ಬಾಬಾರಾಮ್‌ ದೇವ್‌ ಹೈಕೋರ್ಟ್‌ ಛೀಮಾರಿ, ಚವನ್ ಪ್ರಾಶ್ ಉತ್ಪನ್ನ ಜಾಹೀರಾತಿಗೆ ಬ್ರೇಕ್‌

ದೆಹಲಿ: Chavan Prash product: ಆರ್ಯುವೇದ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದ ಯೋಗ ಗುರು ಬಾಬಾ ರಾಮದೇವ್​ ಅವರಿಗೆ ಸೇರಿರುವ ಪತಂಜಲಿ ಸಂಸ್ಥೆಗೆ ಭಾರೀ ಮುಖಭಂಗವಾಗಿದೆ.

ಪತಂಜಲಿ ಸಂಸ್ಥೆಗೆ ಸೇರಿರುವ ಉತ್ಪನ್ನವಾದ ಚವನ್ ಪ್ರಾಶ್ ಜಾಹೀರಾತನ್ನು ಯಾವುದೇ ವೇದಿಕೆಯಲ್ಲಿಯೂ ಪ್ರದರ್ಶನ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಅತ್ಯಂತ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಕೆ ಮಾಡಿ ಈ ಸಂಸ್ಥೆ ತಯಾರಿಸುತ್ತಿದ್ದ ಚವನ್​ಪ್ರಾಶ್​ ಬಗ್ಗೆ ದೆಹಲಿ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ಇದು ಚವನ್ ಪ್ರಾಶ್ ಉತ್ಪನ್ನಗಳಿಗೆ ಮಾಡಿದ ಅವಮಾನ ಎಂದು ಹೇಳುವ ಮೂಲಕ ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಹೀಗಾಗಿ ಯಾವುದೇ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಪತಂಜಲಿ ಸಂಸ್ಥೆಯ ಚವನ್​ ಪ್ರಾಶ್​ ಜಾಹೀರಾತನ್ನು ಪ್ರದರ್ಶಿಸುವಂತಿಲ್ಲ. ಇದು ಜನರನ್ನು ದಾರಿ ತಪ್ಪಿಸುತ್ತದೆ ಎಂದು ಹೇಳಿದೆ.

ಆರ್ಯುವೇದ ಉತ್ಪನ್ನಗಳನ್ನ ತಯಾರಿಸುತ್ತೇನೆ ಎಂದು ಹೇಳಿಕೊಳ್ಳುವ ಪತಂಜಲಿ ಸಂಸ್ಥೆಯ ಚವನ್​ಪ್ರಾಶ್​ ಉತ್ಪನ್ನಗಳ ಜಾಹೀರಾತಿನ ವಿರುದ್ಧ ಡಾಂಬರ್​ ಇಂಡಿಯಾ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ಆಲಿಸಿದ ದೆಹಲಿ ಹೈಕೋರ್ಟ್​ ಈ ಆದೇಶ ಹೊರಡಿಸಿದೆ.

Also Read: Delhi blast: ಬೆಂಗಳೂರಿನಲ್ಲಿ ಪಾಕಿಗಳ ಆಸ್ತಿ ಹರಾಜು: ಶತ್ರು ರಾಷ್ಟ್ರಕ್ಕೆ ಶಾಕ್ ಕೊಟ್ಟ ನರೇಂದ್ರ ಮೋದಿ

ಪತಂಜಲಿ ಸಂಸ್ಥೆಗೆ ಹೈಕೋರ್ಟ್‌ ಹೇಳಿದ್ದೇನು ?

ನ್ಯಾಯಮೂರ್ತಿ ತೇಜಸ್‌ ಕಾರಿಯಾ ಅವರಿದ್ದ ಪೀಠವು ಪತಂಜಲಿ ಉತ್ನಪ್ಪ ಮಾತ್ರವೇ ನಿಜವಾಗಿದ್ದು, ಉಳಿದವು ವಂಚನೆಯಿಂದ ಕೂಡಿವೆ ಎಂದ ಸಂದೇಶವನ್ನು ನೀಡಲಾಗಿದೆ. ಈ ಮೂಲಕ ಚ್ಯವನ್‌ ಪ್ರಾಶ್‌ ಉತ್ಪನ್ನಗಳನ್ನೇ ದೂಷಿಸುವ ಕಾರ್ಯ ಮಾಡಲಾಗಿದೆ.

ಜಾಹೀರಾತಿನಲ್ಲಿ ಬಾಬಾ ರಾಮ್‌ದೇವ್‌ ಅವರಂತಹ ಪ್ರಭಾವಿ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ಜನಸಾಮಾನ್ಯರು ಕೂಡ ಸತ್ಯವೆಂಬ ನಂಬಿ ಇತರ ಬ್ರ್ಯಾಂಡ್‌ ಗಳನ್ನು ನಿರ್ಲಕ್ಷಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಜಾಹೀರಾತುದಾರರು ತಮ್ಮ ಉತ್ಪನ್ನವನ್ನು ವೈಭವೀಕರಿಸಬಹುದು. ಆದರೆ ಇತರ ಉತ್ಪನ್ನಗಳನ್ನು ವಂಚನೆ ಎಂದು ಕರೆಯುವುದು ನ್ಯಾಯ ಸಮ್ಮತವಲ್ಲ. ನಿಮ್ಮ ಜಾಹೀರಾತು ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Also Read: ಬೇರು ಸಹಿತ ಕಿತ್ತು ಹಾಕುತ್ತೇವೆ’ : ದೆಹಲಿ ಸ್ಫೋಟದ ಹಿಂದಿನ ರೂವಾರಿಗಳಿಗೆ ಪ್ರಧಾನಿ ಮೋದಿ ಖಡಕ್​ ವಾರ್ನಿಂಗ್​

ಪತಂಜಲಿ ಸಂಸ್ಥೆಯ ಜಾಹೀರಾತು ಕುರಿತು ಡಾಬರ್‌ ಇಂಡಿಯಾ ಲಿಮಿಟೆಡ್‌ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆಯನ್ನು ಹೂಡಿತ್ತು. ಅಲ್ಲದೇ ಡಾಬರ್‌ ಚ್ಯವನ್‌ಪ್ರಾಶ ಉತ್ಪನ್ನದ ಜೊತೆಗೆ ಇಡೀ ಚ್ಯವನ್‌ ಪ್ರಾಶ ಉತ್ಪನ್ನದ ಮಾರುಕಟ್ಟೆಯ ಘಟನೆತೆಗೆ ಧಕ್ಕೆಯಾಗಿದೆ ಎಂದು ಡಾಬರ್‌ ಸಂಸ್ಥೆ ಆರೋಪಿಸಿತ್ತು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories