ಕಂಬಳ : 24 ಗಂಟೆ ಧ್ವನಿವರ್ಧಕ ಬಳಕೆ, ಸಬ್‌ಜೂನಿಯರ್‌ ಸ್ಪರ್ಧೆ ರದ್ದು

ಮಂಗಳೂರು : ಕರಾವಳಿಯ ಜಾನಪದ ಕ್ರೀಡೆ ಎನಿಸಿರುವ ಕಂಬಳ (Kambala) ಕ್ರೀಡೆಗೆ ಸರಕಾರ ಕೆಲವೊಂದು ನಿಯಮಗಳು ತೊಡಕಾಗುತ್ತಿದೆ. ಅದ್ರಲ್ಲೂ ಧ್ವನಿವರ್ಧಕ ಬಳಕೆಗೆ ಸರಕಾರ ನಿಯಂತ್ರಣ ಹೇರಿರುವುದು ಕಂಬಳ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ನಿರಂತರ 24 ಗಂಟೆಗಳ ಕಾಲ ಧ್ವನಿವರ್ಧಕ ಬಳಕೆಗೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ತುಳುನಾಡಿನಲ್ಲಿ ನಡೆಯುವ ಕಂಬಳ ಕ್ರೀಡೆ ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ಕಳೆದ ಐದು ದಶಕಗಳಿಂದಲೂ ಶನಿವಾರ ಕಂಬಳ ಆರಂಭಗೊಂಡು 24 ಗಂಟೆಗಳ ಕಾಲ ನಿರಂತರವಾಗಿ ಕಂಬಳ ಕ್ರೀಡೆ ನಡೆಯುತ್ತಿದೆ. ಕಂಬಳ ಕ್ರೀಡೆಯಲ್ಲಿ ಧ್ವನಿವರ್ಧಕ ಹೆಚ್ಚು ಬಳಕೆಯಾಗುತ್ತದೆ. ಹೀಗಾಗಿ ದಿನ 24 ಗಂಟೆಗಳ ಕಾಲ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್‌ ಮನವಿ ಮಾಡಿದೆ.

ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್‌ ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಹಾಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

Kambala : ಕಂಬಳದಲ್ಲಿ ಸಬ್‌ಜೂನಿಯರ್‌ ಸ್ಪರ್ಧೆ ರದ್ದು

ಕಂಬಳ ಕ್ರೀಡೆಯಲ್ಲಿ ಸೀನಿಯರ್‌, ಜೂನಿಯರ್‌ ಹಾಗೂ ಸಬ್‌ ಜೂನಿಯರ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಸಬ್‌ ಜೂನಿಯರ್‌ ವಿಭಾಗದಲ್ಲಿ ಕೋಣಗಳ ಸ್ಪರ್ಧೆ ನಡೆಯೋದಿಲ್ಲ.

ಸಣ್ಣ ಪ್ರಾಯದ ಕೋಣಗಳನ್ನು ಓಟಕ್ಕೆ ಅವಕಾಶ ನೀಡಬಾರದು ಎಂದು ಪಶುಪಾಲನಾ ಇಲಾಖೆ ಆಯೋಜಕರಿಗೆ ಸೂಚನೆ ನೀಡಿದೆ. ಹೀಗಾಗಿ ಜೂನಿಯರ್‌ ವಿಭಾಗದಲ್ಲಿ ಕೋಣಗಳ ಸ್ಪರ್ಧೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಕಂಬಳ ಅಸೋಸಿಯೇಷನ್‌ ಮಾಹಿತಿ ನೀಡಿದೆ.

Kambala 24-hour loudspeaker use, sub-junior competition cancelled

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories