Delhi blast: ಬೆಂಗಳೂರಿನಲ್ಲಿ ಪಾಕಿಗಳ ಆಸ್ತಿ ಹರಾಜು: ಶತ್ರು ರಾಷ್ಟ್ರಕ್ಕೆ ಶಾಕ್ ಕೊಟ್ಟ ನರೇಂದ್ರ ಮೋದಿ

Delhi blast: ದೆಹಲಿಯಲ್ಲಿ ಮತ್ತೊಮ್ಮೆ ಕ್ರೌರ್ಯ ಮೆರೆದಿರೋ ಉಗ್ರರು ಆತ್ಮಾಹುತಿ ದಾಳಿ ನಡೆಸಿ 8 ಜನರನ್ನು ಬಲಿ ಪಡೆದಿದ್ದಾರೆ. ಇದಕ್ಕೆ ದಿಟ್ಟ ಉತ್ತರ ನೀಡುವುದಾಗಿ ಪ್ರಧಾನಿ ಮೋದಿ(Modi) ಘೋಷಿಸಿದ್ದು ಸಿದ್ಧತೆ ಕೂಡ ಆರಂಭವಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ದೇಶದ್ರೋಹಿ ಪಾಕಿಗಳಿಗೆ ಶಾಕ್ ನೀಡಲು ಮುಂದಾಗಿದೆ.

ಭಾರತದಲ್ಲಿರೋ ಪಾಕ್ ಪ್ರಜೆಗಳ ಆಸ್ತಿ ಮುಟ್ಟುಗೋಲು ಆರಂಭಿಸಿದೆ.‌ ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಗಳ ಹರಾಜು ಸಧ್ಯದಲ್ಲೇ ನಡೆಯಲಿದೆ. ಕಸ್ಟೋಡಿಯನ್ ಫಾರ್ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾ ಗುರುತಿಸಿದ ಐದಕ್ಕೂ ಹೆಚ್ಚು ಆಸ್ತಿಗಳನ್ನು ಬೆಂಗಳೂರು ಜಿಲ್ಲಾಢಳಿತ ಸದ್ಯದಲ್ಲೇ ಹರಾಜು ನಡೆಸಲಿದೆ.

1947 ರ ಭಾರತ ವಿಭಜನೆಯ ಸಂದರ್ಭದಲ್ಲಿ ರೂಪಿಸಿದ ಪಾಕ್ ಅಥವಾ ಶತ್ರು ರಾಷ್ಟ್ರದ ಆಸ್ತಿ ನಿರ್ವಹಣೆ ಪ್ರಾಧಿಕಾರ ಭಾರತದಲ್ಲಿರೋ ಪಾಕ್ ಪ್ರಜೆಗಳ ಆಸ್ತಿಯನ್ನು ಗುರುತಿಸುವ ಕೆಲಸ ಮಾಡುತ್ತದೆ.

Also Read: ಬೇರು ಸಹಿತ ಕಿತ್ತು ಹಾಕುತ್ತೇವೆ’ : ದೆಹಲಿ ಸ್ಫೋಟದ ಹಿಂದಿನ ರೂವಾರಿಗಳಿಗೆ ಪ್ರಧಾನಿ ಮೋದಿ ಖಡಕ್​ ವಾರ್ನಿಂಗ್​

ಬಳಿಕ ಇದನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರಗಳು ಹರಾಜು ನಡೆಸುತ್ತವೆ. ಬೆಂಗಳೂರಿನಲ್ಲಿ ಸದ್ಯ ಐದಕ್ಕೂ ಹೆಚ್ಚು ಪ್ರಾಪರ್ಟಿಗಳನ್ನು ಹರಾಜು ಮಾಡಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಗೆ ಸೂಚನೆ ನೀಡಿದೆ.

ಮರಿಯನ್ ಮಿರ್ಜಾ ಖಲೀಲಿ ಹೆಸರಿನಲ್ಲಿ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ 1,23,504 ಚದರ ಅಡಿಯ ಜಾಗ.‌ ಸದ್ಯ ಇದರಲ್ಲಿ ಪರಾಗ್ ಹೊಟೇಲ್, ಪೆಟ್ರೋಲ್ ಬಂಕ್ ನಿರ್ಮಾಣವಾಗಿದೆ. ಇದರ ಸದ್ಯದ ಮಾರುಕಟ್ಟೆ ದರ 300-400 ಕೋಟಿ.

ಇನ್ನು ಜೊಸೆಫೈನ್ ರಾಜಮ್ಮ ಕ್ಸೇವಿಯರ್ ಅವರಿಗೆ ಸೇರಿದ ಆಸ್ತಿ ವಿಕ್ಟೋರಿಯಾ ರಸ್ತೆಯಲ್ಲಿದೆ. 8845 ಚದರ ಅಡಿ ವಿಸ್ತೀರ್ಣದ ಈ ಭೂಮಿಯ ಈಗಿನ ಮಾರುಕಟ್ಟೆ ದರ‌ ಅಂದಾಜು‌20 ಕೋಟಿ.

ಮೈಕೆಲ್ ಥಾಮ್ ವಿಠ್ಠಲ ಎಂಬುವರಿಗೆ ಸೇರಿದ ಆಸ್ತಿ ವಿಠ್ಠಲ‌ಮಲ್ಯ ರಸ್ತೆಯಲ್ಲಿದ್ದು, ಇವರು ಚೀನಾ ಪೌರತ್ವ ಹೊಂದಿದ್ದಾರೆ. ಇವರ ಆಸ್ತಿಯ ಮೌಲ್ಯ 200 ಕೋಟಿ. ಅಬ್ದುಲ್ ಶುಕ್ಕುರ್ ಪಾಕ್ ಪೌರತ್ವ ಪಡೆದಿದ್ದು, ಇವರು ಕಲಾಸಿಪಾಳ್ಯದಲ್ಲಿ 2100 ಅಡಿಯ ಭೂಮಿ ಹೊಂದಿದ್ದಾರೆ. ಅದರ ಈಗಿನ ಮಾರುಕಟ್ಟೆ ದರ ಅಂದಾಜು 15 ಕೋಟಿ.

Also Read: ದೆಹಲಿಯಲ್ಲಿ ನಡೆದಿರುವುದು ಆತ್ಮಾಹುತಿ ದಾಳಿ ಶಂಕೆ: 3 ಗಂಟೆಗಳ ಕಾಲ ಕಾರಿನಿಂದಿಳಿಯದೇ ಕುಳಿತಿದ್ದ ಚಾಲಕ

ಸದ್ಯ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ನಡೆಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಸಿಗಲಿದೆ. ಹಾಗೂ ಶತ್ರು‌‌ದೇಶದ ಪ್ರಜೆಗಳಿಗೆ‌ಶಾಕ್ ಎದುರಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories