಲಾಗ್ತಾ ಇದೆ.

ಬಿಜೆಪಿ ಹೈಕಮಾಂಡ್​ ಪಳನಿಸ್ವಾಮಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಅಣ್ಣಾಮಲೈ ಬೇಸರಕ್ಕೆ ಕಾರಣವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡಿದೆ. ಅಣ್ಣಾಮಲೈ ಅವರ ಜನಪ್ರಿಯತೆಯೇ ಪಳನಿಸ್ವಾಮಿ ಅವರ ಅಸೂಯೆಗೆ ಕಾರಣ ಎನ್ನಲಾಗಿದೆ.

ಇದಕ್ಕಾಗಿಯೇ ಪಳನಿಸ್ವಾಮಿ ಅವರು ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಈ ವಿಚಾರವಾಗಿಯೂ ಅಣ್ಣಾಮಲೈ ಅಸಮಾಧಾನಗೊಂಡಿದ್ದು ಈ ಬಗ್ಗೆ ಹೈಕಮಾಂಡ್​ ಬಳಿಯೂ ಮಾತನಾಡಿದ್ದಾರೆ ಎನ್ನಲಾಗಿದೆ.

Also Read: Sirsi : ಮನೆಮುಂದೆ ನಿಲ್ಲಿಸಿದ ವಾಹನ ಕಳವು : ಸ್ಕೂಟರ್‌ ಬಿಟ್ಟು ಎಸ್ಕೇಪ್‌

ಆದರೆ ಈ ಬಗ್ಗೆ ಹೈಕಮಾಂಡ್​​ ಜಾಣ ನಡೆ ಅನುಸರಿಸುತ್ತಿದೆ. ಇತ್ತ ಹೈಕಮಾಂಡ್​ ಅತ್ತ ಪಳನಿಸ್ವಾಮಿಯ ನಡೆಯಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ಅಣ್ಣಾಮಲೈ ಮುಂದೆ ಯಾವ ನಡೆ ಅನುಸರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories