ಅಕ್ರಮ ಗೋ ಹತ್ಯೆ ದಂಧೆಯ ಹಣ ಕಾಂಗ್ರೆಸ್​ ಚುನಾವಣಾ ಬೊಕ್ಕಸಕ್ಕೆ : ಶಾಸಕ ಸುನೀಲ್​ ಕುಮಾರ್​ ಗಂಭೀರ ಆರೋಪ

Money of illegal: ಅಕ್ರಮ ಗೋ ಹತ್ಯೆಯ ದಂಧೆಗೆ ಪರೋಕ್ಷವಾಗಿ ಸಾಥ್​ ನೀಡುವ ಕಾಂಗ್ರೆಸ್​ ಪಕ್ಷವು ಈ ಹಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್​ ಕುಮಾರ್​(V.Sunil Kumar) ಗಂಭೀರ ಆರೋಪ ಮಾಟಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು ಕಾರ್ಕಳದ ಶಿರ್ಲಾಲಿನಲ್ಲಿ ಹೈನುಗಾರ್ತಿ ಮಹಿಳೆಗೆ ಮಾರಕಾಸ್ತ್ರ ತೋರಿಸಿ ದನ ಕಳ್ಳತನ, ನಲ್ಲೂರಿನಲ್ಲಿರುವ ಅಕ್ರಮ ಕಸಾಯಿಖಾನೆ,ತೆಳ್ಳಾರಿನಲ್ಲಿ ಕಾಡುಪ್ರಾಣಿ ಮಾಂಸ ಪತ್ತೆ ಇದೆಲ್ಲವೂ ರಾಜ್ಯದಲ್ಲಿನ ಕರಾಳ ಕಾನೂನು ವ್ಯವಸ್ಥೆಯ ಪ್ರತಿಬಿಂಬ ಎಂದು ಗುಡುಗಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಶಾಮೀಲಾಗಿರುವವರು ಸಾಮಾನ್ಯವಾಗಿ ಕಾಂಗ್ರೆಸ್​ ಕಾರ್ಯಕರ್ತರು. ಚುನಾವಣೆಯಲ್ಲಿ ಕಾಂಗ್ರೆಸ್​ ಪರ ಕೆಲಸ ಮಾಡಿರುವವರೇ ಈ ಪ್ರಕರಣದಲ್ಲಿ ಆರೋಪಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಆರೋಪಿಗಳಿಂದ ಕಾಂಗ್ರೆಸ್​ನ ಚುನಾವಣಾ ಖಾತೆಗೆ ಭರಪೂರ ಹಣ ಸಂದಾಯವಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

Also Read: ನವೆಂಬರ್‌ ಕ್ರಾಂತಿ : ಹೈಕಮಾಂಡ್​ ಮೇಲೆ ರಾಜ್ಯ ‘ಕೈ’ ನಾಯಕರ ಒತ್ತಡದ ತಂತ್ರ, ರಾಜಣ್ಣ ಯೂಟರ್ನ್‌

ರಾಜ್ಯದಲ್ಲಿರುವ ಕಾಂಗ್ರೆಸ್​ ಸರ್ಕಾರವು ಇಂತಹ ಅಕ್ರಮಗಳ ಪರವಾಗಿದೆ ಎಂಬುದನ್ನು ತಿಳಿದ ಕಿಡಿಗೇಡಿಗಳು ಯಾವುದೇ ಭಯವಿಲ್ಲದೇ ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಇದರಿಂದಾಗಿಯೇ ಮನೆ ಮನೆಗಳಲ್ಲಿ ಗೋ ಕಳ್ಳತನ, ಪ್ರಾಣಿ ವಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಹಟ್ಟಿಯಲ್ಲಿರುವ ಗೋವು, ಕಾಡಿನಲ್ಲಿರುವ ಅಮಾಯಕ ಮೂಖಪ್ರಾಣಿಗಳನ್ನೂ ಬಿಡುತ್ತಿಲ್ಲ. ಇವರನ್ನೆಲ್ಲ ಕಾಂಗ್ರೆಸ್​ ಸರ್ಕಾರವೇ ಪೋಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಮತ್ತು ಜಿಲ್ಲಾಡಳಿತ ಇಂತಹ ಹೇಯ ಕೃತ್ಯಗಳಲ್ಲಿ ತೊಡಗಿಕೊಂಡವರ ಮಟ್ಟ ಹಾಕಬೇಕಿದೆ. ಇಲ್ಲವಾದಲ್ಲಿ ಬಿಜೆಪಿ ಉಗ್ರ ಹೋರಾಟಕ್ಕೆ ನಾಂದಿ ಹಾಡಲಿದೆ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories