ಡಿ.ಕೆ ಶಿವಕುಮಾರ್ ದೆಹಲಿ ಪ್ರಯಾಣ.. ನಾಳಿನ ಸಚಿವ ಸಂಪುಟ ಸಭೆಗೆ ಗೈರು
DK Shivakumar: ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಕೂಗು ಜೋರಾಗಿದೆ. ಸಚಿವಾಕಾಂಕ್ಷಿಗಳು ಮಂತ್ರಸ್ಥಾನಗಿಟ್ಟಿಸಿಕೊಳ್ಳಲು ಓಡಾಡುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆಯ ವಿಚಾರ ಕೂಡ ಹರಿದಾಡುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಸಂಪುಟ ಸಭೆ ಮಹತ್ವದ ಪಾತ್ರ ವಹಿಸಿತ್ತು.
ನಾಳೆ ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟ ಸಭೆ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ನಡೆಯಲಿದೆ. ಆದರೆ ಈ ಬಾರಿ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿ.ಕೆಶಿವಕುಮಾರ್ ಗೈರಾಗಲಿದ್ದಾರೆ ಎನ್ನಲಾಗಿದೆ. ಮೇಕೆದಾಟು ಯೋಜನೆಯ ಸಂಬಂಧ ಸುಪ್ರೀಂ ಕೋರ್ಟ್ನ ವಕೀಲರೊಂದಿಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಇಂದು ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.
ಇನ್ನು ಮೇಕೆದಾಟು ಯೋಜನೆಯನ್ನು ಎಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಡಿಕೆಶಿವಕುಮಾರ್ ರಾಜ್ಯ ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆಗಳಿಗೆ ಮೇಕೆದಾಟುವೊಂದೇ ಶಾಶ್ವತ ಪರಿಹಾರ ಎಂದು ನಂಬಿದ್ದಾರೆ. ಬೆಂಗಳೂರಿಗರಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವುದರ ಜೊತೆಯಲ್ಲಿ ವಿದ್ಯುತ್ ಉತ್ಪಾದನೆಗೂ ಈ ಯೋಜನೆ ಸಹಕಾರಿಯಾಗಲಿದೆ ಎಂದು ಡಿಕೆಶಿ ಹೇಳುತ್ತಲೇ ಬಂದಿದ್ದಾರೆ.
Also Read: ಗುಂಡಿ ಮುಚ್ಚಿಲ್ಲ- ಬಾಕಿ ಹಣ ಕೊಟ್ಟಿಲ್ಲ, ಸರಕಾರ ವಿರುದ್ದ ಜನಾಂದೋಲನ : ಆರ್.ಅಶೋಕ್
ಆದರೆ ತಮಿಳುನಾಡು ಈ ಯೋಜನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಹೀಗಾಗಿ ಮೇಕೆದಾಟು ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಸಮುದ್ರದ ನೀರು ಬಳಕೆ ಮಾಡಿ ಈ ಯೋಜನೆಯ ಲಾಭ ಪಡೆಯಲಾಗುತ್ತದೆ ಎಂದು ಮನವರಿಕೆ ಮಾಡಿದರೂ ಸಹ ತಮಿಳುನಾಡು ಇದನ್ನು ಕೇಳಿಸಿಕೊಳ್ಳುವ ತಾಳ್ಮೆ ತೋರುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಸದ್ಯ ಮೇಕೆದಾಟು ಯೋಜನೆಯ ಸಂಬಂಧ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ . ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರ ದೆಹಲಿ ಭೇಟಿ ಕೂಡ ಮಹತ್ವದ್ದು ಎನಿಸಿದೆ.
Also Read: MLA HY Meti passes away : ಮಾಜಿ ಸಚಿವ, ಹಾಲಿ ಶಾಸಕ ಹೆಚ್.ವೈ. ಮೇಟಿ ನಿಧನ



