Black Coffee : ಬ್ಲಾಕ್ ಕಾಫಿ ತಯಾರಿಸುವ ಸುಲಭ ವಿಧಾನ ಹೀಗಿದೆ ನೋಡಿ

Black Coffee : ಕೆಲಸ ಕಾರ್ಯಗಳ ನಡುವೆ ರಿಫ್ರೆಶ್ಮೆಂಟ್ ನ ಸಲುವಾಗಿ ಕಾಫಿ ಕುಡಿಯುವ ಅಭ್ಯಾಸ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅದರಲ್ಲೂ ಇತ್ತೀಚೆಗೆ ಆರೋಗ್ಯದ ದೃಷ್ಟಿಯಿಂದ ಮಿತವಾಗಿ ಸೇವಿಸುವ ಬ್ಲಾಕ್ ಕಾಫಿ ಮಾನಸಿಕ ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ನಾವು ಕುಡಿಯುವ ಸಾಧಾರಣ ಕಾಫಿಯಲ್ಲಿ ಹಾಲು, ಸಕ್ಕರೆ ಇವುಗಳನ್ನು ಸೇರಿಸುವುದರಿಂದ ಕ್ಯಾಲರಿ ಹೆಚ್ಚಾಗುವ ಮೂಲಕ ಆರೋಗ್ಯಕ್ಕೆ ಬ್ಲಾಕ್ ಕಾಫಿಯಷ್ಟು ಉತ್ತಮ ಹಾಗೂ ಪರಿಣಾಮಕಾರಿಯಲ್ಲ. ತೂಕವನ್ನು ನಿಯಂತ್ರಿಸಲು ಇದು ಸಹಕಾರಿ.

ಜೊತೆಗೆ ಕೆಲವು ಆರೋಗ್ಯದ ಸಮಸ್ಯೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ. ಇಷ್ಟೊಂದು ಪ್ರಯೋಜನಕಾರಿಯಾದ ಬ್ಲಾಕ್ ಕಾಫಿಯನ್ನು ಹೇಗೆ ತಯಾರಿಸಬಹುದು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ವಿಧಾನ 1.

ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ನಮ್ಮಲ್ಲೇ ಇರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಬ್ಲ್ಯಾಕ್ ಕಾಫಿ ತಯಾರಿಸುವ ವಿಧಾನ ಇದಾಗಿದೆ.
ಒಂದು ಕೆಟಲ್ ಅಥವಾ ಪಾತ್ರೆಯಲ್ಲಿ ನೀರನ್ನು ಕುದಿಸಿ. ನಿಮ್ಮ ಮಗ್ ಗೆ ಇನ್ಸ್ಟಂಟ್ ಕಾಫಿ ಪುಡಿ ಹಾಕಿ ನಂತರ ಕುದಿಸಿದ ಬಿಸಿ ನೀರನ್ನು ಅದಕ್ಕೆ ಸುರಿದು ಚೆನ್ನಾಗಿ ಮಿಶ್ರಣ ಮಾಡಿ ಸವಿಯಿರಿ.

ವಿಧಾನ 2.

ಫ್ರೆಂಚ್ ಪ್ರೆಸ್ ಬಳಸುವುದು

ಇದು ಅತ್ಯಂತ ಜನಪ್ರಿಯ ವಿಧಾನವಾಗಿದ್ದು ಉತ್ತಮವಾದ ಬ್ಲಾಕ್ ಕಾಫಿ ತಯಾರಿಸಲು ಅನುಸರಿಸಬಹುದಾದ ವಿಧಾನವಾಗಿದೆ. ನೀರನ್ನು 195-205°F (90-96°C) ತಾಪಮಾನದಲ್ಲಿ ಚೆನ್ನಾಗಿ ಕುದಿಸಿ ಹಾಗೆಯೇ ಬಿಡಿ.

(ಸಾಮಾನ್ಯವಾಗಿ 200ಗ್ರಾಂ ನೀರಿಗೆ 12.5ಗ್ರಾಂ ಕಾಫಿ ಪುಡಿ ಸೇರಿಸಿ) ಫ್ರೆಂಚ್ ಪ್ರೆಸ್ ಗೆ ಕಾಫಿ ಪುಡಿಯನ್ನು ಸೇರಿಸಿ ಅದಕ್ಕೆ ಬಿಸಿ ಮಾಡಿದ ನೀರನ್ನು ಸುರಿದು ನಿಧಾನವಾಗಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಇರಿಸಿ.

ಹಾಗೆಯೇ ಸುಮಾರು 4 ನಿಮಿಷಗಳ ಕಾಲ ಕಾಫಿ ಪುಡಿ ನೆನೆಯಲು ಬಿಡಿ. ತದನಂತರ ಕುದಿಸಿದ ಕಾಫಿಯಿಂದ ಪುಡಿಯನ್ನು ಬೇರ್ಪಡಿಸಲು ಪ್ಲಂಗರ್ ನ್ನು ನಿಧಾನವಾಗಿ ಒತ್ತಿರಿ. ಹಾಗೆಯೇ ಒಂದು ಕಾಫಿ ಕಪ್ ತೆಗೆದುಕೊಂಡು ಅದರಲ್ಲಿ ಕಾಫಿ ಸುರಿದು ಸವಿಯಿರಿ.

ವಿಧಾನ 3. ಕಾಫಿ ತಯಾರಿಸುವ ಉಪಕರಣದಲ್ಲಿ ಫಿಲ್ಟರ್ ನ್ನು ಸೇರಿಸಿ. ಅದಕ್ಕೆ ನಿಮಗೆ ಬೇಕಾದ ಪ್ರಮಾಣದಲ್ಲಿ ರುಬ್ಬಿದ ಕಾಫಿ ಪುಡಿ ಸೇರಿಸಿ. ನೀರನ್ನು ಹಾಕಿ ಉಪಕರಣವನ್ನು ಆನ್ ಮಾಡಿ ಅದು ಕುದಿಯುವ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಒಂದು ಮಗ್ ಗೆ ಅದನ್ನು ಸುರಿದು ಸವಿಯಿರಿ.

Black Coffee : ಪ್ರಮುಖ ಸಲಹೆಗಳು

  1. ಬ್ಲಾಕ್ ಕಾಫಿಯ ರುಚಿ ಬಹುಮಟ್ಟಿಗೆ ಕಾಫಿ ಬೀಜಗಳ ಗುಣಮಟ್ಟ ಹಾಗೂ ತಾಜಾತನದ ಜೊತೆಗೆ ಬಳಸುವ ನೀರಿನ ಮೇಲೆ ಹೆಚ್ಚು ಅವಲಂಬಿತವಾಗುತ್ತದೆ.
  2. ನೀರಿನ ತಾಪಮಾನ ಬಹು ಮುಖ್ಯವಾಗುತ್ತದೆ. ಕಾಫಿ ಪುಡಿಯೊಂದಿಗೆ 205°F (96°C)ಗಿಂತ ಬಿಸಿಯಾದ ನೀರನ್ನು ಬಳಸಬೇಡಿ. ಏಕೆಂದರೆ ಅತಿಯಾದ ಬಿಸಿ ಕಾಫಿಯನ್ನು ತುಂಬಾ ಕಹಿಯಾಗಿಸಿ ರುಚಿ ಹಾಳು ಮಾಡಬಹುದು.
  3. ಸರಿಯಾದ ಅನುಪಾತದಲ್ಲಿ ಕಾಫಿ ಪುಡಿ ಹಾಗೂ ನೀರನ್ನು ಬೆರೆಸಿ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories