ಶೀಘ್ರದಲ್ಲೇ ಡಿ.ಕೆ ಶಿವಕುಮಾರ್ ಈ ರಾಜ್ಯದ ಸಿಎಂ : ತುಳುನಾಡಿನ ದೈವದ ಭವಿಷ್ಯ

DK Shivakumar: ರಾಜ್ಯದಲ್ಲಿ ಸಿಎಂ ಬದಲಾವಣೆಯ ಮಾತು ಕೇಳಿ ಬರುತ್ತಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದು ರಾಜ್ಯಕ್ಕೆ ಡಿ.ಕೆ ಶಿವಕುಮಾರ್​ ನೂತನ ಮುಖ್ಯಮಂತ್ರಿಗಳಾಗಲಿದ್ದಾರೆ ಎಂಬ ಊಹಾಪೋಹಗಳು ಬಲಗೊಂಡಿರುವ ಬೆನ್ನಲ್ಲೇ ಇದೀಗ ದೈವದ ಭವಿಷ್ಯವೊಂದು ಎಲ್ಲೆಡೆ ವೈರಲ್ ಆಗಿದೆ.

ಆದಷ್ಟು ಬೇಗ ಡಿ.ಕೆ ಶಿವಕುಮಾರ್​ ಈ ನಾಡಿನ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ದೈವ ಭವಿಷ್ಯ ನುಡಿದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿ ಇದಾಗಿದ್ದು ಡಿ.ಕೆ ಶಿವಕುಮಾರ್​ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ತುಳುನಾಡಿನ ದೈವವೊಂದು ಈ ಉತ್ತರ ನೀಡಿದೆ.

ಈಗಾಗಲೇ ಭವಿಷ್ಯ ನುಡಿದಾಗಿದೆ. ಅವರಿಗೂ ತಿಳಿಸಲಾಗಿದೆ. ಅದರಂತೆ ನಡೆದುಕೊಳ್ಳಿ ಅಂತಾ ಅವರಿಗೂ ಸೂಚನೆ ನೀಡಲಾಗಿದೆ. ಅವರು ಆದಷ್ಟು ಬೇಗ ಈ ರಾಜ್ಯದ ಸಿಎಂ ಆಗಿ ಅಧಿಕಾರಕ್ಕೆ ಏರಲಿದ್ದಾರೆ ಎಂದು ಹೇಳಿದೆ.

ನನ್ನ ಮೇಲೆ ಅವರಿಗೆ ನಂಬಿಕೆ ಇದ್ದಲ್ಲಿ ಅವರನ್ನು ಆದಷ್ಟು ಬೇಗ ಸಿಎಂ ಸ್ಥಾನದಲ್ಲಿ ಕೂರಿಸುವ ಜವಾಬ್ದಾರಿ ನನ್ನದು ಎಂದು ದೈವ ನುಡಿಯುವ ಮೂಲಕ ಪ್ರಸಾದವನ್ನು ಡಿ.ಕೆ ಶಿವಕುಮಾರ್​ ಅಭಿಮಾನಿಯ ಕೈಗಿಟ್ಟಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಹೈಕಮಾಂಡ್​ ಒಪ್ಪಿಗೆ ನೀಡಿದರೆ ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೈಕಮಾಂಡ್​ಗೆ ಪರೋಕ್ಷ ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಹತ್ವದ ಕ್ಯಾಬಿನೇಟ್ ಸಭೆಯಲ್ಲಿ ಸಂಪುಟ ಸರ್ಜರಿ ಚರ್ಚೆ: ಮಂಗಳೂರಿನ ಅಲ್ಪಸಂಖ್ಯಾತರಿಗೆ ಸಿಹಿಸುದ್ದಿ

ಇತ್ತ ಡಿ.ಕೆ ಶಿವಕುಮಾರ್​ ವರ್ತನೆ ನೋಡಿದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್​ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಡಿಕೆಶಿಗೆ ಸಿಎಂ ಪಟ್ಟ ಒಲಿಯಬಹುದೆಂಬ ಅನುಮಾನ ಮೂಡುತ್ತಿದೆ.

ರಾಜ್ಯದಲ್ಲಿ ಮುಂದೆ ಏನಾಗುತ್ತೆ? ಕರುನಾಡಿಗೆ ಹೊಸ ಸಿಎಂ ಸಿಗುತ್ತಾರಾ ಅಥವಾ ಸಿದ್ದರಾಮಯ್ಯರೇ ಸಿಎಂ ಆಗಿ ಐದು ವರ್ಷಗಳ ಯಶಸ್ವಿ ಆಡಳಿತ ನಡೆಸುತ್ತಾರಾ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories