Sirsi : ಮನೆಮುಂದೆ ನಿಲ್ಲಿಸಿದ ವಾಹನ ಕಳವು : ಸ್ಕೂಟರ್‌ ಬಿಟ್ಟು ಎಸ್ಕೇಪ್‌

ಶಿರಸಿ (Sirsi) : ಮನೆಯ ಮುಂದೆ ನಿಲ್ಲಿಸಿದ್ದ ಸರಕು ತುಂಬಿ ವಾಹನವನ್ನು ಕದ್ದೊಯ್ದ ಘಟನೆ ಹುಬ್ಬಳ್ಳಿ – ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆದರೆ ವಾಹನ ಕಳವು ಮಾಡಿದ ಕಳ್ಳರು ಬೈಕ್‌ ಬಿಟ್ಟು ಪರಾರಿಯಾಗಿದ್ದಾರೆ.

ಮನೆಯ ಎದುರು ನಿಲ್ಲಿಸಿದ್ದ ಸುಮಾರು ₹4,50,000 ಮೌಲ್ಯದ ಅಶೋಕ ಲೈಲ್ಯಾಂಡ್ ದೋಸ್ತ್ ಸರಕು ವಾಹನವನ್ನು ಕಳ್ಳರು ಕದ್ದೊಯ್ದಿದ್ದಾರೆ. ಭಾನುವಾರ ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 4:20 ಗಂಟೆಯ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ.

ವಾಹನ ಮಾಲೀಕರು ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ನಡೆದಿರೋದು ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ, ಕಳ್ಳರು ತಮ್ಮದೆಂದು ಶಂಕಿಸಲಾದ, ಕಪ್ಪು ಬಣ್ಣದ, ನೋಂದಣಿ ಫಲಕವಿಲ್ಲದ ಸುಜುಕಿ ಎಕ್ಸಿಸ್-125 ಮಾಡೆಲ್ಲಿನ ಸ್ಕೂಟರ್ ಒಂದನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ರಾಜೀನಾಮೆ ? ವರುಣಾ ಕ್ಷೇತ್ರದಲ್ಲಿ ಮತ್ತೆ ಕಣಕ್ಕೆ

ಕಳ್ಳರು ಇದೇ ಸ್ಕೂಟರ್‌ನಲ್ಲಿ ಬಂದು ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಕುರಿತು ವಾಹನದ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಕಳವಾದ ವಾಹನ ಮತ್ತು ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಕೈಗೊಂಡಿದ್ದಾರೆ.

Cargo Vehicle Stolen from Sirsi-Hubballi Highway Side; Thieves Flee, Abandoning a Scooter at the Scene

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories